Advertisement

ಬಿಳಿ ಅನ್ನ ನೋಡಿದ್ದೀರಿ.. ನಿಮಗೆ ಕಪ್ಪು ಅಕ್ಕಿ-ಅನ್ನದ ಬಗ್ಗೆ ಗೊತ್ತಾ?

09:55 AM Nov 14, 2021 | Team Udayavani |

ಬೆಂಗಳೂರು: ಇದುವರೆಗೂ ನಾವು ಬಿಳಿಅಕ್ಕಿ, ಬಿಳಿಅನ್ನ ನೋಡಿದ್ದೇವು, ಆದರೆ ಈಗ ಕಪ್ಪು ಭತ್ತ ಮತ್ತು ಕಪ್ಪುಅಕ್ಕಿ ನೋಡೋ ಸುಯೋಗ. ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಬೆಳೆ ಅಭಿವೃದ್ಧಿ ವಿಭಾಗ ಕೃಷಿ ಮೇಳದಲ್ಲಿ ಪ್ರದರ್ಶನಕ್ಕೆ ಇರಿಸಿದ್ದು ರೈತರನ್ನು ಆಕರ್ಷಿಸುತ್ತಿದೆ.

Advertisement

ಈಗಾಗಲೇ ಬೆಂಗಳೂರು ಕೃಷಿ ವಿವಿಯ ಬೆಳೆ ಅಭಿವೃದ್ಧಿ ವಿಭಾಗ ಪ್ರಾಚೀಲ ಕಾಲದ ಭತ್ತದ ತಳಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಭಿನ್ನತಳಿಯ ಸಂರಕ್ಷಣೆ ಜತೆಗೆ ರೈತರ ಪರಿಚಯಿಸಬೇಕು ಎಂಬ ಉದ್ದೇಶ ಕೂಡ ಇದರಲ್ಲಿದೆ. ಹೀಗಾಗಿ 325ಕ್ಕೂ ಅಧಿಕ ಪ್ರಾಚೀನ ಭತ್ತದ ತಳಿಗಳನ್ನು ಸಂರಕ್ಷಣೆ ಮಾಡಿದ್ದು ಅವುಗಳಲ್ಲಿ ಕೆಲವು ತಳಿಗಳನ್ನು ಕೃಷಿ ಮೇಳದ ಪ್ರದರ್ಶನ ವಿಭಾಗದಲ್ಲಿ ಇರಿಸಿದೆ.

ಇದರಲ್ಲಿ ಕಪ್ಪು ಭತ್ತ ಮತ್ತು ಕಪ್ಪು ಅಕ್ಕಿ ಹೊಂದಿರುವ ಬಿದಿಗಿ ಕಣ್ಣಪ್ಪ ಭತ್ತದ ತಳಿ ಕೂಡ ಸೇರಿದೆ. ಬಿದಿಗಿ ಕಣ್ಣಪ್ಪ ಭತ್ತ ಮೂಲತಃ ಕಾಸರಗೋಡು ಮೂಲ ದ್ದಾಗಿದೆ. ಕಾಸರಗೋಡಿನ ರೈತ ಬಿಳೇರಿ ಸತ್ಯನಾರಾಯಣ ಎಂಬುವವರು ಈ ಅಪರೂಪದ ತಳಿಯನ್ನು ಬೆಳೆದಿದ್ದರು. ಈ ಭತ್ತದ ಬೀಜವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾ ನಿಲಯದ ಬೆಳೆ ಅಭಿವೃದ್ಧಿ ವಿಭಾಗದ ಡಾ.ಪ್ರಕಾಶ್‌ ಅವರು ತಂದು ಮತ್ತಷ್ಟು ಅಭಿವೃದ್ಧಿ ಪಡಿಸಿದ್ದಾರೆ.

ಸುಮಾರು ಐದರಿಂದ ಐದೂವರೆ ಅಡಿ ಎತ್ತರ ಬೆಳೆ ಯುವ ಈ ಭತ್ತ ಒಂದು ಎಕರೆಗೆ ಸಾವಯವ ಕೃಷಿ ಮಾಡಿ ದರೆ ಸುಮಾರು 14-16 ಕ್ವಿಂಟಲ್‌ ಬೆಳೆಯಬಹುದಾಗಿದೆ. ಐದು ತಿಂಗಳ ಬೆಳೆಯಿದಾಗಿದ್ದು 150 ದಿನದ ನಂತರ ಬೆಳೆ ಕಟಾವಿಗೆ ಬರಲಿದೆ. ಜೂನ್‌ ಅಥವಾ ಜುಲೈ ತಿಂಗಳಲ್ಲಿ ಭತ್ತ ನಾಟಿ ಮಾಡಿದರೆ ಉತ್ತಮ. ಬೇಸಿಗೆಯಲ್ಲಿ ಈ ಬೆಲೆಯನ್ನು ಬೆಳೆಯಲು ಆಗುವುದಿಲ್ಲ. ನಾಟಿ ಮಾಡಿದರೂ ಇಳುವರಿ ಬರುವುದಿಲ್ಲ.

