Advertisement

ಕಪ್ಪುಪಟ್ಟಿ ಧರಿಸಿ ಶಿಕ್ಷಕರು ಕೆಲಸಕ್ಕೆ ಹಾಜರ್‌

02:34 PM Oct 22, 2021 | Team Udayavani |

ಚಿತ್ರದುರ್ಗ: ವಿವಿಧ ಬೇಡಿಕೆಗಳ ಈಡೇರಿಕೆಗೆಒತ್ತಾಯಿಸಿ ಜಿಲ್ಲೆಯಾದ್ಯಂತ ಶಿಕ್ಷಕರು ಅ. 21ರಗುರುವಾರದಿಂದ ಕಪ್ಪುಪಟ್ಟಿ ಧರಿಸಿ ಕರ್ತವ್ಯನಿರ್ವಹಿಸಲು ಆರಂಭಿಸಿದ್ದಾರೆ.ಜಿಲ್ಲೆಯ ಸುಮಾರು ಐದೂವರೆ ಸಾವಿರ ಶಿಕ್ಷಕರುಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದರು.

Advertisement

ಅ. 4ರಿಂದ 21 ರವರೆಗೆ ಗಡುವು ನೀಡಿ ತರಬೇತಿಗಳನ್ನುಬಹಿಷ್ಕರಿಸಲಾಗಿತ್ತು. ಆದರೂ ಸರ್ಕಾರ ಸ್ಪಂದಿಸಿದಹಿನ್ನೆಲೆಯಲ್ಲಿ ಅ. 29 ರವರೆಗೆ ಕಪ್ಪು ಕಟ್ಟಿ ಧರಿಸಿಕರ್ತವ್ಯ ನಿರ್ವಹಿಸಲು ತೀರ್ಮಾನಿಸಿದ್ದಾರೆ.80 ಸಾವಿರ ಸೇವಾನಿರತ ಪದವಿಧರ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ಇವರಿಗೆ ಸರ್ಕಾರ ಹಿಂಬಡ್ತಿ ನೀಡಿದೆ.

1 ರಿಂದ 7ನೇ ತರಗತಿಗೆನೇಮಕವಾದ ಶಿಕ್ಷಕರನ್ನು 1 ರಿಂದ 5ನೇ ತರಗತಿಗೆಸೀಮಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿಸೇವಾನಿರತ ಪದವಿಧರ ಶಿಕ್ಷಕರನ್ನು ಕೂಡಲೇ6 ರಿಂದ 8ನೇ ತರಗತಿಗೆ ವಿಲೀನಗೊಳಿಸಬೇಕು.ವೃಂದ ಮತ್ತು ನೇಮಕಾತಿ ನೇಮಗಳ ತಿದ್ದುಪಡಿಮಾಡುವುದು, ಮುಖ್ಯ ಗುರುಗಳಿಗೆ 15, 20, 25ವರ್ಷಗಳ ವೇತನ ಬಡ್ತಿ ನೀಡುವುದು, ನೂತನಪಿಂಚಣಿ ಯೋಜನೆ ರದ್ದುಗೊಳಿಸುವುದು, ಸೇವಾವಧಿಯಲ್ಲಿ ಶಿಕ್ಷಕರು ಬಯಸುವ ಜಿಲ್ಲೆಗೆ ಒಂದು ಬಾರಿವರ್ಗಾವಣೆ ಮಾಡಬೇಕು, ಗ್ರಾಮೀಣ ಕೃಪಾಂಕಶಿಕ್ಷಕರ ಸಮಸ್ಯೆ ಪರಿಹರಿಸುವುದು, ದೈಹಿಕ ಶಿಕ್ಷಕರಸಮಸ್ಯೆ ಪರಿಹರಿಸುವುದು ಸೇರಿದಂತೆ ಶಿಕ್ಷಕರಹಲವು ಬೇಡಿಕೆಗಳು ಬಾಕಿ ಇದೆ.

ಈಡೇರಿಸಲುಕಳೆದ ಹಲವು ವರ್ಷಗಳಿಂದ ಮನವಿ ಮಾಡಿದ್ದರೂಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರುದೂರಿದರು.ಕಾಲಮಿತಿಯಲ್ಲಿ ಶಿಕ್ಷಕರ ಸಮಸ್ಯೆಗಳನ್ನುಬಗೆಹರಿಸಲು ಶಿಕ್ಷಣ ಇಲಾಖೆ ತೀರ್ಮಾನಕೈಗೊಂಡಿಲ್ಲ. ಆದ್ದರಿಂದ ಅನಿವಾರ್ಯವಾಗಿ ತರಬೇತಿಬಹಿಷ್ಕಾರ, ಕಪ್ಪುಬಟ್ಟೆ ಧರಿಸಿ, ಕರ್ತವ್ಯಕ್ಕೆ ಹಾಜರಾಗಿಪ್ರತಿಭಟಿಸುತ್ತಿದ್ದೇವೆ ಎಂದು ತಿಳಿಸಿದರು.

ರಾಜ್ಯಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷಆರ್‌. ಮಾರುತೇಶ್‌, ಪ್ರಧಾನ ಕಾರ್ಯದರ್ಶಿಜಿ.ಟಿ. ಹನುಮಂತಪ್ಪ, ಉಪಾಧ್ಯಕ್ಷರಾದ ಜಿ.ಬಿ.ಮಮತಾ, ದೇವರಾಜಯ್ಯ, ಮಂಜುಳಾಕ್ಷಿ, ಶಿಕ್ಷಕಶಿವಮೂರ್ತಿ, ಸಹಕಾರ್ಯದರ್ಶಿ ಆರ್‌.ಜಿ. ನಟೇಶ್‌ಕುಮಾರ್‌, ಚಂದ್ರಶೇಖರಪ್ಪ, ಟಿ. ಉಷಾ ಮತ್ತಿತರರುಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next