Advertisement

ಕ್ರಾನಿಕ್‌ ಓಟಿಟಿಸ್‌ ಮೀಡಿಯಾ

07:36 PM Feb 22, 2020 | mahesh |

ದೀರ್ಘ‌ಕಾಲಿಕವಾಗಿ ಉಂಟಾಗುವ ಕ್ರಾನಿಕ್‌ ಒಟಿಟಿಸ್‌ ಮೀಡಿಯಾವನ್ನು ಸಂಕ್ಷಿಪ್ತವಾಗಿ ಸಿಒಎಂ ಎನ್ನಲಾಗುತ್ತದೆ. ಇದು ನಮ್ಮ ದೇಶದಲ್ಲಿ ಅತಿ ಸಾಮಾನ್ಯವಾಗಿರುವ ಶ್ರವಣ ವೈಕಲ್ಯವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಪ್ರತೀ 1,000 ಜನಸಂಖ್ಯೆಗೆ 46ರಂತೆಯೂ, ನಗರ ಪ್ರದೇಶಗಳಲ್ಲಿ ಪ್ರತೀ ಸಾವಿರ ಮಂದಿಯಲ್ಲಿ 16 ಜನರಂತೆಯೂ ಕಂಡುಬರುತ್ತದೆ. ಕ್ರಾನಿಕ್‌ ಒಟಿಟಿಸ್‌ ಮೀಡಿಯಾ ಅನಾರೋಗ್ಯದ ಬಗ್ಗೆ ಮಾಹಿತಿ ಇಲ್ಲಿದೆ.

Advertisement

 ನಮ್ಮ ದೇಶದಲ್ಲಿ ಅತಿ ಸಾಮಾನ್ಯವಾಗಿ ಕಂಡುಬರುವ ಶ್ರವಣ ವೈಕಲ್ಯ.
 ಮಧ್ಯ ಕಿವಿಯ ಕುಹರ, ಯೂಸ್ಟೆಶಿಯನ್‌ ಕೊಳವೆ ಮತ್ತು ಮಾಸ್ಟಾಯ್ಡ ಏರ್‌ ಅಂಗಾಂಶಗಳ ಸಹಿತ ಇಡೀ ಮಧ್ಯ ಕಿವಿ ಅಥವಾ ಈ ಯಾವುದಾದರೊಂದು ಭಾಗದಲ್ಲಿ ಕಂಡುಬರುವ ದೀರ್ಘ‌ಕಾಲೀನ ಉರಿಯೂತವೇ ಕ್ರಾನಿಕ್‌ ಒಟಿಟಸ್‌ ಮೀಡಿಯಾ.
 ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ಈ ಕಾಯಿಲೆಯು ಅತ್ಯಂತ ಸಾಮಾನ್ಯವಾಗಿ ಕಂಡುಬರುತ್ತದೆ. ಗ್ರಾಮೀಣ ಜನಸಮುದಾಯದಲ್ಲಿ ಶ್ರವಣ ವೈಕಲ್ಯಕ್ಕೆ ಅತ್ಯಂತ ಸಾಮಾನ್ಯ ಕಾರಣ ಇದಾಗಿರುತ್ತದೆ. ಎಲ್ಲ ವಯೋಮಾನದವರಲ್ಲಿ ಮತ್ತು ಸ್ತ್ರೀ-ಪುರುಷರಿಬ್ಬರಲ್ಲಿಯೂ ಇದು ಸಮಾನವಾಗಿ ಕಂಡುಬರುತ್ತದೆ.

ಸಿಒಎಂ ಉಂಟಾಗಲು ದಾರಿ ಮಾಡಿಕೊಡುವ ರೋಗಪೂರ್ವ ಸ್ಥಿತಿಗಳು ಹೀಗಿವೆ:
 ಹಠಾತ್‌ ಅಥವಾ ಅಲ್ಪಕಾಲೀನ ಒಟಿಟಿಸ್‌ ಮೀಡಿಯಾ ಉಂಟಾದಾಗ ಅದಕ್ಕೆ ಸಮರ್ಪಕವಾಗಿ ಚಿಕಿತ್ಸೆ ನೀಡದಿರುವುದು.
 ಮೂಗು, ನ್ಯಾಸೊಫಾರಿಂಕ್ಸ್‌ ಅಥವಾ ಓರೊಫಾರಿಂಕ್ಸ್‌ ಗಳ ಸೋಂಕು.
 ಕ್ಷಯ ರೋಗ.
 ಕಳಪೆ ನೈರ್ಮಲ್ಯ.

