Advertisement
ಏನದು ಪ್ರಕರಣ?: 2012ಕ್ಕೂ ಮೊದಲೇ ಭಾರತೀಯ ಸೇನೆಗೆ ಅಗಸ್ಟಾ ವೆಸ್ಟ್‌ಲ್ಯಾಂಡ್‌ನಿಂದ 197 ಲಘು ಸಾಮ ರ್ಥ್ಯದ ಯುದ್ಧ ವಿಮಾನಗಳನ್ನು ಖರೀದಿಸಲು ಟೆಂಡರ್ ಕರೆಯಲಾಗಿತ್ತು. ಆ ಟೆಂಡರ್ ಗೆಲ್ಲಲು ಯತ್ನಿಸಿದ್ದ ಅಗಸ್ಟಾ ವೆಸ್ಟ್‌ಲ್ಯಾಂಡ್‌ನ ಮಧ್ಯವರ್ತಿಯಾಗಿದ್ದವನು ಗೈಡೋ ಹಾಶ್ಕ್. ಈತ ಮೈಕಲ್‌ನ ಜೊತೆಗಾರ. 2013ರಲ್ಲಿ ಹಾಶ್ಕ್ನನ್ನು ಬಂಧಿಸಿದ್ದ ಇಟಲಿಯ ತನಿಖಾ ಸಂಸ್ಥೆ, ಹಗರಣದ ಅಮೂಲ್ಯ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಆ ದಾಖಲೆಗಳ ಆಧಾರದಲ್ಲಿ ಕೇಸ್ ದಾಖಲಿಸಿಕೊಂಡಿದ್ದ ಸಿಬಿಐ, 3,000 ಕೋಟಿ ರೂ.ಗಳ ಈ ವ್ಯವಹಾರದಲ್ಲಿ 34 ಕೋಟಿ ರೂ.ಗಳ ಲಂಚದ ಬೇಡಿಕೆಯಿಟ್ಟ ಆರೋಪ ಹೊತ್ತಿದ್ದ ಅಂದಿನ ಸೇನಾ ಬ್ರಿಗೇಡಿಯರ್ ವಿ.ಎಸ್. ಸೈನಿ ಅವರನ್ನು ಪ್ರಮುಖ ಆರೋಪಿಯನ್ನಾಗಿಸಿತ್ತು. ಆದರೆ, ಇದೆಲ್ಲಾ ಆಗುವ ಮೊದಲೇ ವಿವಿಐಪಿ ಕಾಪ್ಟರ್ ಹಗರಣ 2012ರಲ್ಲೇ ಸ್ಫೋಟಗೊಂಡ ಹಿನ್ನೆಲೆಯಲ್ಲಿ, ಲಘು ಸಾಮ ರ್ಥ್ಯದ ಹೆಲಿಕಾಪ್ಟರ್ ಟೆಂಡರ್ ಅನ್ನು ಭಾರತ ಸರ್ಕಾರ ಕೈಬಿಟ್ಟಿತ್ತು. ಆದರೆ, ಸಿಬಿಐನಲ್ಲಿ ಈ ಪ್ರಕರಣ ಇನ್ನೂ ಬಾಕಿ ಉಳಿದಿದ್ದು, ಮೈಕಲ್ ಪ್ರಕರಣದ ನಂತರ ಆ ಪ್ರಕರಣಕ್ಕೂ ಜೀವ ಬಂದಂತಾಗಿದೆ. Advertisement
ಮೈಕಲ್ ವಿಚಾರಣೆಗೆ ಮತ್ತೂಂದು ಆಯಾಮ
09:00 AM Dec 09, 2018 | |
Advertisement
Udayavani is now on Telegram. Click here to join our channel and stay updated with the latest news.