Advertisement

ರೋಗ ಬಾರದಂತೆ ಜಾಗ್ರತೆ ವಹಿಸಿ

11:51 AM Mar 07, 2020 | Naveen |

ಚಿತ್ರದುರ್ಗ: ವಿಶ್ವದಾದ್ಯಂತ ಕೊರೊನಾ ವೈರಸ್‌ನಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ರೋಗ ಬರುವುದಕ್ಕಿಂತ ಮುಂಚೆಯೇ ಜಾಗ್ರತೆ ವಹಿಸಬೇಕು. ಅದಕ್ಕಾಗಿ ಸ್ವತ್ಛತೆ ಕಾಪಾಡಿಕೊಂಡು ಮುಖಕ್ಕೆ ಮಾಸ್ಕ್ ಧರಿಸಿ ಕೆಮ್ಮ ದಮ್ಮು ಬಾರದಂತೆ ನೋಡಿಕೊಂಡು ಸುರಕ್ಷಿತವಾಗಿರಿ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ನಗರದ ಮುರುಘರಾಜೇಂದ್ರ ಬೃಹನ್ಮಠ ಮತ್ತು ಎಸ್‌.ಜೆ.ಎಂ ಶಾಂತಿ ಮತ್ತು ಪ್ರಗತಿ ಫೌಂಡೇಶನ್‌ ಸಹಯೋಗದಲ್ಲಿ ಗುರುವಾರ ನಡೆದ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು.

ಈಗ ಎಲ್ಲಾ ಕಡೆ ಜಾತ್ರೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಸಾವಿರಾರು ಪ್ರಾಣಿ, ಪಶುಗಳ ಬಲಿ ನಡೆಸಲಾಗುತ್ತದೆ. ಪ್ರಾಣಿಬಲಿ ಮಾಡಬಾರದೆಂಬ ನಿಯಮವಿದ್ದರೂ ಕಣ್ತಪ್ಪಿಸಿ ಅನಾಗರಿಕವಾಗಿ ಹಾಗೂ ಅಮಾನವೀಯವಾಗಿ ನಡೆದುಕೊಳ್ಳಲಾಗುತ್ತಿದೆ. ಇದು ಪರಿಸರ ಮಾಲಿನ್ಯಕ್ಕೂ ಕಾರಣವಾಗಿ ಕಾಲರಾ, ಡೆಂಘೀ, ಎಚ್‌1ಎನ್‌1ನಂತಹ ಕಾಯಿಲೆಗಳು ಹರಡುವ ಸಂಭವವಿರುತ್ತದೆ. ಇದು ಅನಾಗರಿಕ ಮತ್ತ ಮೌಡ್ಯದ ಕೆಲಸ. ಇತ್ತೀಚೆಗೆ ವೈರಸ್‌ ಸೋಂಕಿನಿಂದಾಗಿ ಬಹುಬೇಗ ಎಲ್ಲ ಕಡೆ ಮಾರಣಾಂತಿಕ ಕಾಯಿಲೆಗಳು ಹರಡುತ್ತಿವೆ. ವಿಶ್ವದಾದ್ಯಂತ ಕೊರೊನಾ ವೈರಸ್‌ ನಿಂದಾಗಿ ಆತಂಕದ ವಾತಾವರಣ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ್‌ನಲ್ಲಿ ನಡೆಯುತ್ತಿದ್ದ ಪುಸ್ತಕ ಮಾರಾಟ ಮೇಳವನ್ನು ಸ್ಥಗಿತಗೊಳಿಸಲಾಗಿದೆ ಎಂದರು.

ಕುದ್ನೂರು ತೋಂಟದಾರ್ಯ ಮಠದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಕಲ್ಯಾಣ ಕರ್ನಾಟಕದ ಭಾಗದಲ್ಲಿ ಹಬ್ಬ, ಜಾತ್ರೆ ಸಂದರ್ಭಗಳಲ್ಲಿ ಹೆಚ್ಚೆಂದರೆ 10 ಜೋಡಿ ವಿವಾಹಗಳಾಗುತ್ತವೆ. ಮುರುಘಾ ಶರಣರು 30 ವರ್ಷಗಳಿಂದ ವಿವಾಹ ನಡೆಸುತ್ತ, ದಾಸೋಹ, ಶಿಕ್ಷಣ ನೀಡುತ್ತ ಸಮಾಜ ಸೇವೆ ಮಾಡುತ್ತಿದ್ದಾರೆ. ಸಮಾಜದ ಕಟ್ಟಕಡೆಯವರೂ ಮುನ್ನೆಲೆಗೆ ಬರಬೇಕೆಂಬ ಉದ್ದೇಶದಿಂದ ಇತ್ತೀಚೆಗೆ ಶ್ರೀಗಳು ಅಸಂಖ್ಯ  ಮಥರ
ಗಣಮೇಳವನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಕರ್ನಾಟಕದ ಎಲ್ಲ ಮೂಲೆಗಳಿಗೂ ಜಮುರಾ ಕಲಾವಿದರನ್ನು ಕಳುಹಿಸಿ ಮಾನವೀಯ ಮೌಲ್ಯವನ್ನು ಹಂಚುತ್ತಿದ್ದಾರೆ. ಹಸಿದವರಿಗೆ ಅನ್ನ ನೀಡುವ, ಬಿದ್ದವರನ್ನು ಮೇಲೆತ್ತುವ, ಖಾಲಿ ಕೈಗಳಿಗೆ ಕಾಯಕ ನೀಡುವ ಮುರುಘಾ ಮಠ ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ನಾವು ನಡೆದರೆ ಧನ್ಯರಾಗುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಒಂದು ವಿಧವಾ ವಿವಾಹ ಸೇರಿದಂತೆ ಒಟ್ಟು 20 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವೇದಿಕೆಯಲ್ಲಿ ದಾಸೋಹಿಗಳಾದ ರಾಜಲಕ್ಷ್ಮೀ, ರವಿಶಂಕರ ರೆಡ್ಡಿ, ಸಂದೀಪ ಗುಂಡಾರ್ಪಿ ಇದ್ದರು. ಕೆಇಬಿ ಷಣ್ಮುಖಪ್ಪ, ಪೈಲ್ವಾನ್‌ ತಿಪ್ಪೇಸ್ವಾಮಿ, ತಿಪ್ಪಣ್ಣ ಮತ್ತಿತರರು ಭಾಗವಹಿಸಿದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಪ್ರೊ| ಸಿ.ಎಂ. ಚಂದ್ರಪ್ಪ ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next