ಟ್ಯುಬೊಟೈಂಪಾನಿಕ್‌ ವಿಧ
 ಇದರಲ್ಲಿ ಸಂಕೀರ್ಣ ಸಮಸ್ಯೆಗಳು ಉಂಟಾಗುವ ಅಪಾಯ ಕಡಿಮೆ ಇರುವುದರಿಂದ ಇದನ್ನು ಸುರಕ್ಷಿತ ವಿಧ ಎಂದೂ ಕರೆಯಲಾಗುತ್ತದೆ.

ಇದರ ಸಾಮಾನ್ಯ ರೋಗ ಲಕ್ಷಣಗಳು:
 ಕಿವಿ ಸ್ರಾವ
 ಸ್ರಾವವು ಸಿಂಬಳದಂತಿರುತ್ತದೆ, ದುರ್ವಾಸನೆ ಇರುವುದಿಲ್ಲ, ರಕ್ತ ಇರುವುದಿಲ್ಲ, ಸ್ರಾವದ ಪ್ರಮಾಣ ಹೆಚ್ಚಿರುತ್ತದೆ ಮತ್ತು ಯುಆರ್‌ಟಿಐ ಎಪಿಸೋಡ್‌ ಸಮಯದಲ್ಲಿ ಸ್ರಾವ ಹೆಚ್ಚಿರುತ್ತದೆ.

Advertisement

ಕಿವುಡು
 ವಾಹಕ ಗುಣ ಹೊಂದಿರುತ್ತದೆ ಮತ್ತು ಸುಮಾರು 40 ಡೆಸಿಬಲ್‌ಗ‌ಳಷ್ಟಿರುತ್ತದೆ.

ಅಟ್ಟಿಕೊಅಂಟ್ರಾಲ್‌ ವಿಧ
 ಇದರಲ್ಲಿ ಸಂಕೀರ್ಣ ಸಮಸ್ಯೆಗಳು ಉಂಟಾಗುವ ಸಾಧ್ಯತೆಯು ಹೆಚ್ಚು ಇರುವುದರಿಂದ ಇದನ್ನು ಸಿಎಸ್‌ಒಎಂನ ಅಸುರಕ್ಷಿತ ಅಥವಾ ಅಪಾಯಕಾರಿ ವಿಧ ಎಂದು ಕರೆಯಲಾಗುತ್ತದೆ.
 ಚರ್ಮವು ತಪ್ಪಾದ ಜಾಗದಲ್ಲಿ ಬೆಳವಣಿಗೆ ಕಾಣುವ ಕೊಲೆಸ್ಟಿಯಾಟೊಮಾದೊಂದಿಗೆ ಈ ಕಾಯಿಲೆಯು ಸಂಬಂಧ ಹೊಂದಿರುತ್ತದೆ.
 ಕೊಲೆಸ್ಟಿಯಾಟೊಮಾದ ಅತ್ಯಂತ ಕಳವಳಕಾರಿ ಗುಣವೆಂದರೆ, ಅದು ಎಲುಬುಗಳನ್ನು ಕ್ಷಯಿಸಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತದೆ. ಜತೆಗೆ, ಸನಿಹದ ಸಂರಚನೆಗಳಿಗೂ ಸೋಂಕನ್ನು ಪಸರಿಸುವ ಮೂಲಕ ಇದು ತೀವ್ರ ಪ್ರಮಾಣದ ಶ್ರವಣ ಶಕ್ತಿ ನಷ್ಟ ಮತ್ತು ಸಂಬಂಧ ಪಟ್ಟ ಸಂಕೀರ್ಣ ಸಮಸ್ಯೆಗಳಿಗೆ ಕಾರಣವಾಗಬಹುದಾಗಿದೆ.

ಇದರ ಸಾಮಾನ್ಯ ರೋಗ ಲಕ್ಷಣಗಳು:
 ಸ್ರಾವ:
– ಸ್ವಲ್ಪ ಮಾತ್ರ ಇರುತ್ತದೆ, ದುರ್ವಾಸನೆ ಹೊಂದಿದ್ದು, ಕೀವು ಸಹಿತವಾಗಿರುತ್ತದೆ. ರಕ್ತ ಗುರುತು ಕೂಡ ಇರುತ್ತದೆ, ಯುಆರ್‌ಟಿಐ ಸಂದರ್ಭದಲ್ಲಿ ಹೆಚ್ಚುವುದಿಲ್ಲ.

