ಲಖನೌ: ಉತ್ತರಪ್ರದೇಶದ ಗೋರಖ್‌ಪುರದಲ್ಲಿ ವ್ಯಕ್ತಿಯೊಬ್ಬ ತನ್ನ ತಂದೆಯ ಕುತ್ತಿಗೆಯನ್ನೇ ಸೀಳಿ, ರುಂಡ ಕತ್ತರಿಸಿ, ದೇಹವನ್ನು ತುಂಡರಿಸಿ, ಸೂಟ್‌ಕೇಸ್‌ಗೆ ತುಂಬಿರುವ ಭೀಕರ ಘಟನೆ ವರದಿಯಾಗಿದೆ.
ಪ್ರಕರಣ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸೂರಜ್ ಕುಂಡ್ ಕಾಲೋನಿಯ ನಿವಾಸಿ ಮಧುರ್ ಗುಪ್ತ ಹಾಗೂ ಅವರ ಮಗ ಪ್ರಿನ್ಸ್ ಗುಪ್ತ ನಡುವೆ ಹಣಕಾಸು ವಿವಾದ ಸಂಬಂಧಿಸಿದಂತೆ ಶನಿವಾರ ವಾಗ್ವಾದ ನಡೆದಿತ್ತು.
ಈ ವೇಳೆ ಪ್ರಿನ್ಸ್ ತನ್ನ ತಂದೆಯನ್ನೇ ಹತ್ಯೆಗೈದು, ದೇಹ ತುಂಡರಿಸಿ ಅದರ ವಿಲೇವಾರಿಯನ್ನೂ ಮಾಡಿದ್ದಾನೆ. ಆರೋಪಿಯ ಸಹೋದರನಾದ ಪ್ರಶಾಂತ್ ಗುಪ್ತ, ಮನೆಯಲ್ಲಿ ರಕ್ತದ ಕಲೆಗಳು ಹಾಗೂ ಟ್ರಾಲಿ ಬ್ಯಾಗ್ ಇಲ್ಲದ್ದನ್ನು ಗಮನಿಸಿ, ಶಂಕೆಗೊಳಗಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ವೇಳೆ ಘಟನೆ ಬಹಿರಂಗಗೊಂಡಿದೆ.