Advertisement

ಇಂದು ಲಿಂಗದೀಕ್ಷೆ ಪಡೆಯುತ್ತಿರುವ ಕ್ರೈಸ್ತ ಸಾಫ್ಟ್ ವೇರ್‌ ಉದ್ಯಮಿ

11:56 PM Dec 05, 2021 | Team Udayavani |

ಬೆಂಗಳೂರು: ಹನ್ನೆರಡನೇ ಶತಮಾನದಲ್ಲಿ ತಮ್ಮ ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿರುವ ಬಸವಣ್ಣನವರ ವಚನಗಳು, ಶರಣರ ತತ್ವಗಳು ಹಾಗೂ ಜೀವನ ಶೈಲಿಯಿಂದ ಪ್ರೇರಣೆ ಪಡೆದಿರುವ ವಿದೇಶಿ ಉದ್ಯಮಿಯೊಬ್ಬರು ಸೋಮವಾರ (ಇಂದು) ಬೆಂಗಳೂರಿನ ರಾಜಾಜಿ ನಗರದ ಬಸವ ಮಂಟಪದಲ್ಲಿ ಲಿಂಗ ದೀಕ್ಷೆ ಪಡೆದುಕೊಳ್ಳುತ್ತಿದ್ದಾರೆ.

Advertisement

ಅಮೆರಿಕ ಮೂಲದ ಸಾಫ್ಟ್ ವೇರ್‌ ಉದ್ಯಮಿ ಸ್ಟೀವ್‌ ರೋಚ್‌ ಅವರು ಬಸವಣ್ಣನವರ ಸಮಾ ನತೆಯ ಸಮಾಜದ ಪರಿಕಲ್ಪನೆ, ಹೆಣ್ಣು – ಗಂಡಿನ ನಡುವಿನ ಸಮಾನತೆ, ಜಾತಿ ರಹಿತ ಸಮಾಜ ನಿರ್ಮಾಣ, “ವಸುಧೈವ ಕುಟುಂಬಕಂ’ ತತ್ವಗಳಿಂದ ಆಕರ್ಷಿತರಾಗಿ ಲಿಂಗದೀಕ್ಷೆಗೆ ನಿರ್ಧರಿಸಿದ್ದಾರೆ.

ವಚನಗಳೇ ಪ್ರೇರಣೆ
ಸ್ಟೀವ್‌ ರೋಚ್‌ ಮೊದಲಿನಿಂದಲೂ ಅಧ್ಯಾತ್ಮದ ಕಡೆಗೆ ಒಲವು ಹೊಂದಿದ್ದು, ಮೂಲತಃ ಕ್ರಿಶ್ಚಿಯನ್‌ ಆಗಿದ್ದಾರೆ. ಇತರ ಧರ್ಮಗಳ ಜೀವನ ಪದ್ಧತಿ ಹಾಗೂ ಆಚರಣೆಗಳ ಕುರಿತು ಹುಡುಕಾಟ ನಡೆಸಿದ ಅವರು, ಉತ್ತರ ಅಮೆರಿಕದಲ್ಲಿರುವ ಬಸವ ಕೇಂದ್ರದ ಸಂಪರ್ಕಕ್ಕೆ ಬಂದಿದ್ದಾರೆ. ಅಲ್ಲಿನ ಬಸವ ಕೇಂದ್ರದ ಮುಖ್ಯಸ್ಥರಾಗಿರುವ ಶ್ರೀಶೈಲ್‌ ಹಾದಿಮನಿ ಅವರೊಂದಿಗೆ ಒಡನಾಟ ಬೆಳೆದು, ಲಿಂಗ ಪೂಜೆಯ ಮಹತ್ವ, ಲಿಂಗ ಪೂಜೆಯಿಂದ ಆಗುವ ಪರಿಣಾಮಗಳ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

