ಚಿತ್ರದುರ್ಗ: ನಗರದ ಶ್ರೀ ರಾಜಾಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಿಯಉತ್ಸವದ ಅಂಗವಾಗಿ ಶುಕ್ರವಾರ ನಗರದರಾಜ ಬೀದಿಗಳಲ್ಲಿ ದೇವಿಯ ವೈಭವಯುತಮೆರವಣಿಗೆ ನಡೆಯಿತು.ಮೆರವಣಿಗೆಗಾಗಿ ಅಶ್ವಾರೂಢಳನ್ನಾಗಿದ್ದದೇವಿಯನ್ನು ಕಮಲ, ಗುಲಾಬಿ,ಕನಕಾಂಬರ, ಸೇವಂತಿಗೆ, ಸುಗಂಧರಾಜ,ಮಲ್ಲಿಗೆ ಸೇರಿದಂತೆ ನಾನಾ ಬಣ್ಣದಹೂವುಗಳಿಂದ ಸಿಂಗರಿಸಲಾಗಿತ್ತು.ಮನಮೋಹಕವಾಗಿ ಪೋಣಿಸಿದ್ದಹೂವಿನಿಂದ ದೇವಿಯು ಭಕ್ತರ ಕಣ್ಮನಸೆಳೆದರು.
ಐದು ಕೆ.ಜಿ. ಒಣದ್ರಾಕ್ಷಿಯಿಂದತಯಾರಾಗಿದ್ದ ಮಾಲೆಯನ್ನೂ ದೇವಿಗೆಅರ್ಪಿಸಲಾಗಿತ್ತು.ಉತ್ಸವ ಮೂರ್ತಿಯನ್ನು ಎತ್ತಿನಬಂಡಿಯಲ್ಲಿ ಪ್ರತಿಷ್ಠಾಪಿಸಿದ್ದ ದೇವಿಯಉತ್ಸವ ಮೂರ್ತಿಯ ಮೆರವಣಿಗೆಗೆ ಶಾಸಕಜಿ.ಎಚ್.ತಿಪ್ಪಾರೆಡ್ಡಿ ಕೋಟೆ ರಸ್ತೆಯಲ್ಲಿಚಾಲನೆ ನೀಡಿದರು. ಈ ವೇಳೆ ಉಧೋಉಧೋ ಎಂಬ ಉದ್ಘಾರದೊಂದಿಗೆಮೆರವಣಿಗೆ ಸಾಗಿತು.