Advertisement

ಜನರ ಜೀವ ಉಳಿಸಲು ಆಕ್ಸಿಜನ್‌ ಜೀವರಕ್ಷಕ

02:53 PM Oct 08, 2021 | Team Udayavani |

ಮೊಳಕಾಲ್ಮೂರು: ಸಮಾಜದ ಪ್ರತಿಯೊಬ್ಬ ನಾಗರಿಕರೂಗಂಭೀರ ಕಾಯಿಲೆಯಿಂದ ನರಳುವವರ ಜೀವಉಳಿಸಲು ಆಕ್ಸಿಜನ್‌ ಜೀವರಕ್ಷಕವಾಗಿದೆ ಎಂದು ರಾಜ್ಯ ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದರು.

Advertisement

ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳಕಚೇರಿಯ ಆವರಣದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆ ಚಿತ್ರದುರ್ಗ ವತಿಯಿಂದಆಕ್ಸಿಜನ್‌ ಉತ್ಪಾದನಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಆಕ್ಸಿಜನ್‌ ಬಗ್ಗೆ ಮುಂಚೆ ಯಾರಿಗೂಗೊತ್ತಿರಲಿಲ್ಲ. ಆದರೆ ಕೋವಿಡ್‌ ಬಂದನಂತರ ಆಕ್ಸಿಜನ್‌ ಕೊರತೆಯಿಂದ ಜನರುಜೀವ ಉಳಿಸಿಕೊಳ್ಳಲು ಪರದಾಡುತ್ತಿರುವುದುಕಂಡು ಬಂದಿದೆ. ಆಕ್ಸಿಜನ್‌ ಕೊರತೆಯಿಂದ ಬಹುತೇಕರು ಜೀವ ಕಳೆದುಕೊಂಡಿರುವ ಬಗ್ಗೆ ಅರಿತ ಪ್ರಧಾನಿ ನರೇಂದ್ರ ಮೋದಿ, ಅಂದಿನಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಇಂದಿನಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ತಾಲೂಕಿಗೊಂದರಂತೆ ಆಕ್ಸಿಜನ್‌ ಪ್ಲಾಂಟ್‌ ಅನ್ನುಸ್ಥಾಪಿಸಲು ಮಂಜೂರು ಮಾಡಿದ್ದಾರೆ ಎಂದರು.

ಕೊರೊನಾ ಸಂದರ್ಭದಲ್ಲಿ ಜಿಲ್ಲಾ ಧಿಕಾರಿಗಳು,ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಇನ್ನಿತರ ಅಧಿಕಾರಿ ವರ್ಗದವರು ಆಕ್ಸಿಜನ್‌ ಕೊರತೆಯಾಗದಂತೆಸಮರ್ಪಕವಾಗಿ ವರ್ಕ್‌ಶಾಪ್‌ ಮತ್ತು ಕೈಗಾರಿಕೆಗಳಮೂಲಕ ಪೂರೈಸಿ ಜನರ ಜೀವ ಉಳಿಸುವಲ್ಲಿ ಶ್ರಮವಹಿಸಿದ್ದಾರೆ.

ಕೊರೊನಾ 3ನೇ ಅಲೆ ಬಂದರೂಯಾರಿಗೂ ತೊಂದರೆಯಾಗದಂತೆ ಎಲ್ಲ ಸಿದ್ಧತೆಕೈಗೊಳ್ಳಲಾಗಿದೆ. ಕೋವಿಡ್‌ ಸಂದರ್ಭದಲ್ಲಿ ಫ್ರಂಟ್‌ಲೈನ್‌ ವಾರಿಯರ್ಸ್‌ಗಳು ಜೀವದ ಹಂಗು ತೊರೆದುಶ್ರಮಿಸಿದ್ದಾರೆ ಎಂದರು.

