Advertisement

ಗುಣಮಟ್ಟದ ಬೋಧನೆಗೆ ತರಬೇತಿ ಅತ್ಯಗತ್ಯ: ಪ್ರಶಾಂತ್‌

08:47 PM Mar 16, 2022 | Team Udayavani |

ಚಿತ್ರದುರ್ಗ: ಗುಣಮಟ್ಟದ ಬೋಧನೆ ಮತ್ತುಸುವ್ಯವಸ್ಥಿತ ತರಗತಿ ನಿರ್ವಹಣೆಗೆ ಶಿಕ್ಷಕರಿಗೆತರಬೇತಿಗಳು ಅಗತ್ಯ ಎಂದು ನೋಡಲ್‌ಅ ಧಿಕಾರಿ ಕೆ.ಜಿ. ಪ್ರಶಾಂತ್‌ ಹೇಳಿದರು.ನಗರದ ಡಯಟ್‌ನಲ್ಲಿ ಜಿಲ್ಲೆಯಕೆ.ಪಿ.ಎಸ್‌ ಮತ್ತು ಸರ್ಕಾರಿ ಪ್ರಾಥಮಿಕಶಾಲೆಗಳ ಯುಕೆಜಿ ಶಿಕ್ಷಕರಿಗೆ ಆಯೋಜಿಸಿದ್ದಸನಿವಾಸ ತರಬೇತಿ ಕಾರ್ಯಾಗಾರದಸಮಾರೋಪದಲ್ಲಿ ಅವರು ಮಾತನಾಡಿದರು.

Advertisement

ಶಿಕ್ಷಕರು ಮಕ್ಕಳ ಮಟ್ಟಕ್ಕಿಳಿದು ಬೋಧಿಸಬೇಕು. ಕಲಿಕಾ ಪ್ರಕ್ರಿಯೆಯಲ್ಲಿ ಒತ್ತಡಹಾಕದೆ ಪ್ರೀತಿಯಿಂದ ಕಲಿಸಬೇಕು ಸಲಹೆನೀಡಿದರು.ಉಪನ್ಯಾಸಕ ಎಸ್‌. ಬಸವರಾಜುಮಾತನಾಡಿ, ಪೂರ್ವಬಾಲ್ಯ ಹಂತದಲ್ಲಿನೀಡುವ ಶಿಕ್ಷಣ ಭವಿಷ್ಯದ ಉನ್ನತ ಶಿಕ್ಷಣಪಡೆಯಲು ಭದ್ರ ಬುನಾದಿಯಾಗುತ್ತದೆ. ಸಕಾರಾತ್ಮಕ ಚಿಂತನೆಯಿಂದ ವ್ಯಕ್ತಿತ್ವ ವಿಕಸನಸಾಧ್ಯವಾಗುವುದರಿಂದ ಬುನಾದಿ ಸಾಕ್ಷರತೆಮತ್ತು ಸಂಖ್ಯಾ ಜ್ಞಾನ ಬೆಳೆಸುವುದರಜೊತೆಗೆ ಸಹಪಠ್ಯ ಚಟುವಟಿಕೆಗಳಲ್ಲಿಮಕ್ಕಳನ್ನು ತೊಡಗಿಸಬೇಕು.

ಶಿಕ್ಷಕರು ಮಕ್ಕಳಕಲಿಕಾ ಪ್ರಕ್ರಿಯೆಯಲ್ಲಿ ಕಲಿಕಾ ವೇಗದಭಿನ್ನತೆ ಗುರುತಿಸಿ ಪೂರಕವಾದ ಕಲಿಕಾಸಾಮಗ್ರಿಗಳು, ಚಟುವಟಿಕೆಗಳನ್ನು ಬಳಸಿಜ್ಞಾನದ ಮಕರಂದ ಹೀರುವ ಅವಕಾಶಕಲ್ಪಿಸಿಕೊಡಬೇಕು ಎಂದರು.ಉಪನ್ಯಾಸಕ ನಿತ್ಯಾನಂದ ಮಾತನಾಡಿ,ಶಿಕ್ಷಕರು ಮಕ್ಕಳಿಗೆ ಪೆನ್ಸಿಲ್‌ ಬಳಸಿಬರೆಯುವ ಸಾಮರ್ಥ್ಯ ಬೆಳೆಸಬೇಕು.ಮಾತುಗಾರಿಕೆ ಕೌಶಲ ಬೆಳೆಸಲು ಅವಕಾಶಕಲ್ಪಿಸಿ ಉಚ್ಚಾರಣೆಯಲ್ಲಿ ಕಂಡುಬರುವದೋಷಗಳನ್ನು ತಿದ್ದಬೇಕು.

ಉತ್ತಮಮಾತುಗಾರಿಕೆ ಕೌಶಲ ಬೆಳೆಸಿಕೊಳ್ಳಲುಆತ್ಮವಿಶ್ವಾಸ ಬೆಳೆಸಿಕೊಳ್ಳಲು ಪ್ರೇರಣೆನೀಡಬೇಕು ಎಂದು ತಿಳಿಸಿದರು.ಹಿರಿಯ ಉಪನ್ಯಾಸಕ ಎಸ್‌.ಸಿ.ಪ್ರಸಾದ್‌, ಸಂಪನ್ಮೂಲ ವ್ಯಕ್ತಿಗಳಾದ ಜಾವಿದ್‌ಭಾಷಾ, ಉಷಾ, ತಾಂತ್ರಿಕ ಸಹಾಯಕರಾದಕೆ.ಆರ್‌.ಲೋಕೇಶ್‌ ಕೆ.ಲಿಂಗರಾಜುಉಪಸ್ಥಿತರಿದ್ದರು. ಶಿಬಿರಾರ್ಥಿಗಳಾದನರ್ಮದಾ, ಎಸ್‌.ಟಿ. ಬಸವರಾಜುತರಬೇತಿ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.ಡಿ.ಸಿ. ದೀಪು ಪ್ರಾರ್ಥಿಸಿದರು. ಎ.ಬಿ. ಕಾವ್ಯಸ್ವಾಗತಿಸಿದರು. ಆರ್‌. ಸುಮಾ ವಂದಿಸಿದರು.ಸಿ. ಭಾಗ್ಯಲಕ್ಷ್ಮೀ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next