Advertisement

“ವಿದಾಯ ಪಂದ್ಯ’ದಲ್ಲಿ ಗೇಲ್‌ ಸ್ಫೋಟ

10:01 AM Aug 16, 2019 | sudhir |

ಪೋರ್ಟ್‌ ಆಫ್ ಸ್ಪೇನ್‌: ಜಾಗತಿಕ ಕ್ರಿಕೆಟಿನ ಸಿಡಿಲಬ್ಬರದ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ವಿಸ್ಫೋಟಕ ಇನ್ನಿಂಗ್ಸ್‌ ಮೂಲಕ ತಮ್ಮ ಕೊನೆಯ ಇನ್ನಿಂಗÕನ್ನು ಸ್ಮರಣೀಯಗೊಳಿಸಿದ್ದಾರೆ. ಭಾರತದೆದುರಿನ ಬುಧವಾರದ ಅಂತಿಮ ಏಕದಿನ ಪಂದ್ಯದಲ್ಲಿ ಗೇಲ್‌ 41 ಎಸೆತಗಳಿಂದ 72 ರನ್‌ ಬಾರಿಸಿ ವೆಸ್ಟ್‌ ಇಂಡೀಸಿಗೆ ಭರ್ಜರಿ ಆರಂಭ ಒದಗಿಸಿದರು.

Advertisement

ಆದರೆ ಇದು ತಮ್ಮ ಅಂತಿಮ ಪಂದ್ಯವೆಂದು ಗೇಲ್‌ ಅಧಿಕೃತವಾಗಿ ಘೋಷಿಸಿಲ್ಲ. ಪಂದ್ಯದ ಬಳಿಕ ನಿವೃತ್ತಿ ಘೋಷಣೆ ಮಾಡುವ ಸಾಧ್ಯತೆ ಇದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸುತ್ತಿರುವ ವಿಂಡೀಸ್‌ 22ನೇ ಓವರ್‌ ವೇಳೆ ಮಳೆ ಬಂದು ಪಂದ್ಯ ನಿಂತಾಗ 2 ವಿಕೆಟಿಗೆ 158 ರನ್‌ ಪೇರಿಸಿತ್ತು. ಶೈ ಹೋಪ್‌ 19, ಶಿಮ್ರನ್‌ ಹೆಟ್‌ಮೈರ್‌ 18 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಸರಣಿಯನ್ನು ಸಮಬಲಕ್ಕೆ ತರಬೇಕಾದರೆ ಹೋಲ್ಡರ್‌ ಪಡೆ ಈ ಪಂದ್ಯವನ್ನು ಗೆಲ್ಲಲೇಬೇಕಿದೆ.

10.5 ಓವರ್‌ಗಳಲ್ಲಿ 115 ರನ್‌
ಎಡಗೈ ಆರಂಭಿಕರಾದ ಕ್ರಿಸ್‌ ಗೇಲ್‌-ಎವಿನ್‌ ಲೆವಿಸ್‌ ಸ್ಫೋಟಕ ಆಟದ ಮೂಲಕ ಭಾರತದ ಬೌಲಿಂಗ್‌ ಮೇಲೆ ಸವಾರಿ ಮಾಡಿದರು. ಭುವನೇಶ್ವರ್‌ ಅವರ ಮೊದಲ ಓವರನ್ನು ಗೇಲ್‌ ಮೇಡನ್‌ ಮಾಡಿದರೂ ಅನಂತರ ನೈಜ ಆಟಕ್ಕೆ ಕುದುರಿದರು. 8 ಬೌಂಡರಿ, 5 ಸಿಕ್ಸರ್‌ ಸಿಡಿಸಿ ಅಬ್ಬರಿಸಿದ್ರು. ಲೆವಿಸ್‌ ಗಳಿಕೆ 29 ಎಸೆತಗಳಿಂದ 43 ರನ್‌ (5 ಬೌಂಡರಿ, 3 ಸಿಕ್ಸರ್‌). ಚಹಲ್‌ ಮತ್ತು ಖಲೀಲ್‌ ಅಹ್ಮದ್‌ ಈ ವಿಕೆಟ್‌ ಉರುಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next