Advertisement

ಬಾಲ ಕಾರ್ಮಿಕ ಪದ್ದತಿ ತಡೆಗೆ ಶ್ರಮಿಸಿ: ಬಾಲಕೃಷ್ಣ

07:42 PM Oct 01, 2021 | Team Udayavani |

ಚಿತ್ರದುರ್ಗ: ಹೋಟೆಲ್‌, ಬಾರ್‌, ಗ್ಯಾರೇಜ್‌ಗಳಲ್ಲಿ ಮಕ್ಕಳು ಸಾಕಷ್ಟು ಸಂಖ್ಯೆಯಲ್ಲಿ ಕೆಲಸಮಾಡುತ್ತಿದ್ದಾರೆ. ಕಾರ್ಮಿಕ ಇಲಾಖೆಯವರು ದಾಳಿನಡೆಸಿ ಬಾಲ ಕಾರ್ಮಿಕ ಪದ್ಧತಿ ತಡೆಯುವಂತೆ ಅಪರ ಜಿಲ್ಲಾ ಧಿಕಾರಿ ಇ.ಬಾಲಕೃಷ್ಣ ಅ ಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾ ಧಿಕಾರಿ ಕಚೇರಿ ಸಭಾಂಗಣದಲ್ಲಿಗುರುವಾರ ನಡೆದ ಎಸ್‌ಸಿಪಿ-ಟಿಎಸ್‌ಪಿಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಬಾಲಕಾರ್ಮಿಕಪದ್ಧತಿ ಕುರಿತು ವ್ಯಾಪಕ ಜಾಗೃತಿ ಮೂಡಿಸಬೇಕು.ಬಾಲಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಅಪರಾಧ. ಬಾಲಕಾರ್ಮಿಕರನ್ನು ಗುರುತಿಸಿಅವರಿಗೆ ವಸತಿ, ಶಿಕ್ಷಣ ನೀಡಬೇಕು ಎಂದರು.ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಮೀಕ್ಷೆಮೂಲಕ ಬಾಲಕಾರ್ಮಿಕರನ್ನು ಗುರುತಿಸಿಅವರಿಗೆ ವಸತಿ, ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯಒದಗಿಸಲಾಗುವುದು ಎಂದು ಸಭೆಗೆ ಕಾರ್ಮಿಕ ಅ ಧಿಕಾರಿಗಳು ತಿಳಿಸಿದರು.

ಎಸ್‌ಸಿಪಿ-ಟಿಎಸ್‌ಪಿ ಅನುದಾನ ಪೂರ್ಣ ಬಳಸಿ:ಪರಿಶಿಷ್ಟ ಜಾತಿಯ ವಿಶೇಷ ಘಟಕ ಯೋಜನೆಹಾಗೂ ಗಿರಿಜನ ಉಪಯೋಜನೆಯಡಿಯಲ್ಲಿಪರಿಶಿಷ್ಟರಿಗೆ ಹಂಚಿಕೆಯಾದ ಅನುದಾನ ವಿಳಂಬಮಾಡದೆ ನಿಗದಿಪಡಿಸಿದ ಕಾಲಮಿತಿಯೊಳಗೆತ್ವರಿತಗತಿಯಲ್ಲಿ ಸದ್ಭಳಕೆ ಮಾಡಿ ಎಂದು ಅಪರ ಜಿಲ್ಲಾಧಿ ಕಾರಿ ಬಾಲಕೃಷ್ಣ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಎಸ್‌ಸಿಎಸ್‌ಪಿ-ಟಿಎಸ್‌ಪಿ ಯೋಜನೆಯಲ್ಲಿ ಹಂಚಿಕೆಯಾದ ಅನುದಾನವನ್ನು ಶೇ. 100 ರಷ್ಟುಬಳಕೆ ಮಾಡದ ಇಲಾಖೆ ಅ ಧಿಕಾರಿಗಳು, ಬಾಕಿಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಪ್ರಗತಿ ಸಾಧಿ ಸಿ ಎಂದರು.

ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕಿಮಮತಾ ಮಾತನಾಡಿ, ಸಣ್ಣ ನೀರಾವರಿ ಇಲಾಖೆ,ವಸತಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಹಂಚಿಕೆಯಾದ ಅನುದಾನದಲ್ಲಿ ಎಸ್‌ಸಿಎಸ್‌ಪಿ-ಟಿಎಸ್‌ಪಿಯಲ್ಲಿ ಶೇ. 100 ರಷ್ಟು ಪ್ರಗತಿಸಾಧಿ ಸಿವೆ. ಆಹಾರ ಮತ್ತು ನಾಗರೀಕ ಸರಬರಾಜುಇಲಾಖೆ, ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗಳು ಹಂಚಿಕೆಯಾದ ಅನುದಾನದಲ್ಲಿ ಎಸ್‌ಸಿಪಿ ಶೇ.98,ಟಿಎಸ್‌ಪಿ ಶೇ.91 ರಷ್ಟು ಹಾಗೂ ಕೃಷಿ ಇಲಾಖೆಎಸ್‌ಸಿಪಿ ಶೇ.94, ಟಿಎಸ್‌ಪಿ ಯಲ್ಲಿ ಶೇ.96 ಪ್ರಗತಿಸಾ ಸಿವೆ, ಇನ್ನುಳಿದಂತೆ ಇತರೆ ಇಲಾಖೆಗಳು ಶೇ.100 ರಷ್ಟು ಪ್ರಗತಿಯನ್ನು ಸಾ ಧಿಸಬೇಕು ಎಂದುಸಭೆಗೆ ತಿಳಿಸಿದರು.ಸಭೆಯಲ್ಲಿ ಪಿಆರ್‌ಇಡಿ ಕಾರ್ಯಪಾಲಕಇಂಜಿನಿಯರ್‌ ಎಸ್‌. ಭಾರತಿ ಸೇರಿದಂತೆಜಿಲ್ಲಾ ಮಟ್ಟದ ಅನುಷ್ಠಾನ ಅ ಧಿಕಾರಿಗಳುಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next