ಚಿತ್ರದುರ್ಗ: ಶರಣ ಸಂಸ್ಕೃತಿ ಉತ್ಸವ 2021ರಅಂಗವಾಗಿ ಶನಿವಾರ ಮಠದ ಆವರಣದಲ್ಲಿಆಯೋಜಿಸಿದ್ದ ಜಯದೇವ ಜಂಗೀ ಕುಸ್ತಿಪಂದ್ಯಾವಳಿಗೆ ಡಾ| ಶಿವಮೂರ್ತಿ ಮುರುಘಾಶರಣರು ಚಾಲನೆ ನೀಡಿದರು.
ಕುಸ್ತಿ ಪಂದ್ಯಾವಳಿಗೆ ನೆರೆಯ ಆಂದ್ರಪ್ರದೇಶ,ತಮಿಳುನಾಡು, ದೆಹಲಿ, ಪಂಜಾಬ್, ರಾಜಸ್ಥಾನ,ಮಹಾರಾಷ್ಟ್ರದ ಮುಂಬೈ, ಸಾಂಗ್ಲಿ ಹಾಗೂ ಮೈಸೂರು,ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಬಳ್ಳಾರಿ,ಕಲಬುರಗಿ,ದಾವಣಗೆರೆ, ಚಿತ್ರದುರ್ಗ ಸೇರಿದಂತೆ 250ಜೋಡಿ ಆಗಮಿಸಿದ್ದರು.
ಈ ವೇಳೆ ಮಾತನಾಡಿದ ಡಾ| ಶಿವಮೂರ್ತಿ ಮುರುಘಾ ಶರಣರು, ಕುಸ್ತಿಒಂದು ಪ್ರಾಚೀನ ಕ್ರೀಡೆ. ಮುರುಘಾ ಮಠ ಬಹಳಹಿಂದಿನಿಂದಲೂ ಕುಸ್ತಿ ಕ್ರೀಡೆಯನ್ನು ಪ್ರೋತ್ಸಾಹಿಸುತ್ತಾಬಂದಿದೆ ಎಂದು ತಿಳಿಸಿದರು.ಐಮಂಗಲದ ಶ್ರೀ ಬಸವ ಹರಳಯ್ಯ ಸ್ವಾಮೀಜಿಮಾತನಾಡಿ, ಕುಸ್ತಿ ದೈಹಿಕ ಹಾಗೂ ಮಾನಸಿಕವಾಗಿನಡೆಯುವ ಸಾಂಕೇತಿಕ ಪರೀಕ್ಷೆ ಇದ್ದಂತೆ. ಅತಿಯಾದಆಹಾರ ಅನಾರೋಗ್ಯಕ್ಕೆ ದಾರಿ ಮಾಡಿಕೊಟ್ಟರೆಮಿತವಾದ ಆಹಾರ ಮತ್ತು ವ್ಯಾಯಾಮ ದೇಹಕ್ಕೆಒಳ್ಳೆಯದು ಎಂದು ಹೇಳಿದರು.
ಖಜೂರಿ ಕೋರಣ್ಯೇಶ್ವರ ವಿರಕ್ತಮಠದ ಶ್ರೀಮುರುಘೇಂದ್ರ ಕೋರಣ್ಯೇಶ್ವರ ಸ್ವಾಮಿಗಳು ಮಾತನಾಡಿ, ರಾಜ ಪರಂಪರೆಯ ದಸರೆಯಲ್ಲಿನಡೆಯುವಂತೆ ಶರಣ ಸಂಸ್ಕೃತಿ ಉತ್ಸವದಲ್ಲಿ ಈಹಿಂದಿನಿಂದಲೂ ಕುಸ್ತಿಗೆ ಪ್ರೋತ್ಸಾಹ ನೀಡುವಸಲುವಾಗಿ ಜಯದೇವ ಜಂಗೀ ಕುಸ್ತಿ ನಡೆಯುತ್ತಾ ಬಂದಿದೆ. ಯುವಕರಿಗೆ ದೇಹ ಮತ್ತು ಮನಸ್ಸನ್ನುಗಟ್ಟಿಗೊಳಿಸಿಕೊಳ್ಳಲು ಕ್ರೀಡೆ ಅತ್ಯವಶ್ಯಕ ಎಂದರು.
ಉತ್ಸವ ಸಮಿತಿ ಗೌರವಾಧ್ಯಕ್ಷರಾದ ಶ್ರೀ ಮಾದಾರಚನ್ನಯ್ಯ ಸ್ವಾಮೀಜಿ, ಕಾರ್ಯಾಧ್ಯಕ್ಷ ಕೆ.ಎಸ್.ನವೀನ್, ಹೆಚ್ಚುವರಿ ಪೊಲೀಸ್ ಅಕ್ಷಕ ಮಹಾನಿಂಗಪಿ. ನಂದಗಾವಿ, ಡಿವೈಎಸ್ಪಿ ಪಾಂಡುರಂಗಪ್ಪ, ಗೃಹರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಸಂಧ್ಯಾ, ಅಪರ ಕೃಷಿನಿರ್ದೇಶಕ ದಿವಾಕರ್, ಸಿದ್ದಾಪುರ ಗ್ರಾಪಂ ಅಧ್ಯಕ್ಷೆಶಿಲ್ಪಾ ತಿಪ್ಪೇಸ್ವಾಮಿ, ಜಿ.ಆರ್. ಹಳ್ಳಿ ಗ್ರಾಪಂ ಅಧ್ಯಕ್ಷಹೊನ್ನೂರಪ್ಪ ಮತ್ತಿತರರು ಇದ್ದರು.
ತೀರ್ಪುಗಾರರಾಗಿಪೈಲ್ವಾನ್ ತಿಪ್ಪೇಸ್ವಾಮಿ, ನರಸಿಂಹಮೂರ್ತಿ,ದೊಡ್ಡಗರಡಿ ಮೂರ್ತಪ್ಪ, ಪ್ರಾಣೇಶ್, ಜಗದೀಶ್,ಕೃಷ್ಣಮೂರ್ತಿ ಹಾಗೂ ಭರತ್ ಕಾರ್ಯ ನಿರ್ವಹಿಸಿದರು.ಕೆ.ಎನ್. ವಿಶ್ವನಾಥ ಸ್ವಾಗತಿಸಿದರು. ಮುರುಗೇಶ್‌ನಿರೂಪಿಸಿದರು. ಕುಮಾರಸ್ವಾಮಿ ವಂದಿಸಿದರು.