Advertisement

ಇನ್ಮುಂದೆ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದರೆ ಬೀಳುತ್ತೆ ದಂಡ

11:48 AM Aug 17, 2019 | Naveen |

ಚಿತ್ರದುರ್ಗ: ವಾಹನ ಸವಾರರೇ ಎಚ್ಚರ. ಇನ್ನು ಮುಂದೆ ನಗರದ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ನಿಮ್ಮ ವಾಹನ ನಿಲ್ಲಿಸಿ ಹೋದರೆ ದಂಡ ತೆರಬೇಕಾಗುತ್ತದೆ.

Advertisement

ಜಿಲ್ಲಾಧಿಕಾರಿ ಆರ್‌. ವಿನೋತ್‌ಪ್ರಿಯಾ, ಪೊಲೀಸ್‌ ಕಾಯ್ದೆ-1963ರ ಕಲಂ 31 (1)ಬಿ ಮತ್ತು ಮೋಟಾರ್‌ ವಾಹನ ಕಾಯ್ದೆ 1988 ರ ಕಲಂ 112, 115, 116 ಮತ್ತು 117ರಲ್ಲಿ ದತ್ತವಾಗಿರುವ ಅಧಿಕಾರ ಬಳಸಿ ಪಾರ್ಕಿಂಗ್‌ ವಿಚಾರದಲ್ಲಿ ಹಲವು ಬದಲಾವಣೆ ಮಾಡಿದ್ದಾರೆ.

ನಗರದಲ್ಲಿ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ಕಾರು ಮತ್ತು ಬೈಕ್‌ ನಿಲುಗಡೆ ಹಾಗೂ ನಿಲುಗಡೆ ನಿಷೇಧಿತ ಸ್ಥಳಗಳನ್ನು ಗುರುತಿಸಲಾಗಿದೆ.