ಕಿವುಡು
 ಸುರಕ್ಷಿತ ವಿಧಕ್ಕೆ ಹೋಲಿಸಿದರೆ ಇದರಲ್ಲಿ ಶ್ರವಣ ಶಕ್ತಿ ನಷ್ಟ ಹೆಚ್ಚು, ರೋಗಿಯ ದೈನಂದಿಕ ಬದುಕಿನಲ್ಲಿ ಅಡ್ಡಿ ಅಡಚಣೆಗಳನ್ನು ಉಂಟು ಮಾಡುತ್ತದೆ.

ಈ ಕಾಯಿಲೆಯನ್ನು ವೈದ್ಯಕೀಯವಾಗಿ ಹೀಗೆ ವರ್ಗೀಕರಿಸಲಾಗುತ್ತದೆ:
ಟ್ಯುಬೊಟೈಂಪಾನಿಕ್‌ ವಿಧ ಅಥವಾ ಸುರಕ್ಷಿತ ಕಾಯಿಲೆ
 ಅಟ್ಟಿಕೊಅಂಟ್ರಾಲ್‌ ವಿಧ ಅಥವಾ ಅಸುರಕ್ಷಿತ ಕಾಯಿಲೆ

ಸುರಕ್ಷಿತ ಮತ್ತು ಅಸುರಕ್ಷಿತ ವಿಧ: ಒಟೊಸ್ಕೊಪಿಕ್‌ ತಪಾಸಣೆ
ಅಸುರಕ್ಷಿತ ಕಿವಿ ಸುರಕ್ಷಿತ ಕಿವಿ
ಚಿಕಿತ್ಸೆ
ಸಿಒಎಂನಿಂದ ಬಳಲುತ್ತಿರುವ ರೋಗಿಗೆ ಎರಡು ವಿಧಾನಗಳ ಮೂಲಕ ಚಿಕಿತ್ಸೆ ನೀಡಬಹುದಾಗಿದೆ.
ಸಿಒಎಂ:
 ವೈದ್ಯಕೀಯ
 ಶಸ್ತ್ರಚಿಕಿತ್ಸಾತ್ಮಕ: ನಿಖರ ಚಿಕಿತ್ಸೆ

ಸುರಕ್ಷಿತ ಕಿವಿಯ ಚಿಕಿತ್ಸೆಯಲ್ಲಿ ಶಸ್ತ್ರಚಿಕಿತ್ಸೆಗೆ ಮುನ್ನ ಹಚ್ಚುವ ಮತ್ತು ಬಾಯಿಯ ಮೂಲಕ ಸೇವಿಸುವ ಔಷಧಗಳ ಮೂಲಕ ಕಿವಿಯನ್ನು ಶುಷ್ಕವಾಗಿಸುವುದು ಗುರಿಯಾಗಿರುತ್ತದೆ. ಕಿವಿಯು ಶುಷ್ಕವಾದ ಬಳಿಕ ಮೈರಿಂಜೊಪ್ಲಾಸ್ಟಿ ಅಥವಾ ಟೈಂಪಾನೊಪ್ಲಾಸ್ಟಿಯನ್ನು ಶ್ರವಣ ಶಕ್ತಿ ನಷ್ಟವನ್ನು ಆಧರಿಸಿ ನಡೆಸಲಾಗುತ್ತದೆ.

ಶಸ್ತ್ರಚಿಕಿತ್ಸೆಗೆ ಮುನ್ನ ನಡೆಸಲಾದ ತಪಾಸಣೆಯಲ್ಲಿ ಕಂಡುಬಂದಂತೆ ಸೆಂಟ್ರಲ್‌ ಪಫೊìರೇಶನ್‌. ಇದನ್ನು ಆಟೊ ಟೆಂಪೊರಿಲ್ಸ್‌ ಫೇಸಿಯಾ ಕಸಿ ಮೂಲಕ ಮುಚ್ಚಲಾಯಿತು. ಇದು ಪರದೆಯಂತೆ ಕೆಲಸ ಮಾಡಿ, ಇದರ ಮೇಲೆ ಹೊಸ ಮೆಂಬ್ರೇನ್‌ ಬೆಳೆಯುತ್ತದೆ.

