Advertisement
ನಗರದ ಸಂತೇಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪತಂಜಲಿ ಯೋಗ ಸಮಿತಿ ಹಾಗೂ ವಾಸವಿ ಮಹಿಳಾ ಸಮಾಜದ ಸಂಯುಕ್ತ ಆಶ್ರಯದಲ್ಲಿ ಕಾರ್ಗಿಲ್ ವಿಜಯೋತ್ಸವ ದಿವಸದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದ ಮುಕುಟ ಮಣಿ ಕಾಶ್ಮೀರ ರಾಜ್ಯವನ್ನು ಶತ್ರು ರಾಷ್ಟ್ರ ಪಾಕಿಸ್ತಾನದಿಂದ ಕಾಪಾಡಿಕೊಳ್ಳಲು ಸ್ವಾತಂತ್ರ್ಯ ಬಂದಾಗಿನಿಂದಲೂ ನಾವು ಹೋರಾಟ ನಡೆಸುತ್ತಿರುವುದು ವಿಪರ್ಯಾಸದ ಸಂಗತಿ. ಆದಷ್ಟು ಬೇಗ ಕಾಶ್ಮೀರ ಸಮಸ್ಯೆ ಬಗೆ ಹರಿದು ಜನತೆ ಶಾಂತಿಯಿಂದ ಇರಬೇಕು. ಪಾಕಿಸ್ತಾನ ಸತ್ಯ ಅರ್ಥ ಮಾಡಿಕೊಳ್ಳಬೇಕು. ಕಾಶ್ಮೀರದ ಮುಗ್ಧ ಜನರಿಗೆ ಹಣದ ಆಸೆ ತೋರಿಸಿ ಭಾರತೀಯ ಸೈನಿಕರ ಮೇಲೆ ದಾಳಿ ನಡೆಸಲು ಪ್ರೇರೇಪಿಸುತ್ತಾ ಬಂದಿದೆ. ಅಲ್ಲಿನ ಉಗ್ರರನ್ನು ಮಟ್ಟ ಹಾಕಬೇಕಾಗಿದೆ. ಸಂವಿಧಾನದ 370 ಮತ್ತು 35ಎ ವಿಧಿಯಿಂದ ಕಾಶ್ಮೀರದ ಅಭಿವೃದ್ಧಿಗೆ ತೊಡಕಾಗಿದೆ. ಜನರಿಗೆ ಈಗ ಬದಲಾವಣೆ ಬೇಕಿದೆ. ರಾಜಕೀಯ ಕುಟುಂಬಗಳಿಂದ ಕಾಶ್ಮೀರಿಗಳು ಸ್ವಾತಂತ್ರ್ಯ ಬಯಸಿದ್ದಾರೆ. ಕಾಶ್ಮೀರದ ರಕ್ಷಣೆಗೆ ತೊಡಕಾಗಿರುವ 370 ನೇ ವಿಧಿಯನ್ನು ಆದಷ್ಟು ಬೇಗ ತೆಗೆದು ಹಾಕಬೇಕಾಗಿದೆ. ರೈತರು ಸಹ ದೇಶದ ಏಳ್ಗೆಗಾಗಿ ದುಡಿಯುತ್ತಾರೆ. ಅವರು ಸಹ ದೇಶದ ನಿಜವಾದ ಹೀರೋಗಳು ಎಂದರು.
Related Articles
Advertisement
ಸಭಾ ಕಾರ್ಯಕ್ರಮಕ್ಕೂ ಮುನ್ನ ಶಾಲಾ ಮಕ್ಕಳೊಂದಿಗೆ ನಗರದ ಸಂತೆಪೇಟೆ, ಜೈನ್ ಕಾಲೋನಿಗಳಲ್ಲಿ ವಿಜಯಘೋಷ ಕೂಗುತ್ತಾ ಜಾಥಾ ನಡೆಸಲಾಯಿತು. ಮಕ್ಕಳಿಗೆ ಪತಂಜಲಿ ಯೋಗ ಸಮಿತಿಯ ವತಿಯಿಂದ ಸಿಹಿ ಹಂಚಲಾಯಿತು.
ಆರ್ಯ ವೈಶ್ಯ ಮಹಿಳಾ ಸಮಾಜದ ಅಧ್ಯಕ್ಷೆ ಸುಧಾ ನಾಗರಾಜ್, ವಾಸವಿ ಮಹಿಳಾ ಸಮಾಜದ ಕಾರ್ಯದರ್ಶಿ ಸುಮನಾ ಸುರೇಂದ್ರ, ಸದಸ್ಯರಾದ ಸುನೀತಾ ಮಂಜುನಾಥ, ಅನಸೂಯಾ ಸಾಯಿರಾಂ, ಮಾತೃಶ್ರೀ ಸಂಸ್ಥೆಯ ಡಾ.ಸುಧಾ ಜಗದೀಶ್, ಶಾಲೆಯ ಸಿಬ್ಬಂದಿ ವರ್ಗ ಹಾಗೂ ನೂರಾರು ಮಕ್ಕಳು ಭಾಗವಹಿಸಿದ್ದರು.