Advertisement

ಬೂಸ್ಟರ್‌ ಡೋಸ್‌ ಪಡೆದುಕೊಳ್ಳಿ: ಶಿವು

07:17 PM Jul 29, 2022 | Team Udayavani |

ಚಿತ್ರದುರ್ಗ: ಸಾರ್ವಜನಿಕರು ಕೋವಿಡ್‌ಮುನ್ನೇಚ್ಚರಿಕಾ ಲಸಿಕೆ ಪಡೆಯುವಮೂಲಕ ಸುರಕ್ಷಿತವಾಗಿರಬೇಕು ಎಂದುವಕೀಲರ ಸಂಘದ ಜಿಲ್ಲಾ ಘಟಕದಅಧ್ಯಕ್ಷ ಸಿ. ಶಿವು ಯಾದವ್‌ ಸಲಹೆನೀಡಿದರು.ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿಆರೋಗ್ಯ ಇಲಾಖೆ ಮತ್ತು ಜಿಲ್ಲಾವಕೀಲರ ಸಂಘದ ಸಹಯೋಗದಲ್ಲಿಆಯೋಜಿಸಿದ್ದ ಬೂಸ್ಟರ್‌ ಡೋಸ್‌ಲಸಿಕೆ ಹಾಕುವ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

Advertisement

ಆರೋಗ್ಯಇಲಾಖೆ ಹರ್‌ ಘರ್‌ ದಸ್ತಕ್‌ ಅಡಿಯಲ್ಲಿವಕೀಲರ ಸಂಘದ ಎಲ್ಲಾ ಸದಸ್ಯರಿಗೂಕೋವಿಡ್‌ ಮುನ್ನೆಚ್ಚರಿಕೆ ಲಸಿಕಾ ನೀಡಲುಮುಂದೆ ಬಂದಿರುವುದು ಸ್ವಾಗತಾರ್ಹ.75 ದಿನಗಳವರೆಗೂ ಈ ಅಭಿಯಾನಉಚಿತವಾಗಿ ಎಲ್ಲಾ ಗ್ರಾಮಗಳಲ್ಲಿನಡೆಯುತ್ತಿದೆ ಎಂದರು.

ತಾಲೂಕು ಆರೋಗ್ಯಾಧಿ ಕಾರಿ ಡಾ|ಬಿ.ವಿ. ಗಿರೀಶ್‌ ಮಾತನಾಡಿ, ನಾವಿನ್ನೂಕೋವಿಡ್‌ ಜೊತೆ ನಮ್ಮ ಜೀವನಸಾಗಿಸುತ್ತಿದ್ದೇವೆ. ಸರ್ಕಾರ ಸೂಚಿಸಿರುವಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನುಚಾಚೂತಪ್ಪದೆ ಪಾಲಿಸಿ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next