Advertisement

ಬಿಎಸ್‌ವೈ ಪ್ರಮಾಣ; ಎಲ್ಲೆಡೆ ಸಂಭ್ರಮ

11:29 AM Jul 27, 2019 | Naveen |

ಚಿತ್ರದುರ್ಗ: ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್‌.ಯಡಿಯೂರಪ್ಪನವರು ರಾಜಭವನದಲ್ಲಿ ಶುಕ್ರವಾರ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ನಗರದ ಡಿ.ಸಿ.ಕಚೇರಿ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

Advertisement

ಬಿಜೆಪಿ ನಗರ ಕಾರ್ಯದರ್ಶಿ ನವೀನ್‌ ಚಾಲುಕ್ಯ ಮಾತನಾಡಿ, ಜನ ವಿರೋಧಿ ಸರ್ಕಾರ ಹೋಗಿ ಜನಪರ ಸರ್ಕಾರ ರಚನೆಯಾಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ನಾಲ್ಕನೆ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿರುವ ಬಿ.ಎಸ್‌.ಯಡಿಯೂರಪ್ಪನವರು ರೈತರ ಹಾಗೂ ಜನಸಾಮಾನ್ಯರ ಹಿತವನ್ನು ಗಮನದಲ್ಲಿಟ್ಟುಕೊಂಡು ಒಳ್ಳೊಳ್ಳೆ ಯೋಜನೆಗಳನ್ನು ಜಾರಿಗೆ ತರಲಿದ್ದಾರೆ. ರಾಜ್ಯದೆಲ್ಲೆಡೆ ಮಳೆ ಸಿಂಚನ ಮೂಲಕ ಯಡಿಯೂರಪ್ಪನವರಿಗೆ ಶುಭ ಸೂಚನೆ ನೀಡಿದೆ. ಉಳಿದ ಮೂರುವರೆ ವರ್ಷಗಳ ಅವಧಿಯಲ್ಲಿ ರಾಜ್ಯ ಸುಭಿಕ್ಷೆಯಾಗಿ ಅನೇಕ ಅಭಿವೃದ್ಧಿಗಳನ್ನು ಕಾಣಲಿದೆ ಎನ್ನುವುದರಲ್ಲಿ ಸಂದೇಹವಿಲ್ಲ ಎಂದು ಹರ್ಷ ವ್ಯಕ್ತಪಡಿಸಿದರು.

ವಕ್ತಾರ ನಾಗರಾಜ್‌ ಬೇದ್ರೆ ಮಾತನಾಡಿ, ಕಳೆದ 14 ತಿಂಗಳಿಂದ ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಂಡು ಬರೀ ಅಧಿಕಾರಕ್ಕಾಗಿ ಕಚ್ಚಾಡಿದರೆ ವಿನಃ ಯಾವುದೇ ಅಭಿವೃದ್ಧಿ ಪರ ಕೆಲಸ ಮಾಡದ ಕಾರಣ ಸರ್ಕಾರ ಪತನಗೊಂಡು ನಾಲ್ಕನೇ ಬಾರಿಗೆ ಬಿ.ಎಸ್‌.ಯಡಿಯೂರಪ್ಪನವರಿಗೆ ರಾಜ್ಯದ ಮುಖ್ಯಮಂತ್ರಿಯಾಗುವ ಯೋಗ ಕೂಡಿ ಬಂದಿರುವುದು ಪಕ್ಷದ ಕಾರ್ಯಕರ್ತರಲ್ಲಿ ಹಾಗೂ ಜನತೆಯಲ್ಲಿ ಸಂಚಲನ ಮೂಡಿಸಿದೆ. ಭದ್ರಾ ಮೇಲ್ದಂಡೆ ಯೋಜನೆ, ಮೆಡಿಕಲ್ ಕಾಲೇಜು, ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಯೋಜನೆಯನ್ನು ಬಿ.ಎಸ್‌.ಯಡಿಯೂರಪ್ಪನವರು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲಿದ್ದಾರೆ ಎಂದು ಹೇಳಿದರು.

ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್‌, ಜಿಲ್ಲಾ ಕಾರ್ಯದರ್ಶಿ ಮೋಹನ್‌, ನಗರ ಕಾರ್ಯದರ್ಶಿ ರೇಖ, ಗ್ರಾಮಾಂತರದ ಕಲ್ಲೇಶಯ್ಯ, ಚಿತ್ರರವಿ, ವಿಜಯಲಕ್ಷ್ಮಿ, ಅನಸೂಯಮ್ಮ, ಬಸಮ್ಮ, ಕಾಂಚನ, ಮಂಜುಳಮ್ಮ, ವೀಣ, ಕವಿತ, ಶಾಂತಮ್ಮ, ಅನ್ನಪೂರ್ಣಮ್ಮ, ಸತ್ಯನಾರಾಯಣ, ಸಾಗರ, ಮೂಡಲಗಿರಿಯಪ್ಪ, ಕಮಲೇಶ್‌ ಜೈನ್‌ ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next