Advertisement

ಕೋಟೆ ನಾಡಲ್ಲಿ 1427 ಸೋಂಕಿತರಿಗೆ ಮನೆ ಮದ್ದು

04:37 PM Jan 20, 2022 | Team Udayavani |

ಚಿತ್ರದುರ್ಗ: ಇಡೀ ಜಗತ್ತಿಗೆ ತಲೆನೋವಾಗಿರುವಕೊರೊನಾ ವೈರಾಣು ಸರ್ಕಾರ, ತಜ್ಞರು, ವೈದ್ಯರಜೊತೆ ಕಣ್ಣಾಮುಚ್ಚಾಲೆಯಲ್ಲಿ ತೊಡಗಿದೆ.ಮೊದಲ ಅಲೆಯಲ್ಲಿ ವೈರಸ್‌ನ ಲಕ್ಷಣಗಳೇನು,ಇದು ಹೇಗೆ ಹರಡುತ್ತದೆ, ಯಾವ ಔಷಕೊಡಬೇಕು ಎಂದು ವೈದ್ಯಕೀಯ ವ್ಯವಸ್ಥೆತಲೆಕೆಡಿಸಿಕೊಳ್ಳುವಂತೆ ಮಾಡಿತ್ತು.

Advertisement

ಇನ್ನೇನುಮುಗಿಯಿತು ಎನ್ನುವ ಹೊತ್ತಿಗೆ ಎರಡನೇ ಅಲೆತನ್ನ ಕೆನ್ನಾಲಗೆ ಚಾಚಿತ್ತು.ಉಸಿರಾಟದ ತೊಂದರೆ, ಆಕ್ಸಿಜನ್‌ಹಾಹಾಕಾರ ರೆಮಿಡಿಸಿವಿರ್‌ಗೆ ಪರದಾಟಹೀಗೆ ಜನಸಾಮಾನ್ಯರು ಸೇರಿದಂತೆ ಇಡೀವ್ಯವಸ್ಥೆಯನ್ನು ಹೈರಾಣಾಗಿಸಿತು. ಈಗ ಮೂರನೇಅಲೆಗಾಗಿ ಸರ್ಕಾರ ಆಸ್ಪತ್ರೆಗಳಲ್ಲಿ ಸಾಕಷ್ಟುಬೆಡ್‌, ಆಕ್ಸಿಜನ್‌ ಪ್ಲಾಂಟ್‌, ಐಸಿಯು ಸಿದ್ಧತೆಮಾಡಿಕೊಂಡು ಅಣಿಯಾಗಿದ್ದರೆ, ಮೂರನೇಅಲೆ ಅಷ್ಟೇನು ತೊಂದರೆ ಮಾಡುವುದಿಲ್ಲ,ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯಬಹುದುಎನ್ನುವ ನಿರ್ಧಾರಕ್ಕೆ ಬರುವಂತಾಗಿದೆ.

ದಿನದಿನವೂ ಕೋವಿಡ್‌ ಸೋಂಕಿನ ಪ್ರಮಾಣಹಬ್ಬುತ್ತಲೇ ಇದೆ. ಆದರೆ ಆಸ್ಪತ್ರೆಗೆಬಂದು ದಾಖಲಾಗುವವರ ಸಂಖ್ಯೆಮಾತ್ರ ಶೇ. 5ರಷ್ಟನ್ನು ದಾಟಿಲ್ಲ.ಈಗ ಸೋಂಕಿತ ವ್ಯಕ್ತಿಗಳ ಮನೆಗೆಔಷಧ ಕಿಟ್‌ ಕೊಡಲು ಆರೋಗ್ಯಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ತಿಪ್ಪೇಸ್ವಾಮಿ ನಾಕೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next