Advertisement

ಅಗ್ನಿಪಥ ಯೋಜನೆ ರದ್ದತಿಗೆ ಆಗ್ರಹ

05:12 PM Jun 28, 2022 | Team Udayavani |

ಚಿತ್ರದುರ್ಗ: ಕೇಂದ್ರ ಸರ್ಕಾರ ಸೇನೆಗೆ ಯುವಕರನ್ನುಸೇರಿಸಲು ರೂಪಿಸಿರುವ ಅಗ್ನಿಪಥ ಯೋಜನೆಯನ್ನುರದ್ದು ಮಾಡಿ ಶಾಶ್ವತವಾಗಿ ಉದ್ಯೋಗ ನೀಡುವಯೋಜನೆ ರೂಪಿಸಬೇಕು. ಗುತ್ತಿಗೆ ಆಧಾರದಲ್ಲಿಸೇನೆಗೆ ನೇಮಕಾತಿ ಸರಿಯಲ್ಲ ಎಂದು ಆಗ್ರಹಿಸಿಜಿಲ್ಲಾ ಕಾಂಗ್ರೆಸ್‌ ಘಟಕದಿಂದ ನಗರದ ಒನಕೆ ಓಬವ್ವವೃತ್ತದಲ್ಲಿ ಧರಣಿ ನಡೆಯಿತು.

Advertisement

ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷಜಿ.ಎಸ್‌. ಮಂಜುನಾಥ್‌ ಧರಣಿಯನ್ನುದ್ದೇಶಿಸಿಮಾತನಾಡಿ, ಅಗ್ನಿಪಥ ಯೋಜನೆಯಿಂದಯುವಜನತೆಯಲ್ಲಿ ದೇಶಾಭಿಮಾನ ಮೂಡುವಬದಲು ವೇತನಾಭಿಮಾನ ಮೂಡಿಸುವ ಕೆಲಸಮಾಡಲಾಗುತ್ತಿದೆ ಎಂದು ದೂರಿದರು.ಅಗ್ನಿಪಥ ಯೋಜನೆ ಜಾರಿಗೆ ತರುವಮೊದಲು ಮೂರು ಸೇನಾ ಪಡೆಗಳ ರಕ್ಷಣಾಸಚಿವಾಲಯಗಳೊಂದಿಗೆ ಸುದೀರ್ಘ‌ ಸಮಾಲೋಚನೆನಡೆಸಬೇಕಿತ್ತು.

ವಿವಿಧ ಇಲಾಖೆಗಳು ರಾಜಕೀಯಪಕ್ಷಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ ಅಗತ್ಯ ಸಲಹೆಪಡೆದು ಸುಧಾರಣೆಗಳನ್ನು ತರಬೇಕು. ಅಗ್ನಿಪಥಯೋಜನೆಯಿಂದ ರಾಷ್ಟ್ರೀಯ ಭದ್ರತೆಗೆ ಮತ್ತುಮೂರು ಸೇನಾಪಡೆಗಳ ಮೇಲೆ ಆಗುವ ಪರಿಣಾಮದಕುರಿತು ವಸ್ತುಸ್ಥಿತಿ ಅಧ್ಯಯನಕ್ಕಾಗಿ ಸಮಿತಿಯನ್ನುರಚಿಸಿ ಅದರ ಶಿಫಾರಸು ಪಡೆಯಬೇಕಿತ್ತು. ಈಯೋಜನೆಯಿಂದ ಸಶಸ್ತ್ರ ಪಡೆಗಳಲ್ಲಿ 4 ವರ್ಷಗಳಅವ ಗೆ ಸೇವೆ ಸಲ್ಲಿಸಿದ ನಂತರ ಯುವಜನರುಭವಿಷ್ಯದಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿಅವಕಾಶಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆಎಂದರು.

Advertisement

Udayavani is now on Telegram. Click here to join our channel and stay updated with the latest news.

Next