ನೋ ಪಾರ್ಕಿಂಗ್‌: ಗಾಂಧಿ ವೃತ್ತದ ಬಾಲಾಜಿ ಬೇಕರಿ, ಸಿದ್ದೇಶ್ವರ ಟೆಕ್ಸ್‌ಟೈಲ್ ಆ್ಯಂಡ್‌ ಗಾರ್ಮೆಂಟ್ಸ್‌, ಕೆರಾನ್ಸ್‌ ಅಂಗಡಿ ಮುಂದೆ ವಾಹನ ನಿಲ್ಲಿಸುವಂತಿಲ್ಲ. ದಾವಣಗೆರೆ ರಸ್ತೆಯ ಮುಖ್ಯ ಅಂಚೆ ಕಚೇರಿ ಕ್ರಾಸ್‌ನಿಂದ ಈಶ್ವರ ಅಗ್ರೋ ಫರ್ಟಿಲೈಸರ್‌ವರೆಗೆ, ಇಂದಿರಾ ಕ್ಯಾಂಟಿನ್‌ ಮುಂಭಾಗ, ಯೂನಿಯನ್‌ ಥಿಯೇಟರ್‌ ಗೇಟ್ನಿಂದ ಕೆಎಸ್‌ಆರ್‌ಟಿಸಿ ಬಸ್‌ ಸ್ಟಾ ್ಯಂಡ್‌ ಮುಂಭಾಗದವರೆಗೆ. ಹೊಳಲ್ಕೆರೆ ರಸ್ತೆ (ಎಂ.ಜಿ. ಸರ್ಕಲ್) ಹಳ್ಳಿ ಮನೆ ಖಾನಾವಳಿಯಿಂದ ರಾಧಾಕೃಷ್ಣ ಹಾರ್ಡ್‌ವೇರ್‌ ಅಂಗಡಿವರೆಗೆ, ವೀರಭದ್ರೇಶ್ವರ ಟೀ ಸ್ಟಾಲ್ನಿಂದ ನೀಲಕಂಠೇಶ್ವರ ದೇವಸ್ಥಾನದವರೆಗೆ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಕಾರು ನಿಲುಗಡೆ ಸ್ಥಳ: ಬಿ.ಡಿ. ರಸ್ತೆಯ ಬಿಇಒ ಕಚೇರಿ ಕಂಪೌಂಡ್‌ ಪಕ್ಕದ ಆಟೋ ಸ್ಟಾ ್ಯಂಡ್‌ ಪ್ರಾರಂಭದ ಗೇಟ್ನಿಂದ ಕಾವೇರಿ ಸ್ಟೋರ್‌ವರೆಗೆ, ಪೈ ಶೋ ರೂಂನಿಂದ ಶ್ರೀನಿವಾಸ ಬುಕ್‌ ಸ್ಟೋರ್‌ವರೆಗೆ, ಉಪಾಧ್ಯಾ ರಿಪ್ರೇಶ್‌ಮೆಂಟ್ಸ್‌ನಿಂದ ಎಕ್ಸಲೆಂಟ್ ಸ್ಯಾರಿಸ್‌ ಆ್ಯಂಡ್‌ ಗಾರ್ಮೆಂಟ್ಸ್‌ವರೆಗೆ, ಆರ್ಥಿಕ ಸುರಕ್ಷತಾ ಕೇಂದ್ರ ಅಮೂಲ್ಯದಿಂದ ಮರುಳು ಸಿದ್ದೇಶ್ವರ ಕಾಂಡಿಮೆಂಟ್ಸ್‌ವರೆಗೆ, ಇಂದಿರಾ ಕ್ಯಾಂಟಿನ್‌ ಮುಕ್ತಾಯದಿಂದ ಕೆಎಸ್‌ಆರ್‌ಟಿಸಿ ಒಳಪ್ರವೇಶದ ಗೇಟ್ವರೆಗೆ. ಹೊಳಲ್ಕೆರೆ ರಸ್ತೆ ಬಾಫ್ನಾಸ್‌ ಟೆಕ್ಸ್‌ಟೈಲ್ನಿಂದ ನೀಲಕಂಠೇಶ್ವರ ಬಡಾವಣೆ 1ನೇ ಕ್ರಾಸ್‌ವರೆಗೆ, ಮುಖ್ಯ ಅಂಚೆ ಕಚೇರಿ ಕ್ರಾಸ್‌ನಿಂದ ಅಪೋಲೊ ಫಾರ್ಮಸಿವರೆಗೆ, ವಿಜಯ ಜ್ಯೂವೆಲರಿ ಮಾರ್ಟ್‌ನಿಂದ ವಿನಾಯಕ ಕಾಫಿವರ್ಕ್‌ವರೆಗೆ, ಮೈಲಾರಲಿಂಗೇಶ್ವರ ಸ್ವಾಮಿ ಪಾದಗಟ್ಟೆಯಿಂದ ಎಂ.ಜಿ. ಸರ್ಕಲ್ವರೆಗೆ.

