Advertisement

ಪ್ರಜಾಪ್ರಭುತ್ವ ರಾಜಕಾರಣದ ಹೃದಯ

02:42 PM Aug 15, 2022 | Team Udayavani |

ಚಿತ್ರದುರ್ಗ: ಭಾರತದ ರಾಮರಾಜ್ಯ ಪರಿಕಲ್ಪನೆಯಲ್ಲಿಸುಖೀ ರಾಜ್ಯ ಪ್ರಧಾನವಾಗಿತ್ತು. ಅದೇ ರೀತಿ 12ನೇಶತಮಾನದಲ್ಲಿ ಕಲ್ಯಾಣ ರಾಜ್ಯವಿತ್ತು. ಅದು ಸುಖಅಥವಾ ದುಃಖ ಪ್ರಧಾನವಲ್ಲ. ಕಾಯಕ ಪ್ರಧಾನರಾಜ್ಯವಾಗಿತ್ತು ಎಂದು ಡಾ| ಶಿವಮೂರ್ತಿ ಮುರುಘಾಶರಣರು ಹೇಳಿದರು.

Advertisement

ನಗರದ ಜೆ.ಸಿ.ಆರ್‌ ಬಡಾವಣೆಯ ಉದ್ಯಮಿಕುಮಾರ್‌ ಅವರ ಮನೆಯಲ್ಲಿ ನಡೆದ “ನಿತ್ಯ ಕಲ್ಯಾಣ;ಮನೆಮನೆಗೆ ಚಿಂತನ’ ಕಾರ್ಯಕ್ರಮದಲ್ಲಿ ರಾಜಕೀಯಪ್ರಜ್ಞೆ ವಿಷಯವಾಗಿ ಮಾತನಾಡಿದರು. ರಾಜಕಾರಣದಹೃದಯ ಪ್ರಜಾಪ್ರಭುತ್ವ. ಕ್ರಿಪೂ 469ರಲ್ಲಿ ಅಥೆನ್ಸ್‌ನಗರದಲ್ಲಿ ಒಂದು ವ್ಯವಸ್ಥೆ ಆರಂಭವಾಯಿತು.ಮೊದಲನೆಯದು ರಾಷ್ಟ್ರೀಯ ಪ್ರಜೆ, ಮತ್ತೂಂದುದಾಸಪ್ರಜೆ. ಅಥೆನ್ಸ್‌ ನಗರದಲ್ಲಿರುವವರ ಸೇವೆಮಾಡಲು ಬೇರೆ ಕಡೆಯಿಂದ ಕರೆದುಕೊಂಡುಬಂದವರನ್ನು ದಾಸ ಪ್ರಜೆಗಳು ಎಂದು ಕರೆದರು.ಅಲ್ಲಿ ರಾಜಸತ್ತೆ ಇತ್ತು. ಜನರ ಮೇಲೆ ಪ್ರಭುತ್ವದಹಿಡಿತವಿತ್ತು.

ಸಾಕ್ರೆಟಿಸ್‌ನು ಅಲ್ಲಿ ತತ್ವಜ್ಞಾನ ಪ್ರಚಾರಮಾಡುತ್ತಾನೆ. ಯುವಕರು ಆತನ ಭಾಷಣವನ್ನುಕೇಳುತ್ತಾರೆ. ಅವರ ಭಾಷಣ ಯುವಕರ ಮೇಲೆಪ್ರಭಾವ ಬೀರುತ್ತದೆ. ಅದರಿಂದ ಪ್ರಜೆಗಳೆಲ್ಲಒಟ್ಟುಗೂಡಿ ರಾಜ್ಯದ ವಿಚಾರಗಳನ್ನು ನಿರ್ಣಯಿಸಿಆಡಳಿತಾತ್ಮಕವಾದ ಪ್ರಜ್ಞೆಗಳನ್ನು ಮೂಡಿಸುತ್ತಾರೆಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next