Advertisement
ಗುರುವಾರ ಚಳ್ಳಕೆರೆಯಲ್ಲಿ 61 ವರ್ಷದ ವ್ಯಕ್ತಿ, ಹಿರಿಯೂರಿನಲ್ಲಿ 9 ವರ್ಷದ ಬಾಲಕಿ ಹಾಗೂ ಹೊಳಲ್ಕೆರೆಯ 55 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಶುಕ್ರವಾರದ ವರದಿಯಲ್ಲಿ ಮತ್ತೆ 3 ಜನರಿಗೆ ಸೋಂಕು ದೃಢಪಟ್ಟಿದೆ. ರಾಂಪುರದ 12 ವರ್ಷದ ಬಾಲಕಿ, ಚಳ್ಳಕೆರೆಯ 55 ವರ್ಷದ ಮಹಿಳೆ ಹಾಗೂ ಹಿರಿಯೂರಿನ 13 ವರ್ಷದ ಬಾಲಕಿಗೆ ಕೋವಿಡ್ ಸೋಂಕು ಪತ್ತೆಯಾಗಿದೆ. ಶುಕ್ರವಾರ ಒಟ್ಟು 66 ಜನರ ಗಂಟಲು, ಮೂಗು ದ್ರವ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 59 ಜನರ ವರದಿ ನೆಗೆಟಿವ್ ಬಂದಿದೆ. ಇನ್ನೂ 4 ಜನರ ವರದಿ ಬರುವುದು ಬಾಕಿ ಇದೆ ಎಂದು ಡಿಎಚ್‌ಒ ಡಾ| ಪಾಲಾಕ್ಷ ತಿಳಿಸಿದ್ದಾರೆ.
Advertisement
ಮತ್ತೆ 3 ಪಾಸಿಟಿವ್; ಸೋಂಕಿತರು 80
12:44 PM Jul 04, 2020 | Naveen |
Advertisement
Udayavani is now on Telegram. Click here to join our channel and stay updated with the latest news.