 ಅಸುರಕ್ಷಿತ ಕಿವಿಯ ಪ್ರಕರಣಗಳಲ್ಲಿ ಮಾಸ್ಟಾಯ್ಡ ಕಿವಿಯ ಎಕ್ಸ್‌ಪ್ಲೊರೇಶನ್‌ ಚಿಕಿತ್ಸೆಯಾಗಿದ್ದು, ಇದಕ್ಕೆ ಶುಷ್ಕ ಕಿವಿ ಇರಬೇಕಾದ ಅಗತ್ಯ ಇಲ್ಲ.
 ಶಸ್ತ್ರಚಿಕಿತ್ಸೆಯನ್ನು ಎಂಡೊಸ್ಕೋಪ್‌ ಉಪಯೋಗಿಸಿ, ಪರ್‌ ಮೆಟಲ್‌ ವಿಧಾನದ ಮೂಲಕ ನಡೆಸಬಹುದಾಗಿದೆ. ಇಲ್ಲಿ ಗಾಯ ನಡೆಸಲಾಗುವುದಿಲ್ಲ. ಇದಲ್ಲದೆ ಪೋಸ್ಟ್‌ ಔರಾ ಮಾರ್ಗದ ಮೂಲಕ ಸೂಕ್ಷ್ಮ ದರ್ಶಕ ಉಪಯೋಗಿಸಿಯೂ ನಡೆಸಬಹುದಾಗಿದ್ದು, ಇಲ್ಲಿ ಪೋಸ್ಟ್‌ ಔರಲ್‌ ಇನ್ಸಿಶನ್‌ ನೀಡಲಾಗುತ್ತದೆ.

ಕೆಲವು ಲಕ್ಷಣಗಳು ಸಂಕೀರ್ಣ ಸಮಸ್ಯೆಗಳು ಉಂಟಾಗುವುದರ ಸೂಚಕವಾಗಬಹುದಾಗಿದ್ದು, ಇವು ಕಂಡುಬಂದರೆ ತತ್‌ಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಅಂತಹ ಲಕ್ಷಣಗಳೆಂದರೆ:
 ತಲೆನೋವು
 ಕಿವಿ ಮತ್ತು ಸುತ್ತಮುತ್ತ ಬಾವು
 ಜ್ವರ
 ಕಿವಿನೋವು
 ತಲೆ ತಿರುಗುವಿಕೆ
 ನಡುಕ
 ಬಾಯಿ ಓರೆಯಾಗುವುದು

 ಅಪಾಯದ ಚಿಹ್ನೆಗಳು ಇಲ್ಲದೆ ಇದ್ದಾಗಲೂ ಕಿವಿ ಸೋರುವಿಕೆ ಇರುವ ಮತ್ತು ಕೇಳುವಿಕೆ ಕಡಿಮೆ ಇರುವ ಎಲ್ಲ ರೋಗಿಗಳು ಕಾಯಿಲೆಯ ಆರಂಭಿಕ ಹಂತದಲ್ಲಿಯೇ ವೈದ್ಯಕೀಯ ನೆರವನ್ನು ಪಡೆಯಬೇಕು. ಇದರಿಂದ ಸಮಸ್ಯೆ ನಿವಾರಣೆಯಾಗಿ ಕೇಳುವಿಕೆ ಸಹಜ ಸ್ಥಿತಿಗೆ ಬರುವ ಸಾಧ್ಯತೆ ಹೆಚ್ಚಿರುತ್ತದೆ.

 ಸಿಒಎಂ ಶ್ರವಣ ಸಾಮರ್ಥ್ಯ ನಷ್ಟ ಉಂಟುಮಾಡಬಹುದಾದರೂ ಅದು ಗುಣಪಡಿಸಬಹುದಾದ ಒಂದು ಕಾಯಿಲೆಯಾಗಿದೆ. ಆದರೆ ನಿರ್ಲಕ್ಷ್ಯ ಮಾಡುವುದರಿಂದ ಗಂಭೀರ ಸಹ ಸಂಕೀರ್ಣತೆಗಳನ್ನು ಉಂಟು ಮಾಡಬಲ್ಲುದಾಗಿದೆ. ಆದ್ದರಿಂದ

ಸಮಸ್ಯೆ ಕಂಡು ಬಂದ ತತ್‌ಕ್ಷಣ ಆದಷ್ಟು ಬೇಗನೆ ವೈದ್ಯಕೀಯ ನೆರವು ಪಡೆಯಬೇಕು.

ಡಾ| ಪಾಂಡುರಂಗ ಕಾಮತ್‌,
ಕನ್ಸಲ್ಟಂಟ್‌ ಇಎನ್‌ಟಿ ಕೆಎಂಸಿ ಆಸ್ಪತ್ರೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next