ಈ ಭತ್ತದಲ್ಲಿದೆ ರೋಗ ನಿರೋಧಕ ಶಕ್ತಿ: ಕಪ್ಪು ಭತ್ತದಲ್ಲಿ ಜೀವರೋಗ ನಿರೋಧಕ ಶಕ್ತಿ ಅಧಿಕವಾಗಿರಲಿದೆ. ಭತ್ತದ ಹೊಳಪಿನಲ್ಲಿ ಕಪ್ಪಿದ್ದರೂ ಅದನ್ನು ಸವಿದರೆ ಆರೋಗ್ಯಕ್ಕೆ ಸಂಜೀವಿನಿ ಇದ್ದಂತೆ. ಅತಿಸಾರ, ಅತಿಬೇಧಿ, ಕೆಮ್ಮು ಸೇರಿ ಇನ್ನಿತರ ಸಮಸ್ಯೆಗಳಿಗೆ ಕಪ್ಪು ಅಕ್ಕಿ ರಾಮ ಬಾಣವಾಗಲಿದೆ. ಎದೆಯ ಹಾಲು ಹೆಚ್ಚಳಕ್ಕೂ ಈ ಅಕ್ಕಿಯ ಸೇವೆ ಉತ್ತಮ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಯದ ಬೆಳೆ ಅಭಿವೃದ್ಧಿ ವಿಭಾಗದ ಅಧ್ಯಾಪಕರು ಮಾಹಿತಿ ನೀಡುತ್ತಾರೆ.

Advertisement

ಈಗಾಗಲೇ ಬೆಂಗಳೂರು ಕೃಷಿ ವಿವಿಯು ರಾಜಮುಡಿ, ಬಿಳಿ ಮದುಡಿ, ಜಿರಿಗೆ ಭತ್ತ ಸೇರಿದಂತೆ ಸ್ಥಳೀಯ ತಳಿಗಳನ್ನು ಸಂರಕ್ಷಿಸುವುದರ ಜತೆಗೆ ಅವುಗಳ ತಳಿಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಹೆಜ್ಜೆಯಿರಿಸಿದೆ. ಸ್ಥಳೀಯ ತಳಿಗಳಲ್ಲಿ ಒಂದೊಂದು ರೀತಿ ಪೋಷಕಾಂಶಗಳು ಇರುತ್ತವೆ. ಇಂತಹ ತಳಿಯ ಅಕ್ಕಿಗಳನ್ನು ಜನರು ಸೇವಿಸಿದಾಗ ಉತ್ತಮ ಪೋಷಕಾಂಶಗಳು ದೊರೆಯಲಿ ಎಂಬುವುದು ವಿವಿಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:- ಪ್ರಧಾನಿ ಮೋದಿ ದೇಶವನ್ನು ರಕ್ಷಿಸಲು ಅಸಮರ್ಥ ಎಂದು ಮಣಿಪುರ ದಾಳಿ ತೋರಿಸುತ್ತದೆ: ರಾಹುಲ್

ಭತ್ತಕ್ಕಾ ಗಿ ರೈತರು ಸಂಪರ್ಕಿಸಬಹುದು “ಬಿದಿಗಿ ಕಣ್ಣಪ್ಪ ಭತ್ತದ ತಳಿಯ ಬೀಜವನ್ನು ಪ್ರಾಯೋಗಿಕವಾಗಿ ರೈತರಿಗೆ ನೀಡುವ ಉದ್ದೇಶ ಕೂಡ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಬೆಳೆ ಅಭಿವೃದ್ಧಿ ವಿಭಾಗಕ್ಕೆ ಇದೆ. ಈಗಾಗಲೇ ಬೇರೆ ಬೇರೆ ಜಿಲ್ಲೆಯ ಸುಮಾರು 10ಕ್ಕೂ ಅಧಿಕ ರೈತರು ಕೃಷಿ ಮೇಳಕ್ಕೆ ಭೇಟಿ ನೀಡಿದ ವೇಳೆ ಈ ಭತ್ತದ ಬೀಜಕ್ಕಾಗಿ ಬೇಡಿಕೆ ಸಲ್ಲಿಸಿದ್ದಾರೆ. ಬೇಡಿಕೆ ಸಲ್ಲಿಸಿರುವ ರೈತರಿಗೆ 1 ಕೆ.ಜಿ. ಭತ್ತ ನೀಡುವ ಆಲೋಚನೆ ಕೃಷಿ ವಿವಿಯ ಬೆಳೆ ಅಭಿವೃದ್ಧಿ ವಿಭಾಗಕ್ಕೆ ಇದೆ. ರೈತರು ಕೂಡ ಬೆಂಗಳೂರು ವಿವಿಯ ಬೆಳೆ ಅಭಿವೃದ್ಧಿ ವಿಭಾಗವನ್ನು ಸಂಪರ್ಕಿಸಬಹುದಾಗಿದೆ.

“ಬಿಳಿಭತ್ತದಲ್ಲಿ ಅಥವಾ ಅಕ್ಕಿಯಲ್ಲಿ ಜೀವನಿರೋಧಕ ಅಂಶಗಳು ಹೆಚ್ಚು ಇರುವುದಿಲ್ಲ. ರಾಗಿ ಕೂಡ ಕಪ್ಪು ಇರುತ್ತದೆ. ಆದರೆ ಅದನ್ನು ಸೇವನೆ ಮಾಡಿವುದು ಆರೋಗ್ಯಕ್ಕೆ ಉತ್ತಮ ಇದೇ ರೀತಿಯಲ್ಲಿ ಈ ಭತ್ತ ಕೂಡ. ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಭತ್ತದ ತಳಿ ಪ್ರದರ್ಶನಕ್ಕೆ ಇರಿಸಲಾಗಿದೆ.” – ಡಾ.ಪ್ರಕಾಶ್‌, ಪ್ರಾಧ್ಯಾಪಕರು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಬೆಳೆ ಅಭಿವೃದ್ಧಿ ವಿಭಾಗ.

Advertisement

Udayavani is now on Telegram. Click here to join our channel and stay updated with the latest news.

Next