Advertisement

ಚಿತ್ತಾಪುರ ಎಂಎಲ್‌ಎ ಸೋಲಿಸಲು ರಣತಂತ್ರ

10:27 AM Oct 27, 2021 | Team Udayavani |

ವಾಡಿ: ಕಲಬುರಗಿಯ ಕಾಂಗ್ರೆಸ್‌ ಸಂಸದರನ್ನು ಸೋಲಿಸಿ ಮನೆಗೆ ಕಳುಹಿಸಿದ್ದು, ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಚಿತ್ತಾಪುರದ ಕಾಂಗ್ರೆಸ್‌ ಎಂಎಲ್‌ಎಯನ್ನು ಮನೆಗೆ ಕಳಿಸಲು ರಣತಂತ್ರ ಸಿದ್ಧವಾಗುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಹೇಳಿದರು.

Advertisement

ಮಂಗಳವಾರ ರಾವೂರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಗ್ರಾಮಂತರ ಕಾರ್ಯಕಾರಿಣಿ ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆಗಳನ್ನು ಯಶಸ್ವಿಯಾಗಿ ಗೆಲ್ಲುವ ಸಾಮ ರ್ಥ್ಯ ಭಾಜಪ ಕಾರ್ಯಕರ್ತರಿಗಿದೆ. ಬೂತ್‌ ಮಟ್ಟದಿಂದ ಮತಗಳ ಕ್ರೋಢೀಕರಣ ಮಾಡಿದ್ದರಿಂದ ಕಾಂಗ್ರೆಸ್‌ ಹಿಡಿತದಲ್ಲಿದ್ದ ಕಲಬುರಗಿ ಲೋಕಸಭೆ ಕಮಲ ಹಿಡಿತಕ್ಕೆ ಜಾರಲು ಕಾರಣವಾಯಿತು ಎಂದರು.

ಚಿತ್ತಾಪುರ ಸೇರಿದಂತೆ ಜಿಲ್ಲೆಯ ಇತರ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಕಮಲ ಅರಳಿಸಿ, ಕಾಂಗ್ರೆಸ್‌ ಮುಕ್ತ ಕಲಬುರಗಿ ನಿರ್ಮಿಸುವ ಗುರಿ ಹೊಂದಲಾಗಿದೆ. ತಾಪಂ ಮತ್ತು ಜಿಪಂ ಚುನಾವಣೆಗಳ ಪೂರ್ವಸಿದ್ಧತೆ ಈಗಿನಿಂದಲೇ ಶುರು ವಾಗಬೇಕು. ಬಿಜೆಪಿ ಕಾರ್ಯಕರ್ತರ ಪಕ್ಷ ಸಂಘಟನೆ ಕಾಂಗ್ರೆಸ್‌ಗೆ ನಡುಕ ಹುಟ್ಟಿಸಬೇಕು ಎಂದು ಹೇಳಿ, ಕಮಲ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಾರಿಗೆ ತಂದಿರುವ ಉತ್ತಮ ಯೋಜನೆಗಳನ್ನು ಜನರಿಗೆ ತಲುಪಿಸುವ ಜತೆಗೆ, ಇವು ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳು ಎಂಬುದನ್ನು ಜನರಿಗೆ ಮನದಟ್ಟು ಮಾಡಿಸಬೇಕು ಎಂದರು.

ನಮ್ಮ ಗ್ರಾಮ-ನಮ್ಮ ರಸ್ತೆ, ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ಬಿಮಾ ಫಸಲ್‌ ಯೋಜನೆ, ಜಲ ಜೀವನ್‌, ಕಿಸಾನ್‌ ಸಮ್ಮಾನ್‌ ಯೋಜನೆ, ಉಜ್ವಲ ಗ್ಯಾಸ್‌, ಬಡ ಕುಟುಂಬಗಳ ಖಾತೆಗೆ ಕೋವಿಡ್‌ ಪರಿಹಾರ, ರೈತರಿಗೆ ಪರಿಹಾರ, ರೈಲು ನಿಲ್ದಾಣಗಳ ಅಭಿವೃದ್ಧಿ, ಅಂಗನವಾಡಿಗಳಿಗೆ ಪುನಶ್ಚೇತನ, ದೇಶದ ಪ್ರತಿ ಪಂಚಾಯತಿಗೆ ಕಸವಿಲೇವಾರಿ ಘಟಕಗಳ ಮಂಜೂರಿ, ಸ್ವತ್ಛ ಭಾರತ ಯೋಜನೆಯಡಿ ಶೌಚಾಲಯಗಳ ಕ್ರಾಂತಿ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳ ಸುಧಾರಣೆ ಸೇರಿದಂತೆ ಹಲವು ಯೋಜನೆಗಳನ್ನು ಕೊಟ್ಟಿರುವ ನರೇಂದ್ರ ಮೋದಿಜಿಯವರ ಸರ್ಕಾರದ ಸಾಧನೆಗಳ ಮೇಲೆ ಹೆಚ್ಚು ಬೆಳಕು ಚೆಲ್ಲುವ ಕೆಲಸವಾಗಬೇಕು ಎಂದು ಕಾರ್ಯಕರ್ತರಿಗೆ ಹೇಳಿದರು.

