Advertisement
ಮಂಗಳವಾರ ರಾವೂರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಗ್ರಾಮಂತರ ಕಾರ್ಯಕಾರಿಣಿ ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆಗಳನ್ನು ಯಶಸ್ವಿಯಾಗಿ ಗೆಲ್ಲುವ ಸಾಮ ರ್ಥ್ಯ ಭಾಜಪ ಕಾರ್ಯಕರ್ತರಿಗಿದೆ. ಬೂತ್ ಮಟ್ಟದಿಂದ ಮತಗಳ ಕ್ರೋಢೀಕರಣ ಮಾಡಿದ್ದರಿಂದ ಕಾಂಗ್ರೆಸ್ ಹಿಡಿತದಲ್ಲಿದ್ದ ಕಲಬುರಗಿ ಲೋಕಸಭೆ ಕಮಲ ಹಿಡಿತಕ್ಕೆ ಜಾರಲು ಕಾರಣವಾಯಿತು ಎಂದರು.
Related Articles
Advertisement
ಸಭೆ ಉದ್ಘಾಟಿಸಿ ಮಾತನಾಡಿದ ಸಂಸದ ಡಾ| ಉಮೇಶ ಜಾಧವ, ದೇಶವನ್ನು ಕಾಡಿದ ಕೊರೊನಾ ಎನ್ನುವ ಕೀಡೆ (ವೈರಸ್) ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಹಗಲಿರುಳು ಶ್ರಮಿಸಿದೆ. ಆರೋಗ್ಯ ಸಿಬ್ಬಂದಿ ಶ್ರಮದಿಂದ ದೇಶ 100 ಕೋಟಿ ಲಸಿಕೆ ಗುರಿ ತಲುಪಿದ್ದು ಸಾಮಾನ್ಯವಲ್ಲ. ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತಿದೆ. ಆದರೂ ಕೆಲವರು ಮೋದಿಜಿ ವಿರುದ್ಧ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜಪಾಟೀಲ ರದ್ದೇವಾಡಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಡಾ| ಅವಿನಾಶ ಜಾಧವ, ದ್ವಿದಳಧಾನ್ಯ ಮಂಡಳಿ ಅಧ್ಯಕ್ಷ ಲಿಂಗಾರೆಡ್ಡಿಗೌಡ ಬಾಸರೆಡ್ಡಿ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ, ಕಾಡಾ ಅಧ್ಯಕ್ಷ ಹರ್ಷವರ್ಧನ ಗುಗ್ಗಳೆ, ಬಿಜೆಪಿ ಚಿತ್ತಾಪುರ ತಾಲೂಕು ಅಧ್ಯಕ್ಷ ನೀಲಕಂಠ ಪಾಟೀಲ, ಪಕ್ಷದ ಹಿರಿಯ ಮುಖಂಡರಾದ ಅರುಣ ಬಿನ್ನಾಡಿ, ನಾಮದೇವ ರಾಠೊಡ, ಬಸವರಾಜ ಬೆಣ್ಣೂರಕರ, ಧರ್ಮಣ್ಣ ಇಟಗಾ, ಅಂಬಾರಾಯ ಅಷ್ಟಗಿ, ಧರ್ಮಣ್ಣ ದೊಡ್ಡಮನಿ, ಚಂದಮ್ಮ ಪಾಟೀಲ, ಡಾ| ಇಂದ್ರಾ ಶಕ್ತಿ, ನಿವೇದಿತಾ ದಹಿಹಂಡೆ, ವಿಠ್ಢಲ ನಾಯಕ, ಭೀಮರೆಡ್ಡಿಗೌಡ ಕುರಾಳ, ಡಾ| ಗುಂಡಣ್ಣ ಬಾಳಿ, ಮುಕುಂದ ದೇಶಪಾಂಡೆ, ರಾಜು ಮುಕ್ಕಣ್ಣ, ಮಲ್ಲಣ್ಣ ಸಣಮೋ, ಚಂದ್ರಶೇಖರ ಅವಂಟಿ ಪಾಲ್ಗೊಂಡಿದ್ದರು. ಲಿಂಗರಾಜ ಬಿರಾದಾರ ಸ್ವಾಗತಿಸಿದರು, ನಾಗಪ್ಪ ಕೊಳ್ಳಿ ನಿರೂಪಿಸಿದರು. ಚಂದ್ರಶೇಖರರೆಡ್ಡಿ ವಂದಿಸಿದರು.
ಜಿಡ್ಡುಗಟ್ಟಿದ ದೇಶದ ಶಿಕ್ಷಣ ವ್ಯವಸ್ಥೆ ಬದಲಿಸಲು ಮುಂದಾಗಿರುವ ಬಿಜೆಪಿ ಸರ್ಕಾರ, ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರಲಿರುವ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದೆ. ದೇಶದ ಅಸಂಖ್ಯಾತ ವಿದ್ಯಾವಂತರು ಇದನ್ನು ಸ್ವಾಗತಿಸಿದ್ದಾರೆ. ಆದರೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ಮಾತ್ರ ವಿರೋಧ ಮಾಡುತ್ತಿದ್ದಾರೆ. ಇವರಿಬ್ಬರೂ ಮನೆಯಲ್ಲಿ ಸರಿಯಾಗಿ ಹೋಂವರ್ಕ್ ಮಾಡಿದರೆ ಎನ್‌ಇಪಿ ಅರ್ಥವಾಗುತ್ತದೆ. -ಅಶ್ವತ್ಥನಾರಾಯಣ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