ಯಾರು ಈ ಸ್ಟೀವ್‌ ರೋಚ್‌?
ಇಂಗ್ಲೆಂಡ್‌ನ‌ಲ್ಲಿ ಹುಟ್ಟಿರುವ ಇವರು ಕೆನಡಾದ ಪ್ರತಿಷ್ಠಿತ ವಾಟರ್‌ ಲೂ ವಿಶ್ವವಿದ್ಯಾನಿಲಯದಿಂದ ಸಿಸ್ಟಮ್‌ ಡಿಸೈನ್‌ನಲ್ಲಿ ಬಿಎಸ್‌ಸಿ ಪದವಿ ಪಡೆದು ಕೊಂಡಿದ್ದಾರೆ. ಅನಂತರ ಸ್ಯಾಪ್‌ ಸಾಫ್ಟ್ ವೇರ್‌ ಕಂಪೆನಿಯಲ್ಲಿ ಉದ್ಯೋಗ ಆರಂಭಿಸಿದರು. ಬಳಿಕ ಅಮೆರಿಕದಲ್ಲಿ ತಮ್ಮದೇ ಆದ ಎಲ್‌ಎಸ್‌ಐ ಎಂಬ ಸಂಸ್ಥೆಯನ್ನು ಆರಂಭಿಸಿದರು. ಪ್ರಸ್ತುತ ಸ್ಕೈ ಸೆಂಡ್‌ ಸಾಫ್ಟ್ ವೇರ್‌ ಸಂಸ್ಥೆಯ ಚೇರ್ಮನ್‌ ಆಗಿದ್ದಾರೆ. ಇಂಗ್ಲೆಂಡ್‌, ಅಮೆರಿಕ, ಜರ್ಮನಿ, ಕೆನಡಾ ದೇಶಗಳನ್ನು ಸುತ್ತಿರುವ ಅವರು ಪ್ರಸ್ತುತ ಅಮೆರಿಕದ ನಾರ್ಥ್ ಕೆರೊಲಿನ್‌ ರಾಜ್ಯದಲ್ಲಿ ಕುಟುಂಬದ ಜತೆಗೆ ನೆಲೆಸಿದ್ದಾರೆ.

ಇದನ್ನೂ ಓದಿ:ಲಾವಾ ಸ್ಫೋಟಕ್ಕೆ 13 ಸಾವು : ಇಂಡೋನೇಷ್ಯಾದ ಪೂರ್ವಭಾಗದಲ್ಲಿರುವ ಲುಮಾಜಂಗ್‌ನಲ್ಲಿ ಘಟನೆ

Advertisement

ಉದ್ಯಮ ವಿಸ್ತರಣೆ
ಸ್ಟೀವ್‌ ಲಿಂಗದೀಕ್ಷೆ ಪಡೆದು ಬಸವ ತತ್ವ ಪಾಲನೆಯ ಜತೆಗೆ ರಾಜ್ಯದಲ್ಲಿ ತಮ್ಮ ಉದ್ಯಮ ವನ್ನೂ ವಿಸ್ತರಿಸಲು ಮುಂದಾಗಿದ್ದಾರೆ. ಬೆಂಗಳೂರು ಹಾಗೂ ದಾವಣಗೆರೆಯಲ್ಲಿ ತಮ್ಮ ಸಂಸ್ಥೆಯ ಆರ್‌ ಆ್ಯಂಡ್‌ ಡಿ ಕೇಂದ್ರ ತೆರೆಯಲು ನಿರ್ಧರಿಸಿದ್ದಾರೆ.

ಲಿಂಗ, ಜಾತಿ, ಬಣ್ಣದ ಹೆಸರಿ
ನಲ್ಲಿ ತಾರ ತಮ್ಯ ಮಾಡದಿರುವುದು. ಎಲ್ಲರನ್ನೂ ಸಮಾನರನ್ನಾಗಿ ಕಾಣುವ ಬಸವಣ್ಣನವರ ತತ್ವ ನನಗೆ ಆಕರ್ಷಣೀಯ ವಾಯಿತು. ಈ ತತ್ವವನ್ನು ಎಲ್ಲರೂ ಅಳವಡಿಸಿಕೊಂಡರೆ ಸಮಾಜದಲ್ಲಿ ಯಾವುದೇ ತಾರತಮ್ಯ ಇರುವುದಿಲ್ಲ.
ಸ್ಟೀವ್‌ ರೋಚ್‌, ಲಿಂಗ ದೀಕ್ಷೆ
ಪಡೆಯಲಿರುವ ಅಮೆರಿಕ ಉದ್ಯಮಿ

ಒಂದೂವರೆ ವರ್ಷದಿಂದ ಸ್ಟೀವ್‌ ರೋಚ್‌ ಪರಿಚಯವಾಗಿದ್ದು, ಬಸವಣ್ಣನವರ ವಚನಗಳನ್ನು ಕೇಳಿ, ಸಮಾನತೆಯ ಸಮಾಜ ಸಾರುವ ಅವು ಗಳ ಅರ್ಥ ಕೇಳಿ ಪ್ರೇರಿತರಾಗಿದ್ದಾರೆ. ಲಿಂಗ ಪೂಜೆಯ ಮಹತ್ವ ತಿಳಿದುಕೊಂಡು, ಲಿಂಗದೀಕ್ಷೆ ಪಡೆಯುತ್ತಿದ್ದಾರೆ.
ಶ್ರೀಶೈಲ್‌ ಹಾದಿಮನಿ,
ಉತ್ತರ ಅಮೆರಿಕ ಬಸವ ಕೇಂದ್ರದ ಅಧ್ಯಕ್ಷ.

 -ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next