Advertisement

ವಿಕಲಚೇತನರೇ ಮಾಡಿದ್ರು ಮತಗಟ್ಟೆ ನಿರ್ವಹಣೆ

12:04 PM Apr 19, 2019 | Team Udayavani |

ಚಿತ್ರದುರ್ಗ: ಮಾವು-ಹೂವಿನ ತೋರಣ, ಪೆಂಡಾಲ್‌, ಬಾಳೆ ಕಂದು, ಬಣ್ಣದ ಪೇಪರ್‌ ಕಟ್ಟಿರುವುದನ್ನು ನೋಡಿ ಯಾವುದೋ ಮದುವೆ ಮನೆಯ ಸಂಭ್ರಮ ಎಂದುಕೊಳ್ಳದಿರಿ. ವಿಕಲಚೇತನ ಸಿಬ್ಬಂದಿಯೇ ನಿರ್ವಹಿಸಿದ ಮತಗಟ್ಟೆಯೊಂದರಲ್ಲಿ ಕಂಡುಬಂದ ದೃಶ್ಯವಿದು.

Advertisement

ಚಿತ್ರದುರ್ಗ ನಗರದ ಜೆ.ಸಿ.ಆರ್‌ ಬಡಾವಣೆಯ ಮಾಡೆಲ್‌ ಸೈನಿಕ ಶಾಲೆಯಲ್ಲಿ ತೆರೆಯಲಾಗಿದ್ದ 197ನೇ ಮತಗಟ್ಟೆ ಕೇಂದ್ರದಲ್ಲಿ ಚುನಾವಣಾ ಕಾರ್ಯಕ್ಕೆ ವಿಕಲಚೇತನರನ್ನೇ ನೇಮಕ ಮಾಡಲಾಗಿತ್ತು. ಕಳೆದ 14-15 ವರ್ಷಗಳಿಂದ ಮತದಾನದ ಕೆಲಸ ನಿರ್ವಹಿಸಲು ವಿಕಲಚೇತನರಿಗೆ ಆಗುವುದಿಲ್ಲ ಎಂಬ ಕಾರಣಕ್ಕೆ ಚುನಾವಣಾ ಕಾರ್ಯಕ್ಕೆ ನೇಮಿಸುತ್ತಿರಲಿಲ್ಲ. ಆದರೆ ಈ ಬಾರಿ ವಿಕಲ ಚೇತನರಲ್ಲೂ ಚುನಾವಣಾ ಕೆಲಸ ಮಾಡುವ ಸಾಮರ್ಥಯ ಇದೆ ಎಂಬುದನ್ನು ಸಾಬೀತುಪಡಿಸಲು ಭಾರತ ಚುನಾವಣಾ ಆಯೋಗ, ಮತಗಟ್ಟೆಗೆ ವಿಕಲಚೇತನರನ್ನೇ ನೇಮಕ ಮಾಡಿತ್ತು.

ಚುನಾವಣಾ ಕಾರ್ಯದಲ್ಲಿ ಜೆ.ಎನ್‌. ಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಕೆ.ಆರ್‌. ಗೋವಿಂದಯ್ಯ, ಪಳಿಕೆಹಳ್ಳಿ
ಶಾಲೆ ಶಿಕ್ಷಕ, ಮಲ್ಲಿಕಾರ್ಜುನಪ್ಪ, ಅಳಗವಾಡಿ ಶಾಲೆ ಶಿಕ್ಷಕ ಎಸ್‌. ರಘುಪತಿ, ಪಿಳ್ಳೇಕರನಹಳ್ಳಿ ಶಾಲೆ ಶಿಕ್ಷಕ ಆರ್‌. ಹೊಸಗೌಡ ಭಾಗವಹಿಸಿದ್ದರು. ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಸೈ ಎನ್ನಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next