Advertisement

ಚೌಡೇಶ್ವರಿದೇವಿ ಮಹಾರಥೋತ್ಸವ

07:50 AM Jan 23, 2019 | |

ಕಂಪ್ಲಿ: ಸಮೀಪದ ನಂ. 10 ಮುದ್ದಾಪುರ ಗ್ರಾಮದ ಚೌಡೇಶ್ವರಿ ದೇವಿಯ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು. ಕಬ್ಬು, ಬಾಳೆದಿಂಡು, ಹೂವಿನಹಾರ, ಉತ್ಸವ ಮೂರ್ತಿ, ಕಳಸ, ಧ್ವಜಗಳಿಂದ ಅಲಂಕರಿಸಿದ್ದ ಚೌಡೇಶ್ವರಿ ದೇವಿ ರಥೋತ್ಸವ ದೇವಸ್ಥಾನ ಬಳಿಯ ತೇರಿನ ಮನೆಯಿಂದ ಆರಂಭವಾಗಿ ಗ್ರಾಮದ ಪ್ರಮುಖ ರಸ್ತೆಯ ಮೂಲಕ ಪಾದಗಟ್ಟೆಯವರೆಗೆ ಸಾಗಿ, ಅಲ್ಲಿಂದ ತೇರಿನ ಮನೆಯ ಹತ್ತಿರ ಪುನಃ ಬಂದು ಸೇರಿತು. ರಥ ಸಾಗುವ ಗ್ರಾಮದ ರಾಜಬೀದಿಯ ಇಕ್ಕೆಲಗಳಲ್ಲಿ ನೆರೆದಿದ್ದ ಸಕಲ ಸದ್ಭಕ್ತರು ತೇರಿಗೆ ಹೂ, ಹಣ್ಣುಗಳನ್ನು ಎಸೆದು ಹರಕೆ ತೀರಿಸಿದರು.

Advertisement

ರಥೋತ್ಸವದಲ್ಲಿ ತಾಷ, ರಾಂಡೋಲ್‌, ಡೊಳ್ಳು, ನಂದಿಕೋಲು, ಮಂಗಳವಾದ್ಯದವರು ದೇವಾಂಗ ಸಮಾಜದವರು, ಗ್ರಾಮದವರು ಮತ್ತು ಪರ ಊರಿನ ಸಕಲ ಸದ್ಭಕ್ತರು, ಶ್ರದ್ಧಾ ಭಕ್ತಿಯಿಂದ ಭಾಗವಹಿಸಿದ್ದರು.

ಇದಕ್ಕೂ ಮೊದಲು ಚೌಡೇಶ್ವರಿದೇವಿಯ ಗಂಗೆಸ್ಥಳ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು. ನಂತರ ಗ್ರಾಮದ ಸಕಲ ಸದ್ಭಕ್ತರು ಹೊಸ ವಸ್ತ್ರಗಳನ್ನು ಧರಿಸಿ ದೇವಿಗೆ ಹೂ ಹಣ್ಣು,ಕಾಯಿ ಹಾಗೂ ನೈವೇದ್ಯ ಸಮರ್ಪಿಸಿದರು. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮತ್ತು ಮಹಾರಥೋತ್ಸವದಲ್ಲಿ ಸ್ಥಳೀಯರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸದ್ಭಕ್ತರು ಭಕ್ತಿಯಿಂದ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next