ಇದನ್ನೂ ಓದಿ: ನಟಿ ಮೇಲೆ ಹಲ್ಲೆ: ಮಾಜಿ ಪ್ರಿಯಕರ ಸೆರೆ

Advertisement

ಸಭೆ ಉದ್ಘಾಟಿಸಿ ಮಾತನಾಡಿದ ಸಂಸದ ಡಾ| ಉಮೇಶ ಜಾಧವ, ದೇಶವನ್ನು ಕಾಡಿದ ಕೊರೊನಾ ಎನ್ನುವ ಕೀಡೆ (ವೈರಸ್‌) ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಹಗಲಿರುಳು ಶ್ರಮಿಸಿದೆ. ಆರೋಗ್ಯ ಸಿಬ್ಬಂದಿ ಶ್ರಮದಿಂದ ದೇಶ 100 ಕೋಟಿ ಲಸಿಕೆ ಗುರಿ ತಲುಪಿದ್ದು ಸಾಮಾನ್ಯವಲ್ಲ. ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ. ಆದರೂ ಕೆಲವರು ಮೋದಿಜಿ ವಿರುದ್ಧ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜಪಾಟೀಲ ರದ್ದೇವಾಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಡಾ| ಅವಿನಾಶ ಜಾಧವ, ದ್ವಿದಳಧಾನ್ಯ ಮಂಡಳಿ ಅಧ್ಯಕ್ಷ ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಕಾಡಾ ಅಧ್ಯಕ್ಷ ಹರ್ಷವರ್ಧನ ಗುಗ್ಗಳೆ, ಬಿಜೆಪಿ ಚಿತ್ತಾಪುರ ತಾಲೂಕು ಅಧ್ಯಕ್ಷ ನೀಲಕಂಠ ಪಾಟೀಲ, ಪಕ್ಷದ ಹಿರಿಯ ಮುಖಂಡರಾದ ಅರುಣ ಬಿನ್ನಾಡಿ, ನಾಮದೇವ ರಾಠೊಡ, ಬಸವರಾಜ ಬೆಣ್ಣೂರಕರ, ಧರ್ಮಣ್ಣ ಇಟಗಾ, ಅಂಬಾರಾಯ ಅಷ್ಟಗಿ, ಧರ್ಮಣ್ಣ ದೊಡ್ಡಮನಿ, ಚಂದಮ್ಮ ಪಾಟೀಲ, ಡಾ| ಇಂದ್ರಾ ಶಕ್ತಿ, ನಿವೇದಿತಾ ದಹಿಹಂಡೆ, ವಿಠ್ಢಲ ನಾಯಕ, ಭೀಮರೆಡ್ಡಿಗೌಡ ಕುರಾಳ, ಡಾ| ಗುಂಡಣ್ಣ ಬಾಳಿ, ಮುಕುಂದ ದೇಶಪಾಂಡೆ, ರಾಜು ಮುಕ್ಕಣ್ಣ, ಮಲ್ಲಣ್ಣ ಸಣಮೋ, ಚಂದ್ರಶೇಖರ ಅವಂಟಿ ಪಾಲ್ಗೊಂಡಿದ್ದರು. ಲಿಂಗರಾಜ ಬಿರಾದಾರ ಸ್ವಾಗತಿಸಿದರು, ನಾಗಪ್ಪ ಕೊಳ್ಳಿ ನಿರೂಪಿಸಿದರು. ಚಂದ್ರಶೇಖರರೆಡ್ಡಿ ವಂದಿಸಿದರು.

ಜಿಡ್ಡುಗಟ್ಟಿದ ದೇಶದ ಶಿಕ್ಷಣ ವ್ಯವಸ್ಥೆ ಬದಲಿಸಲು ಮುಂದಾಗಿರುವ ಬಿಜೆಪಿ ಸರ್ಕಾರ, ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರಲಿರುವ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದೆ. ದೇಶದ ಅಸಂಖ್ಯಾತ ವಿದ್ಯಾವಂತರು ಇದನ್ನು ಸ್ವಾಗತಿಸಿದ್ದಾರೆ. ಆದರೆ ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಮತ್ತು ಸಿದ್ದರಾಮಯ್ಯ ಮಾತ್ರ ವಿರೋಧ ಮಾಡುತ್ತಿದ್ದಾರೆ. ಇವರಿಬ್ಬರೂ ಮನೆಯಲ್ಲಿ ಸರಿಯಾಗಿ ಹೋಂವರ್ಕ್‌ ಮಾಡಿದರೆ ಎನ್‌ಇಪಿ ಅರ್ಥವಾಗುತ್ತದೆ. -ಅಶ್ವತ್ಥನಾರಾಯಣ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next