Advertisement
ಚಳ್ಳಕೆರೆಯ 26 ವರ್ಷದ ಯುವಕ ಹಾಗೂ ಹಿರಿಯೂರಿನ 44 ವರ್ಷದ ವ್ಯಕ್ತಿ ಸೇರಿದಂತೆ ಇಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಬುಧವಾರ ಒಟ್ಟು 95 ಜನರ ಗಂಟಲು, ಮೂಗು ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಜಿಲ್ಲೆಯ ಒಟ್ಟು 92 ದೃಢಪಟ್ಟ ಪ್ರಕರಣಗಳಲ್ಲಿ ಈಗಾಗಲೇ 66 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಸದ್ಯ 26 ಸಕ್ರಿಯ ಪ್ರಕರಣಗಳಿವೆ. 26 ಸಕ್ರಿಯ ಪ್ರಕರಣಗಳ ಪೈಕಿ ಚಿತ್ರದುರ್ಗದ ಕೋವಿಡ್ ಆಸ್ಪತ್ರೆಯಲ್ಲಿ 10, ಭರಮಸಾಗರ-5, ಹಿರಿಯೂರು ತಾಲೂಕು ಧರ್ಮಪುರದ ನಿಗದಿತ ಕೋವಿಡ್ ಹೆಲ್ತ್ ಕೇರ್ ಸೆಂಟರ್‌ನಲ್ಲಿ 1, ಚಳ್ಳಕೆರೆ ತಾಲೂಕು ನಾಯಕನಹಟ್ಟಿಯಲ್ಲಿ 1, ಪರಶುರಾಂಪುರ 3, ಮೊಳಕಾಲ್ಮೂರು ತಾಲೂಕು ರಾಂಪುರದಲ್ಲಿ 4 ಹಾಗೂ ಹೊಸದುರ್ಗ ತಾಲೂಕು ಬೆಲಗೂರಿನ ನಿಗದಿತ ಕೋವಿಡ್ ಹೆಲ್ತ್ ಕೇರ್ ಸೆಂಟರ್‌ನಲ್ಲಿ ಇಬ್ಬರು ಸೋಂಕಿತರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
ಮತ್ತೆರಡು ಪಾಸಿಟಿವ್-ಸೋಂಕಿತರು 92
01:03 PM Jul 09, 2020 | Naveen |
Advertisement
Udayavani is now on Telegram. Click here to join our channel and stay updated with the latest news.