Advertisement

ಈರುಳ್ಳಿ ಬೆಳೆಗೆ ಮಳೆಯ ಕರಿನೆರಳು

09:00 PM Jul 15, 2022 | Team Udayavani |

ಚಿತ್ರದುರ್ಗ: ನೆನೆ-ನೆನೆದು ಸುರಿಯುತ್ತಿರುವಜಿಟಿಜಿಟಿ ಮಳೆ ಬಯಲುಸೀಮೆ ಕೋಟೆನಾಡನ್ನುಅಕ್ಷರಶಃ ಮಲೆನಾಡನ್ನಾಗಿಸಿದೆ. ಆಗಾಗ ಬಂದುಹೋಗುವ ಮಳೆಯಿಂದ ಕೃಷಿ ಚಟುವಟಿಕೆಗಳಮೇಲೆ ಕರಿನೆರಳು ಬಿದ್ದಿದೆ.ಕಳೆದೊಂದು ತಿಂಗಳು ಮಳೆಯಸುದ್ದಿಯೇ ಇಲ್ಲದೆ ಪರಿತಪಿಸುತ್ತಿದ್ದ ಜಿಲ್ಲೆಯರೈತ ಸಮುದಾಯ, ಈಗ ಇದೆಂಥಾಮಳೆಯಪ್ಪ ಎಂದು ಚಿಂತೆಗೀಡಾಗಿದ್ದಾರೆ.

Advertisement

ತಗ್ಗು ಪ್ರದೇಶದ ಜಮೀನುಗಳು ಹಾಗೂತಂಪಾದ ವಾತಾವರಣದಿಂದ ಈರುಳ್ಳಿ ಬೆಳೆಗೆ ಕೊಳೆರೋಗ ತಗುಲುತ್ತಿದೆ. ಬಹುತೇಕ ಈರುಳ್ಳಿ ಸಸಿಗಳಗರಿಗಳು ಹಳದಿ ಬಣ್ಣಕ್ಕೆ ತಿರುಗುತ್ತಿದ್ದು, ರೈತರುಔಷ ಧಿ ಸಿಂಪಡಣೆ ಮಾಡಿ ಬೆಳೆ ಉಳಿಸಿಕೊಳ್ಳಲುಮಳೆ ಅವಕಾಶ ಕೊಡುತ್ತಿಲ್ಲ.

ಇದೇ ವಾತಾವರಣಇನ್ನೂ ಒಂದು ವಾರ ಮುಂದುವರೆದರೆ ಏನುಗತಿ ಎನ್ನುವ ಆತಂಕ ಜಿಲ್ಲೆಯ ರೈತರಲ್ಲಿ ಮನೆಮಾಡಿದೆ.ಹತ್ತಿ, ಈರುಳ್ಳಿ, ಶೇಂಗಾ, ಮೆಕ್ಕೆಜೋಳ, ಸಾವೆಮತ್ತಿತರೆ ಬೆಳೆಗಳಿಗೆ ಮಳೆಯ ಅಗತ್ಯವಿತ್ತು.ಒಂದೆರಡು ಸಲ ಬಿರುಸಾಗಿ ಮಳೆಯಾಗಿ ಮತ್ತೆಬಿಸಿಲು ಹೊಡೆದಿದ್ದರೆ ವಾತಾವರಣ ಚೆನ್ನಾಗಿರುತ್ತಿತ್ತು.

ಆದರೆ, ನಿರಂತರ ಜಿಟಿಜಿಟಿ ಮಳೆಯಿಂದಾಗಿಇಡೀ ವಾತಾವರಣ ಶೀತಮಯವಾಗಿದೆ. ಇದರಪರಿಣಾಮ ಈರುಳ್ಳಿ, ಮೆಕ್ಕೆಜೋಳ, ಶೇಂಗಾದಂತಹಬೆಳೆಗಳ ಮೇಲೆ ಆಗುತ್ತಿದೆ. ತುಸು ಕಡಿಮೆಮಳೆಯಾಗಿರುವ, ಚಳ್ಳಕೆರೆ, ಮೊಳಕಾಲ್ಮೂರುಭಾಗದ ರೈತರು ಪರವಾಗಿಲ್ಲ, ಈಗ ಮಳೆ ಬಿಡುವುಕೊಟ್ಟರೂ ಬೆಳೆಗಳು ಉಳಿಯುತ್ತವೆ ಎನ್ನುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next