Advertisement

ಕಾನೂನಿಗಿಂತ ಯಾರೂ ಅತೀತರಲ್ಲ: ಸಿ.ಟಿ. ರವಿ

11:10 AM Sep 15, 2019 | Team Udayavani |

ಚಿತ್ರದುರ್ಗ: ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಕಸ್ಟಡಿಗೆ ಕೊಟ್ಟಿರುವುದು ನ್ಯಾಯಾಲಯವೇ ಹೊರತು ಬಿಜೆಪಿ ಅಲ್ಲ. ಕಾನೂನು ಮತ್ತು ನ್ಯಾಯಾಲಯಕ್ಕಿಂತ ಯಾರೂ ಅತೀತರಲ್ಲ. ಆದರೂ ಕೆಲವರು ಕಾನೂನಿಗಿಂತ ದೊಡ್ಡವರು ಅಂದುಕೊಳ್ಳುತ್ತಾರೆ ಎಂದು ಸಚಿವ ಸಿ.ಟಿ. ರವಿ ಟೀಕಿಸಿದರು.

Advertisement

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆಬಾಗಲೇಬೇಕು. ಡಿ.ಕೆ. ಶಿವಕುಮಾರ್‌ ವಿಚಾರದಲ್ಲಿ ಯಾರೇ ಅವರ ಬೆನ್ನಿಗೆ ನಿಂತರೂ ಅಂತಿಮವಾಗಿ ನ್ಯಾಯಾಲಯವೇ ತೀರ್ಮಾನ ಮಾಡಲಿದೆ. ಈ ವಿಷಯದಲ್ಲಿ ಕಾಂಗ್ರೆಸ್‌ ನಾಯಕರ ನಡೆ ಸರಿಯಲ್ಲ ಎಂದು ಕಿಡಿ ಕಾರಿದರು.

ಗೌರಿಗದ್ದೆ ವಿನಯಕುಮಾರ ಅವಧೂತರು ಯಡಿಯೂರಪ್ಪ ಅವರ ಗಾದಿಗೆ ಆಪ್ತರಿಂದಲೇ ಕಂಟಕವಿದೆ ಎಂಬ ಹೇಳಿಕೆ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವ ರವಿ, ಎಷ್ಟು ದಿನ ಅಧಿಕಾರದಲ್ಲಿರುತ್ತೇವೆ ಎನ್ನುವುದು ಮುಖ್ಯವಲ್ಲ. ಅಧಿಕಾರದಲ್ಲಿದ್ದಾಗ ಜನಪರ ಕೆಲಸ ಮಾಡಬೇಕು. ಯಾರ ಹಣೆಬರಹವನ್ನು ಯಾರೂ ನಿರ್ಧರಿಸುವುದಿಲ್ಲ. ಎಲ್ಲವನ್ನೂ ಭಗವಂತನೇ ನಿರ್ಧರಿಸಿ ಭೂಮಿಗೆ ಕಳಿಸಿರುತ್ತಾನೆ ಎಂದರು.

ಬ್ಯಾಂಕಿಂಗ್‌ ಪರೀಕ್ಷೆ ವಿಚಾರವಾಗಿ ಮಾತನಾಡಿದ ಅವರು, ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಪರೀಕ್ಷೆಗಳನ್ನು ಕೊಡಬೇಕು ಎಂದು ಈ ಹಿಂದೆಯೇ ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್‌ ಬಳಿ ಮನವಿ ಮಾಡಿದ್ದೆವು. ಅವರೂ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಆದರೆ, ಈಗ ನೋಟಿಫಿಕೇಶನ್‌ನಲ್ಲಿ ಬದಲಾವಣೆ ಆಗಿಲ್ಲ. ಈ ಬಗ್ಗೆ ಅವರ ಬಳಿ ಮಾತನಾಡುತ್ತೇವೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಇದೇ ವ್ಯವಸ್ಥೆ ಅಳವಡಿಸಿಕೊಂಡು ಬಂದ ಪರಿಣಾಮ ಈಗ ಸಮಸ್ಯೆ ಆಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next