Advertisement

ನ್ಯೂಜಿಲ್ಯಾಂಡ್‌ ಪ್ರಧಾನಿಯಾಗಿ ಕ್ರಿಸ್‌ ಹಿಪ್‌ಕಿನ್ಸ್‌

12:01 AM Jan 26, 2023 | Team Udayavani |

ವೆಲಿಂಗ್ಟನ್‌: ನ್ಯೂಜಿಲ್ಯಾಂಡ್‌ನ‌ 41ನೇ ಪ್ರಧಾನಿ ಯಾಗಿ ಕ್ರಿಸ್‌ ಹಿಪ್‌ಕಿನ್ಸ್‌ ಬುಧವಾರ ಅಧಿಕಾರದ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Advertisement

ಹಿಪ್‌ಕಿನ್ಸ್‌ 44 ವರ್ಷ ವಯಸ್ಸಿನ ಯುವ, ಉತ್ಸಾಹಿ ರಾಜಕಾರಣಿ ಯಾಗಿದ್ದು, ದೇಶದ ಆರ್ಥಿಕತೆಯನ್ನು ಸ್ಥಿರತೆಗೆ ತರುವ ಮತ್ತು ಹಣದುಬ್ಬರ ವನ್ನು ಸಮರ್ಥವಾಗಿ ಎದುರಿಸುವ ವಾಗ್ಧಾನವನ್ನು ಜನತೆಗೆ ಮಾಡಿದ್ದಾರೆ.

ಹಿಪ್‌ಕಿನ್ಸ್‌ ಅವರು ನ್ಯೂಜಿಲೆಂಡ್‌ನ ಕೋವಿಡ್ -19 ಕಾರ್ಯತಂತ್ರವನ್ನು ಮುನ್ನಡೆಸಿದ ಸಚಿವರಾಗಿ ಖ್ಯಾತಿಯನ್ನು ಗಳಿಸಿದ್ದರು.

ವಾರಾಂತ್ಯದಲ್ಲಿ ಆಡಳಿತಾರೂಢ ಲೇಬರ್ ಪಕ್ಷದ ಕಾಕಸ್‌ನಲ್ಲಿ ದೇಶವನ್ನು ಮುನ್ನಡೆಸಲು ಬಡ್ತಿ ನೀಡಲು ಸರ್ವಾನುಮತದ ಬೆಂಬಲವನ್ನು ಪಡೆದರು ಮತ್ತು ಈಗ ಅಕ್ಟೋಬರ್‌ನಲ್ಲಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯ ವನ್ನು ಎದುರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next