Advertisement

ಹೊಸ ಮದ್ಯದಂಗಡಿಗೆ ಅನುಮತಿ ಬೇಡ

07:05 PM Jun 08, 2020 | Naveen |

ಚಿತ್ರದುರ್ಗ: ಯಾವುದೇ ಒತ್ತಡ ಬಂದರೂ ಚಳ್ಳಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ ಹೊಸ ಮದ್ಯದಂಗಡಿ ಅಥವಾ ಬೇರೆಡೆಯಿಂದ ವರ್ಗಾವಣೆ ಮಾಡಬಾರದು ಎಂದು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

Advertisement

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಈವರೆಗೆ ಚಳ್ಳಕೆರೆ ಕ್ಷೇತ್ರಕ್ಕೆ ನಾನು ಒಂದೂ ಮದ್ಯದ ಅಂಗಡಿ ತೆರೆಯಲು ಬಿಟ್ಟಿಲ್ಲ. ಇದನ್ನು ಅಬಕಾರಿ ಅಧಿಕಾರಿಗಳೂ ಮಾಡಬಾರದು. ರಾಜಕೀಯ ಒತ್ತಡಕ್ಕೆ ಮಣಿಯಬಾರದು ಎಂದರು. ಅಬಕಾರಿ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿ, ಚಳ್ಳಕೆರೆ ತಾಲೂಕು ವ್ಯಾಪ್ತಿಯಲ್ಲಿ ಸದ್ಯ 13 ಎಂಎಸ್‌ಐಎಲ್‌ ಮದ್ಯದಂಗಡಿ ಇದ್ದು, ಹೊಸದಾಗಿ ತೆರೆಯಲು ಅವಕಾಶ ನೀಡುವಂತೆ ನಾಲ್ಕು ಅರ್ಜಿಗಳು ಬಂದಿವೆ ಎಂದು ತಿಳಿಸಿದರು.

ಚಳ್ಳಕೆರೆ ಕಸಬ ಹಾಗೂ ಪರಶುರಾಂಪುರ ಹೋಬಳಿ ವ್ಯಾಪ್ತಿಯಲ್ಲಿ ಹೂವು, ಹಣ್ಣು ಹಾಗೂ ತರಕಾರಿ ಬೆಳೆಗಾರರ ಸುಮಾರು 20 ಕೋಟಿಯಷ್ಟು ಬೆಳೆಗಳ ನಷ್ಟ ಆಗಿದೆ. ಅದೇ ರೀತಿ ತುರುವನೂರು ಹೋಬಳಿಯ ವ್ಯಾಪ್ತಿಯಲ್ಲಿ ಎಷ್ಟು ಹೂವು, ಹಣ್ಣು, ತರಕಾರಿ ಬೆಳೆ ನಷ್ಟ ಆಗಿದೆ ಎಂದು ಸಮೀಕ್ಷೆ ಮಾಡಿ ವರದಿ ಸಲ್ಲಿಸಬೇಕು. ಹಾಗೆಯೇ ಈರುಳ್ಳಿ ಬೆಳೆ ನಷ್ಟದ ವರದಿಯನ್ನೂ ಕೊಡಬೇಕು ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸುಧಾಕರ್‌ ಅವರಿಗೆ ಸೂಚಿಸಿದರು.  ತಾಪಂ ಅಧ್ಯಕ್ಷ ಡಿ.ಎಂ. ಲಿಂಗರಾಜು, ಉಪಾಧ್ಯಕ್ಷೆ ಶಾಂತಮ್ಮ, ಇಒ ಎಚ್‌. ಕೃಷ್ಣನಾಯ್ಕ, ಬಿಇಒ ಸಿದ್ದಪ್ಪ, ಟಿಎಚ್‌ಒ ಡಾ.ಬಿ.ವಿ. ಗಿರೀಶ್‌, ಸಿಡಿಪಿಒ ಸುಧಾ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next