Advertisement

ಒಳ ವೈರುಧ್ಯ ಮೀರಿ ವೀರಶೈವರು ಸಂಘಟಿತರಾಗಿ

07:06 PM Apr 09, 2021 | Team Udayavani |

ಚಿಕ್ಕಮಗಳೂರು: ವೀರಶೈವ ಸಮುದಾಯದ ಜನರು ತಮ್ಮಲ್ಲಿರುವ ಒಳವೈರುಧ್ಯಗಳನ್ನು ಬದಿಗೊತ್ತಿ ಸಂಘಟಿರಾಗಬೇಕೆಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಕರೆ ನೀಡಿದರು.

Advertisement

ಗುರುವಾರ ನಗರದ ಗೃಹಮಂಡಳಿ ಬಡಾವಣೆಯಲ್ಲಿ ನಿರ್ಮಿಸುತ್ತಿರುವ ವೀರಶೈವ ಸಮುದಾಯ ಭವನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ನಂತರ ನಡೆದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವೀರಶೈವ ಲಿಂಗಾಯತ ಸಮುದಾಯದಲ್ಲಿರುವ ಒಳಪಡಂಗಡಗಳಲ್ಲಿ ಬಹಳಷ್ಟು ಭಿನ್ನಾಭಿಪ್ರಾಯಗಳಿವೆ. ಆ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಎಲ್ಲರೂ ಒಂದಾಗಿ ಸಾಗಿದರೆ ಧರ್ಮದ ಶಕ್ತಿ ಇನ್ನಷ್ಟು ವೃದ್ಧಿಸುತ್ತದೆ.

ಸಮುದಾಯವು ಸುಭದ್ರವಾಗುತ್ತದೆ ಎಂದು ಅಭಿಪ್ರಾಯಿಸಿದರು. ಮಾಜಿ ಮಂತ್ರಿ ಶಾಸಕ ಸಿ.ಟಿ.ರವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೀರಶೈವ ಮಹಾಸಭಾದ ನಿಯೋಗವನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಬಳಿಗೆ ಕರೆದೊಯ್ದು ಹೆಚ್ಚಿನ ಅನುದಾನ ಕೊಡಿಸುವ ಭರವಸೆ ನೀಡಿದರು.

ಭವನಕ್ಕೆ ಉತ್ತಮ ರಸ್ತೆ ನಿರ್ಮಾಣ ಮಾಡಲಾಗುವುದು ಎಂದರು. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್‌.ಪರಮಶಿವಯ್ಯ ಮಾತನಾಡಿ, ವೀರಶೈವ ಸಮುದಾಯ ಭವನ ನಿರ್ಮಾಣಕ್ಕೆ ನಿಗಮದಿಂದ ಸಹಕಾರ ನೀಡುವ ಭರವಸೆ ನೀಡಿದರು. ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಬಿ.ಎ.ಶಿವಶಂಕರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮುದಾಯ ಭವನ ನಿರ್ಮಾಣ ಕಾಮಗಾರಿ ಒಂದು ವರ್ಷದೊಳಗೆ ಪೂರ್ಣಗೊಳಸಲು ಪ್ರಯತ್ನಿಸಲಾಗುವುದು. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು. ಮಹಾಸಭಾದ ಉಪಾಧ್ಯಕ್ಷ ಎಚ್‌. ಎಂ.ರೇಣುಕಾರಾಧ್ಯ ಪ್ರಾಸ್ತಾವಿಕ ವಾಗಿ ಮಾತನಾಡಿದರು. ದಾನಿ ರವಿಶಂಕರ್‌ ನಾಮಫಲಕ ಅನಾವರಣಗೊಳಿ ಸಿದರು.

ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಷಡಾಕ್ಷರಸ್ವಾಮಿ, ಮಾಜಿ ಸಚಿವ ಸಗೀರ್‌ ಅಹಮದ್‌, ವಾರ್ತಾ ಸಚಿವರ ಆಪ್ತ ಕಾರ್ಯದರ್ಶಿ ವಿರೂಪಾಕ್ಷ, ಉದ್ಯಮಿ ಜ್ಯೋತಿ ಪ್ರಕಾಶ್‌, ಅಖೀಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್‌.ಎಂ. ಲೋಕೇಶ್‌, ನಗರ ವೀರಶೈವ ಸಮಾಜದ ಅಧ್ಯಕ್ಷ ಸಿ.ಬಿ. ಮಲ್ಲೇಗೌಡ, ಸಿಡಿಎ ಅಧ್ಯಕ್ಷ ಸಿ.ಆನಂದ್‌, ಮಹಾಸಭಾದ ಉಪಾಧ್ಯಕ್ಷ ಎಚ್‌.ಎನ್‌. ನಂಜೇಗೌಡ, ಎಂ.ಎಸ್‌. ನಿರಂಜನ್‌, ಕಾರ್ಯದರ್ಶಿ ಡಿ.ಎಸ್‌. ಮಮತಾ, ಖಜಾಂಚಿ ಎಸ್‌. ದೇವರಾಜು ಇದ್ದರು.

Advertisement

ವೀರಶೈವ ಮಹಾಸಭಾದ ನಿರ್ದೇಶಕ ಎಚ್‌.ಡಿ. ತಮ್ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಎಂ.ಸಿ. ಶಿವಾನಂದಸ್ವಾಮಿ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಸಿ.ಬಿ. ನಂದೀಶ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next