Advertisement

ಕನ್ನಡಿಗರಲ್ಲಿ ಆತ್ಮಾಭಿಮಾನ ಕೊರತೆ: ಲೀಲಾದೇವಿ ಪ್ರಸಾದ್‌

02:15 PM Oct 26, 2021 | Team Udayavani |

ಚಿತ್ರದುರ್ಗ: ತಮಿಳುನಾಡು ಮತ್ತುಆಂಧ್ರಪ್ರದೇಶದ ಜನರಿಗೆ ಭಾಷೆಯಮೇಲಿರುವ ಆತ್ಮಾಭಿಮಾನಕನ್ನಡಗರಲ್ಲಿ ಕಾಣುತ್ತಿಲ್ಲ ಎಂದುಮಾಜಿ ಸಚಿವೆ ಲೀಲಾದೇವಿ ಆರ್‌.ಪ್ರಸಾದ್‌ ಹೇಳಿದರು.

Advertisement

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಸ್ಪ ರ್ಧಿಸಿರುವಅಭ್ಯರ್ಥಿ ಮಾಯಣ್ಣ ಪರವಾಗಿಮತಯಾಚನೆಗಾಗಿ ಸೋಮವಾರನಗರಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪರಭಾಷೆಯಬಗೆಗಿನ ವ್ಯಾಮೋಹಹೆಚ್ಚಾಗಿರುವುದರಿಂದ ಕನ್ನಡಕ್ಕೆದುಸ್ಥಿತಿ ಬಂದಿದೆ. ರಾಜಧಾನಿಬೆಂಗಳೂರಿನಲ್ಲಿ ಕನ್ನಡ ಉಳಿಸುವಕೆಲಸ ಆಗಬೇಕಿದೆ ಎಂದರು.ಕನ್ನಡ ಶಾಲೆಗಳು ವಿದ್ಯಾರ್ಥಿಗಳಕೊರತೆಯಿಂದ ಬಳಲುತ್ತಿವೆ.ನಗರ ಪ್ರದೇಶದಲ್ಲಿ ಇಂಗ್ಲಿಷ್‌ವ್ಯಾಮೋಹ ಹೆಚ್ಚಾಗುತ್ತಿದೆ.

ಆಂಗ್ಲಮಾಧ್ಯಮ ಶಿಕ್ಷಣದ ಪ್ರಭಾವವೂಕನ್ನಡವನ್ನು ಅಳಿವಿನ ಅಂಚಿಗೆತಳ್ಳುತ್ತಿದೆ. ಬೆಂಗಳೂರಿನಲ್ಲಿಕನ್ನಡ ಮಾತನಾಡುವವರಪ್ರಮಾಣ ಶೇ. 30 ಮಾತ್ರ. ಕನ್ನಡಮಾತನಾಡುವುದೇ ಕೀಳರಿಮೆಎಂಬಂತಹ ಸ್ಥಿತಿ ರಾಜಧಾನಿಯಲ್ಲಿ ನಿರ್ಮಾಣವಾಗಿದೆ

. ಇದು ಹೀಗೆಮುಂದುವರಿದರೆ ಕನ್ನಡಕ್ಕೆ ದೊಡ್ಡಅಪಾಯ ಎದುರಾಗಲಿದೆ ಎಂದುಕಳವಳ ವ್ಯಕ್ತಪಡಿಸಿದರು.ಕನ್ನಡಿಗರು ಪರಭಾಷೆದ್ವೇಷಿಗಳಾಗಬಾರದು. ಆದರೆಮಾತೃಭಾಷೆಯ ಆತ್ಮಾಭಿಮಾನವನ್ನು ಕಳೆದುಕೊಳ್ಳಬಾರದು.

Advertisement

ಕನ್ನಡಸಾಹಿತ್ಯ ಪರಿಷತ್ತು ಈ ನಿಟ್ಟಿನಲ್ಲಿಕೆಲಸ ಮಾಡಬೇಕು. ಬೆಂಗಳೂರುಜಿಲ್ಲಾ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿಕೆಲಸ ಮಾಡಿದ ಮಾಯಣ್ಣಕನ್ನಡಿಗರಲ್ಲಿ ಭರವಸೆ ಮೂಡಿಸಿದ್ದಾರೆ.ಕನ್ನಡ ಉಳಿಸುವ ಕೆಲಸವನ್ನುಅವರು ಸಮರ್ಥವಾಗಿಮಾಡಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಾಹಿತಿ ಕಮಲಾಇತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next