Advertisement

ಬೈಕ್‌ ನಿಲುಗಡೆ ಸ್ಥಳ: ಬಿ.ಡಿ. ರಸ್ತೆಯ ಎಸ್‌ಜೆಎಂ ಡೆಂಟಲ್ ಕಾಲೇಜು ಗೇಟ್ ಪಕ್ಕದಿಂದ ಎಸ್‌ಬಿಐ ಬ್ಯಾಂಕ್‌ ಸಿಗ್ನಲ್ವರೆಗೆ, ಬೆಂಗಳೂರು ಬೇಕರಿ ಮುಂದಿನಿಂದ ಕಾಂತಿಸ್ವೀಟ್ಸ್‌ ಅಂಗಡಿವರೆಗೆ, ಚಿತ್ರ ಎಲೆಕ್ಟ್ರಿಕಲ್ ಅಂಗಡಿಯಿಂದ ಶಾಂತಿ ಸ್ವೀಟ್ಸ್‌ ಆ್ಯಂಡ್‌ ರಿಪ್ರಶ್‌ಮೆಂಟ್ವರೆಗೆ, ಶ್ರೀನಿವಾಸ ಬುಕ್‌ ಸ್ಟೋರ್‌ನಿಂದ ಕಾರ್ತಿಕ್‌ ಎಲೆಕ್ಟ್ರಿಕಲ್ ಅಂಗಡಿವರೆಗೆ, ಶಾರದಾ ಮೆಡಿಕಲ್ಸ್ನಿಂದ ಮಂಜುನಾಥ ಕಾಫಿ ವರ್ಕ್ಸ್ವರೆಗೆ, ಕಿರಣ್‌ ಸಿಲ್ಕ್ಸ್ನಿಂದ ಟಿಪಿ ಟೆಲಿಕಾಂವರೆಗೆ, ಎಸ್‌.ಬಿ.ಐ ಎಟಿಎಂನಿಂದ ದುರ್ಗ ಕಲರ್‌ ಲ್ಯಾಬ್‌ವರೆಗೆ. ದಾವಣಗೆರೆ ರಸ್ತೆ ಈಶ್ವರ ಆಗ್ರೋ ಫರ್ಟಿಲೈಸರ್‌ನಿಂದ ಕರ್ನಾಟಕ ಬ್ಯಾಂಕ್‌ ಎಟಿಎಂವರೆಗೆ, ನರ್ತಕಿ ಬಾರ್‌ ಆ್ಯಂಡ್‌ ರೆಸ್ಟೋರೆಂಟ್ನಿಂದ ಭೀಮೇಶ್ವರ ನಿಲಯದ ವರೆಗೆ, ಯೂನಿಯನ್‌ ಥಿಯೇಟರ್‌ ಗೇಟ್ನಿಂದ ನೀಲಕಂಠೇಶ್ವರ ದೇವಸ್ಥಾನದ ಕ್ರಾಸ್‌ವರೆಗೆ. ಹೊಳಲ್ಕರೆ ರಸ್ತೆಯಲ್ಲಿ ರಾಧಾಕೃಷ್ಣ ಹಾರ್ಡ್‌ವೇರ್‌ ಅಂಗಡಿಯಿಂದ ಬಾಫ್ನಾಸ್‌ ಟೆಕ್ಸೆಟೈಲ್ಸ್ನಿಂದ ಎಕ್ಸಕ್ಲೂಸಿವ್‌ವರೆಗೆ, ದಿವ್ಯ ಸ್ಪೆಷಲಿಸ್ಟ್‌ ಕ್ಲಿನಿಕ್‌ನಿಂದ ಗುರುಕೃಪ ಮೆಡಿಕಲ್ಸ್ವರೆಗೆ, ಅಪೋಲೊ ಫಾರ್ಮಸಿಯಿಂದ ವಿಜಯ ಜ್ಯೂವೆಲರಿ ಮಾರ್ಟ್‌ವರೆಗೆ.

ಆಟೋ ನಿಲುಗಡೆ: ದಾವಣಗೆರೆ ರಸ್ತೆ ವಿಜಿಎಸ್‌ ಕಂಫರ್ಟ್ಸ್ನಿಂದ ನರ್ತಕಿ ಬಾರ್‌ವರೆಗೆ. ಆಟೋ ಮತ್ತು ಗೂಡ್ಸ್‌ ವಾಹನಗಳನ್ನು ದಾವಣಗೆರೆ ರಸ್ತೆ ಎಪಿಎಂಸಿ ಕ್ರಾಸ್‌ ಯೂನಿಯನ್‌ ಪಾರ್ಕ್‌ ಎದುರಿನಿಂದ ಯೂನಿಯನ್‌ ಪಾರ್ಕ್‌ ಬಳಿ ಇಂದಿರಾ ಕ್ಯಾಂಟೀನ್‌ವರೆಗೆ ನಿಲುಗಡೆಗೆ ಮಾಡಬಹುದು ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಆದೇಶ ಹೊರಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next