Advertisement

ಚಿಟ್ಟಾಣಿ ರಾಮಚಂದ್ರ ಹೆಗಡೆ ಇನ್ನಿಲ್ಲ

08:10 AM Oct 04, 2017 | |

ಉಡುಪಿ: ಯಕ್ಷಗಾನದ ಮೇರು ಕಲಾವಿದ, ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ (84) ಅವರು ಮಣಿಪಾಲ ಆಸ್ಪತ್ರೆಯಲ್ಲಿ ಅ. 3ರಂದು ರಾತ್ರಿ 9.30ರ ವೇಳೆಗೆ ನಿಧನ ಹೊಂದಿದರು.


ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರನ್ನು ಸೆ. 29ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನವರಾತ್ರಿ ನಿಮಿತ್ತ ಸೆ. 21ರಿಂದ 4 ದಿನ ಬಂಗಾರಮಕ್ಕಿಯಲ್ಲಿ ನಡೆದ ಯಕ್ಷಗಾನದಲ್ಲಿ ಅವರು ಪಾತ್ರ ನಿರ್ವಹಿಸಿದ್ದರು. ಭೀಷ್ಮನ ತಂದೆ ಶಂತನು ಪಾತ್ರ ಅವರ ಕೊನೆಯ ವೇಷ. 7ನೇ ವರ್ಷದಲ್ಲಿ ರಂಗ ಪ್ರವೇಶ ಮಾಡಿದ ಅವರು 14ರ ಹರೆಯದಲ್ಲೇ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದರು. ಅವರು ಪತ್ನಿ, ಪುತ್ರಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ.


ಅವರ ಅಪೇಕ್ಷೆಯಂತೆ ನೇತ್ರಗಳನ್ನು ದಾನ ಮಾಡಲಾಗಿದೆ. ಬುಧವಾರ ಬೆಳಗ್ಗೆ ಮಣಿಪಾಲದಿಂದ 8 ಗಂಟೆಗೆ ಪಾರ್ಥಿವ ಶರೀರವನ್ನು ಹೊನ್ನಾವರದ ಗುಡೇಕೇರಿಗೆ ಕೊಂಡೊಯ್ದು ಅಂತ್ಯಸಂಸ್ಕಾರ ನಡೆಯಲಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next