Advertisement

ಸರ್ಕಾರಿ ಪಪೂ ಕಾಲೇಜು ಪ್ರಾಚಾರ್ಯರ ಅಮಾನತಿಗೆ ಆಗ್ರಹ

07:14 PM Aug 25, 2022 | Team Udayavani |

ಚಿತ್ರದುರ್ಗ: ಬಾಲಕಿಯರ ಸರ್ಕಾರಿಪದವಿಪೂರ್ವ ಕಾಲೇಜು ಹಾಗೂ ಬಾಲಕರಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದ್ದು, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಪ್ರಾಚಾರ್ಯರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಬುಧವಾರಕರುನಾಡ ವಿಜಯಸೇನೆಯಿಂದ ನಗರದಲ್ಲಿಪ್ರತಿಭಟನೆ ನಡೆಯಿತು.

Advertisement

ಆ.16 ರಂದು ಬಾಲಕಿಯರ ಸರ್ಕಾರಿಪದವಿಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ10:30ರಿಂದ ಮಧ್ಯಾಹ್ನ 1:30ರವರೆಗೆ ಹಿಂದಿಪರೀಕ್ಷೆ ನಡೆಸಿ ಉರ್ದು ಮತ್ತು ಸಂಸ್ಕೃತವಿಷಯದ ಮರು ಪರೀಕ್ಷೆಯನ್ನು ಮಧ್ಯಾಹ್ನಎರಡು ಗಂಟೆಯಿಂದ ಸಂಜೆ 5:15ರತನಕ ನಡೆಸಲಾಯಿತು. ಈ ಅವ ಧಿಯಲ್ಲಿದ್ವಿತೀಯ ಪಿಯುಸಿ ತರಗತಿಗಳು ಎಂದಿನಂತೆನಡೆದಿರುವುದನ್ನು ಗಮನಿಸಿದರೆ ಪರೀಕ್ಷೆಯಲ್ಲಿಅಕ್ರಮ ನಡೆದಿರುವುದು ಗೊತ್ತಾಗುತ್ತದೆ.

ಈ ನಿಟ್ಟಿನಲ್ಲಿ ಎರಡು ಪದವಿಪೂರ್ವ ಕಾಲೇಜುಗಳಪ್ರಾಚಾರ್ಯರು ಹಾಗೂ ಪದವಿಪೂರ್ವಶಿಕ್ಷಣ ಇಲಾಖೆ ಉಪನಿರ್ದೇಶಕರನ್ನು ಕೂಡಲೆಸೇವೆಯಿಂದ ಅಮಾನತುಗೊಳಿಸಿ ತನಿಖೆನಡೆಸಬೇಕು. ಈ ಮೂಲಕ ಪ್ರತಿಭಾವಂತವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕುಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next