Advertisement

ಕಪ್ಪುಪಟ್ಟಿ ಧರಿಸಿ ಕಾಂಗ್ರೆಸ್‌ ಘಟಕ ಪ್ರತಿಭಟನೆ

02:37 PM Oct 12, 2021 | Team Udayavani |

ಹೊಸದುರ್ಗ: ಹೊಸದುರ್ಗದಲ್ಲಿ ಬಹುಗ್ರಾಮಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆಬಿಜೆಪಿ ಸರ್ಕಾರ ಪುನಃ ಭೂಮಿಪೂಜೆ ಮಾಡಲುಮುಂದಾಗಿದೆ ಎಂದು ಆರೋಪಿಸಿ ಮಾಜಿ ಶಾಸಕಬಿ.ಜಿ. ಗೋವಿಂದಪ್ಪ ನೇತೃತ್ವದಲ್ಲಿ ತಾಲೂಕುಕಾಂಗ್ರೆಸ್‌ ಘಟಕ ಕಪ್ಪು ಪಟ್ಟಿ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

Advertisement

ಕಾಂಗ್ರೆಸ್‌ ಕಚೇರಿಯಿಂದ ಭೂಮಿಪೂಜೆಕಾರ್ಯಕ್ರಮದಲ್ಲಿ  ಪ್ರತಿಭಟನೆ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಗಳನ್ನುಕೂಗುತ್ತಾತೆರಳಿದ ಕಾಂಗ್ರೆಸ್‌ ಕಾರ್ಯಕರ್ತರನ್ನು ಗಾಂಧಿ ವೃತ್ತದಬಳಿ ಪೊಲೀಸರು ತಡೆದು ವಶಪಡಿಸಿಕೊಂಡರು.

ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ,ಹೊಸದುರ್ಗ ತಾಲೂಕಿಗೆ ಕುಡಿಯುವ ನೀರಿನಉದ್ದೇಶಕ್ಕೆ 2015-16ನೇ ಸಾಲಿನಲ್ಲಿ ಬಹುಗ್ರಾಮಯೋಜನೆ ತಯಾರಾಗಿದ್ದು, 2017ರಲ್ಲಿ ಹಣಕಾಸುಇಲಾಖೆಯು 350 ಕೋಟಿ ರೂ.ಗಳ ಯೋಜನೆಗೆ2 ಹಂತದ ಕಾಮಗಾರಿಗೆ ಅನುಮೋದನೆ ನೀಡಿಆದೇಶಿಸಿದೆ.

2018ರ ಮಾರ್ಚ್‌ 15ರಂದುಸಿದ್ದರಾಮಯ್ಯ ಅವರು ಹೊಸದುರ್ಗ ಪಟ್ಟಣಸೇರಿದಂತೆ ತಾಲೂಕಿನ ಎಲ್ಲ ಹಳ್ಳಿಗಳಿಗೆ ಗ್ರಾಮೀಣನೀರು ಸರಬರಾಜು ಹಾಗೂ ನೈರ್ಮಲ್ಯಇಲಾಖೆಯಿಂದ ಬಹುಗ್ರಾಮ ಕುಡಿಯುವನೀರಿನಯೋಜನೆಗೆ ಭೂಮಿಪೂಜೆ ನೇರವೇರಿಸಿದ್ದರು.

ಇದನ್ನೂ ಓದಿ:6ನೇ ವೇತನ ಆಯೋಗ, ಆರೋಗ್ಯ ವಿಮೆ ಜಾರಿಗೆ ಕ್ರಮ: ಶಶಿಕಲಾ ಜೊಲ್ಲೆ

Advertisement

2017 ರಲ್ಲಿಯೇ ಆರ್ಥಿಕ ಇಲಾಖೆಯಿಂದ ಹಣಮಂಜೂರಾಗಿದ್ದು, ಮೊದಲಹಂತದಲ್ಲಿ 200ಕೋಟಿ,ಎರಡನೇ ಹಂತದಲ್ಲಿ 150 ಕೋಟಿ ಮಂಜೂರುಮಾಡಿದ್ದು ಕಾಂಗ್ರೆಸ್‌ ಸರ್ಕಾರ ಎಂದರು.ಇದೇಯೋಜನೆಗೆ ಶಾಸಕರುಪುನಃಭೂಮಿಪೂಜೆಮಾಡಿಸಲು ಸಚಿವರನ್ನುಕರೆತರುತ್ತಿರುವುದು ತಂಗಳುಕೆಲಸಕ್ಕೆ ಕೈ ಹಾಕಿದಂತೆ. ನನ್ನ ಅವಧಿಯಲ್ಲಿಯೇ  ಶಂಕುಸ್ಥಾಪನೆ ನೆರವೇರಿಸಿದ್ದು ಅದೇ ಯೋಜನೆಗೆಈಗಿನ ಶಾಸಕರು ಪುನಃ ಭೂಮಿಪೂಜೆ ಮಾಡಲುಮುಂದಾಗಿರುವುದು ದುರದೃಷ್ಟಕರ.

ಕಾಂಗ್ರೆಸ್‌ಸರ್ಕಾರದ ಹಲವು ಯೋಜನೆಗಳನ್ನು ಸಹ ಹೆಸರುಬದಲಾಯಿಸಿ ನಮ್ಮದೆಂದು ಹೇಳಿಕೊಂಡು ಬಿಜೆಪಿಜನರಿಗೆ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದರು.ಜವಳಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಗೋ.ತಿಪ್ಪೇಶ್‌ ಮಾತನಾಡಿ, ಕಾಂಗ್ರೆಸ್‌ ಸರ್ಕಾರದಲ್ಲಿಯೇ ಒಂದು ಟಿಎಂಸಿ ಅಡಿ ನೀರನ್ನು ಕುಡಿಯುವ ನೀರಿಗೆಭದ್ರಾ ಡ್ಯಾಂ ನಿಂದ ಅನುಮೋದನೆ ನೀಡಿದ್ದು, ಈಗಯೋಜನೆ ಲಾಭ ಪಡೆಯಲು ಮುಂದಾಗಿರುವುದು ಸರಿಯಲ್ಲೆ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮದ್‌ ಇಸ್ಮಾಯಿಲ್‌,ಮಾಜಿ ಜಿಪಂ ಸದಸ್ಯ ಅನಂತ್‌, ಟಿಎಪಿಎಂಸಿ ಅಧ್ಯಕ್ಷಕಾರೇಹಳ್ಳಿ ಬಸವರಾಜ್‌, ಕೆಪಿಸಿಸಿ ಸದಸ್ಯ ಎಂ.ಪಿ.ಶಂಕರ್‌, ಅಲ್ತಾಪ್‌ ಪಾಷ, ಕಾಂಗ್ರೆಸ್‌ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next