ಚಿತ್ರದುರ್ಗ: ಎಲ್ಲರಿಗೂ ಒಂದೊಂದುಜಾತಿ-ಧರ್ಮವಿದೆ. ಅದೆಲ್ಲ ಮನೆಯಲ್ಲಿರಬೇಕು.ಬೀದಿಗೆ ಬಂದು ವಿವಾದಕ್ಕೆ ಸಿಲುಕಿಕೊಳ್ಳಬಾರದುಎಂದು ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿಹೇಳಿದರು.ನಗರದ ವಿ.ಪಿ. ಬಡಾವಣೆಯ ಸರ್ಕಾರಿಶಾಲೆಯಲ್ಲಿ ಗುರುವಾರ ರಾಷ್ಟ್ರಮಟ್ಟದಹ್ಯಾಂಡ್‌ಬಾಲ್ ಪಂದ್ಯಕ್ಕೆ ಆಯ್ಕೆಯಾಗಿರುವಕ್ರೀಡಾಪಟುಗಳನ್ನು ಸನ್ಮಾನಿಸಿ ಶ್ರೀಗಳುಮಾತನಾಡಿದರು.
ಕಳೆದ ಕೆಲ ದಿನಗಳಿಂದಅನೇಕ ವಿದ್ಯಾರ್ಥಿಗಳು ಬೇಡದ ವಿಚಾರಗಳಿಗೆಸುದ್ದಿಯಾಗುತ್ತಿದ್ದಾರೆ. ನೀವೆಲ್ಲಾ ಚೆನ್ನಾಗಿಓದಿ ಸರ್ಕಾರಿ ನೌಕರಿ ಪಡೆದುಕೊಂಡುಬೇರೆ ಬೇರೆ ಕ್ಷೇತ್ರಗಳಿಗೆ ಹೋಗಿ ಕುಟುಂಬಕ್ಕೆಆಧಾರವಾಗಬೇಕು ಎಂದರು.ಸಮಯ ವ್ಯರ್ಥ ಮಾಡದೆ, ಧರ್ಮ,ಸಂಸ್ಕೃತಿ, ಭಾಷೆ ಎಲ್ಲವನ್ನೂ ಮೀರಿ ಬದುಕುರೂಪಿಸಿಕೊಳ್ಳುವುದು ಬಹಳ ಮುಖ್ಯ.
ಇದರಲ್ಲಿಶಿಕ್ಷಕರು ಮತ್ತು ಪೋಷಕರ ಜವಾಬ್ದಾರಿಬಹಳಷ್ಟಿದೆ. ವಿದ್ಯಾರ್ಥಿ ಜೀವನದಲ್ಲಿ ಅನಗತ್ಯವಿವಾದಗಳ ಕಡೆಗೆ ಆಕರ್ಷಿತರಾಗಿ ವಿದ್ಯಾರ್ಥಿಜೀವನ ಹಾಳು ಮಾಡಿಕೊಳ್ಳಬೇಡಿ ಎಂದುಕಿವಿಮಾತು ಹೇಳಿದರು.ಜಿಲ್ಲಾ ಹ್ಯಾಂಡ್‌ಬಾಲ್ ಸಂಸ್ಥೆಯ ಉಪಾಧ್ಯಕ್ಷಅಬ್ದುಲ್ ರೆಹಮಾನ್ ಮಾತನಾಡಿ, ಎಲ್ಲರೂಭಾರತೀಯರೆಂಬ ಭಾವನೆ ರೂಢಿಸಿಕೊಳ್ಳಬೇಕು.ಯಾವುದೇ ಕ್ರೀಡೆಯಾದರೂ ಸತತ ಪರಿಶ್ರಮಮತ್ತು ತರಬೇತಿಯಿಂದ ಮಾತ್ರ ರಾಷ್ಟ್ರ ಮಟ್ಟದಲ್ಲಿಸ್ಪ ರ್ಧಿಸಲು ಸಾಧ್ಯ. ಓದಿನ ಜೊತೆ ಕ್ರೀಡೆಗೂಆದ್ಯತೆ ನೀಡಿದಾಗ ಕ್ರೀಡೆ ಮತ್ತು ನೌಕರಿಯಲ್ಲಿಅವಕಾಶ ಸಿಗುತ್ತದೆ.
ಎಲ್ಲರ ತಲೆಯಲ್ಲಿಯೂಬುದ್ಧಿ ಇದ್ದೇ ಇರುತ್ತದೆ. ಅದನ್ನು ಹೇಗೆಬೆಳೆಸಿಕೊಳ್ಳುತ್ತಾರೋ ಅದರ ಮೇಲೆ ಭವಿಷ್ಯನಿಂತಿದೆ. ಸರ್ಕಾರವೂ ಕ್ರೀಡೆಗೆ ಸಾಕಷ್ಟುಪ್ರೋತ್ಸಾಹ ನೀಡುತ್ತಿದ್ದು, ಬಳಸಿಕೊಂಡು ನಾಡಿಗೆಕೀರ್ತಿ ತರಬೇಕು ಎಂದು ಕರೆ ನೀಡಿದರು.ವೆಸ್ಟ್ರನ್ ಹಿಲ್ಸ್ ಶಾಲೆಯ ಪ್ರಾಚಾರ್ಯರಿಜ್ವಾನ್, ನಿವೃತ್ತ ದೈಹಿಕ ಶಿಕ್ಷಣಾಧಿ ಕಾರಿ ಎಂ.ಎಚ್.ಜಯಣ್ಣ, ಶಾಲೆಯ ಮುಖ್ಯ ಶಿಕ್ಷಕ ವೆಂಕಟಪತಿಮಾತನಾಡಿದರು.
15 ವರ್ಷದೊಳಗಿನಬಾಲಕಿಯರ ವಿಭಾಗದಲ್ಲಿ ರಾಷ್ಟ್ರೀಯ ಹ್ಯಾಂಡ್‌ಬಾಲ್ ಪಂದ್ಯಕ್ಕೆ ಆಯ್ಕೆಯಾಗಿರುವ ತಬಸ್ಸುಂ,ಎನ್.ಟಿ. ಉಷಾ, ಎಸ್. ಪೂಜಾ, ಸಾನಿಯಾ,μಝಾ ಕೌಸರ್ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಜಿಲ್ಲಾ ಹ್ಯಾಂಡ್‌ಬಾಲ್‌ಸಂಸ್ಥೆ ಕಾರ್ಯಾಧ್ಯಕ್ಷ ಕೆ.ಎಚ್. ಶಿವರಾಮು,ಬಿಟ್ಸ್ ಹೈಟೆಕ್ ಕಾಲೇಜು ಪ್ರಾಚಾರ್ಯ ಕೆ.ಬಿ.ರವೀಂದ್ರ, ಪತ್ರಕರ್ತ ರವಿ ಮಲ್ಲಾಪುರ, ಜಿಲ್ಲಾಹ್ಯಾಂಡ್‌ಬಾಲ್ ಸಂಸ್ಥೆ ಖಜಾಂಚಿ ಪ್ರೇಮಾನಂದ್,ತರಬೇತುದಾರ ಕೆ.ಎಸ್. ಕಾರ್ತಿಕ್ ಮತ್ತಿತರರುಭಾಗವಹಿಸಿದ್ದರು.