Advertisement

Chow Chow Bath Review; ಹರೆಯದ ಮನಸುಗಳ ಖಾಸ್‌ಬಾತ್‌

12:22 PM Mar 17, 2024 | Team Udayavani |

ಚಿತ್ರರಂಗಕ್ಕೆ ಬರುವ ಹೊಸ ತಂಡಗಳು ಒಂದಷ್ಟು ಹೊಸದನ್ನು ಪ್ರಯತ್ನಿಸುತ್ತವೆ. ಈ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸುತ್ತವೆ. ಈ ವಾರ ತೆರೆಕಂಡಿರುವ “ಚೌ ಚೌ ಬಾತ್‌’ ಚಿತ್ರ ಕೂಡಾ ಇಂತಹ ಸಿಂಪಲ್‌ ಕಥೆಯನ್ನು ಮಜವಾಗಿ ಹೇಳುವ ಮೂಲಕ ಗಮನ ಸೆಳೆಯುತ್ತದೆ.

Advertisement

ಮೂರು ಪ್ರೇಮಕಥೆಗಳನ್ನು ಹೇಳುತ್ತಾ ಸಾಗುವ ಚಿತ್ರ “ಚೌ ಚೌ ಬಾತ್‌’. ಈ ಹಾದಿಯಲ್ಲಿ ನಿರ್ದೇಶಕ ಚೇತನ್‌ ಒಂದಷ್ಟು ತಮಾಷೆ, ಸ್ವಾರಸ್ಯಕರ ಅಂಶ, ಹರೆಯದ ಪಯಣದ ಏರಿಳಿತ, ಬದುಕು…. ಹೀಗೆ ಹಲವು ಅಂಶಗಳನ್ನ ಹೇಳುತ್ತಾ ಪ್ರೇಕ್ಷಕರನ್ನು ಕಥೆಯ ಜೊತೆಗೆ ಹೆಜ್ಜೆ ಹಾಕುವಂತೆ ಮಾಡಿದ್ದಾರೆ. ಸಿನಿಮಾ ತುಂಬಾ ಜಾಲಿಯಾಗಿ ಸಾಗಲು ಚಿತ್ರಕಥೆಯಲ್ಲಿನ ನಿರ್ದೇಶಕರ ಕೈ ಚಳಕವೂ ಕಾರಣ.

ಮುಖ್ಯವಾಗಿ ಇದೊಂದು ಯೂತ್‌ಫ‌ುಲ್‌ ಸಬೆjಕ್ಟ್. ಒಂದು ಸರಳವಾದ ಕಥೆಯನ್ನು ನೀಟಾಗಿ ಹೇಳಲು ಏನೆಲ್ಲಾ ಮಾಡಬಹುದೋ, ಅವೆಲ್ಲವನ್ನು ನಿರ್ದೇಶಕರು ಮಾಡಿದ್ದಾರೆ. ಚಿತ್ರದಲ್ಲಿ ಸುಷ್ಮಿತಾ ಭಟ್‌, ಪ್ರಕರ್ಷ ಶಾಸ್ತ್ರಿ, ಗೀತಾ ಬಂಗೇರ, ಸಾಗರ್‌ ಗೌಡ, ಧನುಶ್‌, ಸಂಕಲ್ಪ, ಅರುಣಾ ಬಾಲರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಪ್ರತಿಯೊಬ್ಬರು ಪಾತ್ರವಾಗಿ ಇಷ್ಟವಾಗುತ್ತಾರೆ. ಒಂದು ಪ್ರಯತ್ನವಾಗಿ “ಚೌ ಚೌ ಬಾತ್‌’ ರುಚಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next