Advertisement

ಜಿಲ್ಲಾ ಧಿಕಾರಿ ಕವಿತಾ ಎಸ್‌. ಮನ್ನೀಕೇರಿ, ಪೊಲೀಸ್‌ವರಿಷ್ಠಾ ಧಿಕಾರಿ ಜಿ.ರಾ ಧಿಕಾ, ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾ ಧಿಕಾರಿ ಡಾ| ಆರ್‌.ರಂಗನಾಥ,ಪ.ಪಂ ಅಧ್ಯಕ್ಷ ಪಿ.ಲಕ್ಷ್ಮಣ, ಉಪಾಧ್ಯಕ್ಷೆ ಶುಭಪೃಥ್ವಿರಾಜ್‌, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಜಯಪಾಲ್‌, ಬಿಜೆಪಿ ಮಂಡಲಾಧ್ಯಕ್ಷರಾದಡಾ|ಪಿ.ಎಂ.ಮಂಜುನಾಥ, ರಾಮರೆಡ್ಡಿ, ಸಚಿವ ಬಿ.ಶ್ರೀರಾಮುಲು ರವರ ಆಪ್ತ ಸಹಾಯಕಪಾಪೇಶ್‌ ನಾಯಕ, ತಹಶೀಲ್ದಾರ್‌ ಟಿ.ಸುರೇಶ್‌ಕುಮಾರ್‌, ತಾ.ಪಂ.ನ ಕಾರ್ಯನಿರ್ವಹಣಾಧಿಕಾರಿ ಕೆ.ಒ.ಜಾನಕಿರಾಮ್‌, ಪೊಲೀಸ್‌ ವೃತ್ತನಿರೀಕ್ಷಕ ಜಿ.ಬಿ.ಉಮೇಶ್‌, ತಾಲೂಕು ಆರೋಗ್ಯಾಧಿಕಾರಿ ಡಾ| ಸುಧಾ, ಆಡಳಿತ ವೈದ್ಯಾ ಧಿಕಾರಿ ಡಾ|ಅಭಿನವ್‌, ವೈದ್ಯರಾದ ಡಾ|ಮಂಜುನಾಥ, ಡಾ|ಪದ್ಮಾವತಿ, ಡಾ| ಅಜರ್‌ ಅಮೀನ್‌, ಡಾ| ಪ್ರದೀಪ್‌,ಡಾ| ರಮ್ಯಾ, ಡಾ|ಗೋವಿಂದರಾಜು, ಡಾ|ಟಿ.ಕೆ.ರಾಘವೇಂದ್ರ, ಡಾ|ಮೆಹಬೂಬ್‌, ಆಸ್ಪತ್ರೆಯಅನಸೂಯಮ್ಮ, ಜಿಲ್ಲಾ ಆರೋಗ್ಯ ಶಿಕ್ಷಣಾ ಧಿಕಾರಿಡಿ.ಚಿದಾನಂದಪ್ಪ, ಆಶಾ ಮೇಲ್ವಿಚಾರಕಿ ರಾಧಾ,ಪ.ಪಂ ಸದಸ್ಯರಾದ ಟಿ.ಟಿ.ರವಿಕುಮಾರ್‌, ಬಿ.ಎನ್‌.ಮಂಜಣ್ಣ, ಲೀಲಾವತಿ, ಭಾಗ್ಯಮ್ಮ, ತಿಪ್ಪೇಸ್ವಾಮಿ,ರೂಪ, ಕೆ.ಡಿ.ಪಿ.ಸದಸ್ಯರಾದ ಸರ್ವಮಂಗಳಚಂದ್ರು,ತಿಪ್ಪೇಸ್ವಾಮಿ, ಬಿ.ಜೆ.ಪಿ.ಮಂಡಲ ಪ್ರಧಾನಕಾರ್ಯದರ್ಶಿ ಪ್ರಭಾಕರ, ಜಿಲ್ಲಾ ಯುವಮೋರ್ಚಾದ ಬಿ.ವಿಜಯ್‌, ನಗರಾಧ್ಯಕ್ಷ ಕಿರಣ್‌ಗಾಯಕವಾಡ್‌, ರಾಯದುರ್ಗ ಕೌನ್ಸಿಲರ್‌ಸಂಜೀವಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next