Advertisement

ಚಿತ್ರಾಪುರ ತಲವಾರು ಹಲ್ಲೆ ಪ್ರಕರಣ: ಮೂವರ ಬಂಧನ

11:03 PM Feb 27, 2023 | Team Udayavani |

ಸುರತ್ಕಲ್‌ : ಚಿತ್ರಾಪುರ ಬೀಚ್‌ನಲ್ಲಿ ರವಿವಾರ ಗಾಂಜಾ ಅಮಲಿನಲ್ಲಿ ರಿಕ್ಷಾ ಚಾಲಕನಿಗೆ ತಲವಾರಿನಿಂದ ಹಲ್ಲೆ ನಡೆಸಿ, ರಿಕ್ಷಾ ಗಾಜು ಪುಡಿಗೈದ ಘಟನೆಗೆ ಸಂಬಂಧಿಸಿದಂತೆ ಒಟ್ಟು ಮೂವರನ್ನು ಸುರತ್ಕಲ್‌ ಪೊಲೀಸರು ಬಂಧಿಸಿದ್ದಾರೆ.

Advertisement

ರವಿವಾರ ಪ್ರತೀಕ್‌ ಬಂಧಿಸಲಾಗಿತ್ತು. ಸೋಮವಾರ ಆರೋಪಿಗಳಾದ ಅಮಲ್‌ ಅಜಯನ್‌ ಮತ್ತು ನಿಶಾಂತ್‌ ಬಂಧಿಸಲಾಗಿದ್ದು ಇತರ ಮೂವರು ಆರೋಪಿಗಳಿಗೆ ಶೋಧ ಕಾರ್ಯ ಮುಂದುವರಿದಿದೆ. ಬಂಧಿತರ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್‌ 307 ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಕಮಿಷನರ್‌ ಕುಲದೀಪ್‌ ಕುಮಾರ್‌ ಆರ್‌ ಜೈನ್‌ ತಿಳಿಸಿದ್ದಾರೆ.

ಮಾದಕ ವ್ಯಸನದ ವಿರುದ್ದ ಕಾನೂನು ಕ್ರಮ:
ಮಾದಕ ದ್ರವ್ಯ ಮಾರಾಟ ಜಾಲವನ್ನು ಬುಡಸಹಿತ ಕಿತ್ತು ಹಾಕಲು ಈಹಿಂದೆಯೇ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಯುವ ಸಮಾಜ ಭವಿಷ್ಯವನ್ನು ಡ್ರಗ್ಸ್‌ ಸೇವನೆ ಮೂಲಕ ಹಾಳು ಮಾಡಿಕೊಳ್ಳುತ್ತಿರುವುದನ್ನು ವಿಧಾನ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪಿಸಿ ಯಾವುದೇ ಕಾರಣಕ್ಕೂ ಇಂತಹ ಘಟನೆಗಳು ಕ್ಷೇತ್ರದಲ್ಲಿ ನಡೆಯಕೂಡದು ಎಂದು ಶಾಸಕರಾದ ಡಾ.ಭರತ್‌ ಶೆಟ್ಟಿ ವೈ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next