ಚಿತ್ರದುರ್ಗ: ಕೇಂದ್ರ ಸಚಿವ ಎ. ನಾರಾಯಣಸ್ವಾಮಿಅವರ ಫೇಸ್‌ಬುಕ್ ಪೇಜ್‌ನಲ್ಲಿ ದಕ್ಕಲಿಗರುಆದಿಜಾಂಬವರ ಬಹಿಷ್ಕೃತ ಮಕ್ಕಳು ಎನ್ನುವ ಪದಬಳಕೆ ಮಾಡಲಾಗಿದೆ. ಇದು ನಾಗರಿಕ ಸಮಾಜಕ್ಕೆತಪ್ಪು ಸಂದೇಶ ರವಾನಿಸಿದಂತಾಗುತ್ತದೆ.
ಆದ್ದರಿಂದನಾರಾಯಣಸ್ವಾಮಿ ಅವರು ಅನ್ಯಥಾ ಭಾವಿಸದೇಸ್ಪಷ್ಟೀಕರಣ ನೀಡಬೇಕು ಎಂದು ಕೋಡಿಹಳ್ಳಿಆದಿಜಾಂಬವ ಮಠದ ಶ್ರೀ ಷಡಕ್ಷರಮುನಿದೇಶಿಕೇಂದ್ರ ಸ್ವಾಮೀಜಿ ಆಗ್ರಹಿಸಿದ್ದಾರೆ.ನಗರದ ಪತ್ರಿಕಾ ಭವನದಲ್ಲಿ ಸೋಮವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು,ದಕ್ಕಲಿಗರ ಸಮಾವೇಶ ನಡೆಸಿ ಅವರಶ್ರೇಯೋಭಿವೃದ್ಧಿಗೆ ಶ್ರಮಿಸುವುದಾಗಿ ಸಚಿವರುತಿಳಿಸಿರುವುದು ಸ್ವಾಗತಾರ್ಹ.
ಆದರೆ ಅವರಅ ಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ದಕ್ಕಲಿಗರು ಆದಿಜಾಂಬವರ ಬಹಿಷ್ಕೃತ ಮಕ್ಕಳು ಎಂದುಹೇಳಿರುವುದು ಆದಿಜಾಂಬವ ಮಠದ ವೈಚಾರಿಕಪರಂಪರೆ, ಸೇವೆ ಹಾಗೂ ಘನತೆಗೆ ಚ್ಯುತಿತರುವಂಥದ್ದು ಎಂದರು.ಆದಿಜಾಂಬವ ಮಠದ ಭಕ್ತರು, ಕುಲಗುರುಗಳಪರಂಪರೆ ಮೈಗೂಡಿಸಿಕೊಂಡಿರುವ ನಾರಾಯಣಸ್ವಾಮಿ ಅವರ ಹೇಳಿಕೆಯಿಂದಾಗಿ ಸಮುದಾಯಕಳವಳಗೊಂಡಿದೆ. ಮಠದ ನೂರಾರು ಭಕ್ತರು,ಪ್ರಾಜ್ಞರು ನಮ್ಮನ್ನು ಪ್ರಶ್ನೆ ಮಾಡಿ ಸ್ಪಷ್ಟೀಕರಣನೀಡುವಂತೆ ಮನವಿ ಮಾಡಿದ್ದಾರೆ. ಈಹೇಳಿಕೆ ಸಚಿವರೇ ಹಾಕಿರುವುದೋ, ಅವರಜಾಲತಾಣಗಳನ್ನು ನಿರ್ವಹಣೆ ಮಾಡುವ ತಂಡದಪ್ರಮಾದವೋ ಅಥವಾ ಕಣ್ತಪ್ಪಿನಿಂದ ಆಗಿರುವಸಂಗತಿಯೋ ಎನ್ನುವುದು ಸ್ಪಷ್ಟವಾಗಬೇಕಿದೆ ಎಂದುಹೇಳಿದರು.
ಆದಿಜಾಂಬವ ಪರಂಪರೆಯ ಮಠಾ ಧೀಶರನ್ನುಮಾದಿಗ ಉಪಜಾತಿಗಳು ಕುಲಗುರುವಾಗಿಶತಮಾನಗಳ ಹಿಂದೆಯೇ ಸ್ವೀಕರಿಸಿವೆ.ಉಪಜಾತಿಗಳಿಂದ ಯಾರಾದರೂ ಬಹಿಷ್ಕಾರಕ್ಕೆಒಳಗಾದ ಸಂದರ್ಭದಲ್ಲಿ ಮಠ ಮಧ್ಯಪ್ರವೇಶಿಸಿತಪ್ಪುಗಳ ಬಗ್ಗೆ ಅರಿವು ಮೂಡಿಸಿ, ಮುಖ್ಯವಾಹಿನಿಗೆಕರೆತರುವ ಪ್ರಯತ್ನ ಮಾಡಿದೆ. ಹಿರಿಯ ಗುರುಗಳುಬಹಳ ಹಿಂದೆಯೇ ಮಾದಿಗರು ಮತ್ತು ಮಾಶಾಳರನಡುವೆ ಮದುವೆ ನಡೆಸಿ ವೈಚಾರಿಕ ನಿಲುವುಪ್ರಕಟಿಸಿದ್ದಾರೆ ಎಂದು ತಿಳಿಸಿದರು.
ಆದಿಜಾಂಬವ ಮಠದ ಶ್ರೀ ಗುರುಪ್ರಕಾಶಮುನಿಸ್ವಾಮೀಜಿ ಮಾತನಾಡಿ, ಇತ್ತೀಚೆಗೆ ಕಾವಿಧರಿಸಿರುವ ಮಠಾ ಧೀಶರೊಬ್ಬರು ಇಂತಹಗೊಂದಲಗಳಿಗೆ ಮೂಲ ಕಾರಣರಾಗಿದ್ದಾರೆ.ದಕ್ಕಲಿಗರನ್ನು ಮುಖ್ಯವಾಹಿನಿಗೆ ತರುವ ಇಚ್ಛೆ ಇದ್ದರೆಅವರನ್ನು ದತ್ತು ಪಡೆಯಲಿ. ಸಮಾವೇಶ ನಡೆಸಿಮುಗ್ಧರನ್ನು ಭಾವನಾತ್ಮಕವಾಗಿ ಮರುಳು ಮಾಡಿಬಹಿಷ್ಕೃತರು ಎಂಬ ಹಣೆಪಟ್ಟಿ ಕಟ್ಟಲು ಅವಕಾಶಮಾಡಿಕೊಟ್ಟಿರುವುದು ಅಕ್ಷಮ್ಯ. ದಕ್ಕಲಿಗರ ಪೈಕಿವಿದ್ಯಾವಂತರೊಬ್ಬರನ್ನು ತಮ್ಮ ಉತ್ತರಾಧಿ ಕಾರಿಮಾಡಿಕೊಂಡು ದೊಡ್ಡತನ ಮೆರೆಯಲಿ ಎಂದುಪರೋಕ್ಷವಾಗಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಆದಿಜಾಂಬವ ಮಠದ ಶ್ರೀಶಿವಮುನಿ ಸ್ವಾಮೀಜಿ, ಟ್ರಸ್ಟಿಗಳಾದ ನಾಗಕುಮಾರ,ಚಿದಾನಂದ ಇದ್ದರು.