Advertisement

ಮೀಸಲಾತಿ; ಹಿಂದುಳಿದ ವರ್ಗಕ್ಕೆ  ಹೆಚ್ಚು  ಸ್ಥಾನ

04:12 PM Jan 23, 2021 | Team Udayavani |

ಚಳ್ಳಕೆರೆ: ಕಳೆದ ಹಲವಾರು ದಿನಗಳಿಂದ ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದ್ದ ತಾಲೂಕಿನ 40 ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮೀಸಲಾತಿ ಪ್ರಕಟಿಸಲಾಯಿತು. ನಗರದ ದಲ್ಲಾಲರ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಮಾರ್ಗದರ್ಶನದಲ್ಲಿ ತಾಲೂಕಿನ 40 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಘೋಷಿಸಲಾಯಿತು.

Advertisement

ಸಾಮಾನ್ಯ ವರ್ಗದ ಜತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮೀಸಲಾತಿ ನಿಗದಿಪಡಿಸಿದ್ದು, ಹಿಂದುಳಿದ ವರ್ಗಗಳಿಗೆ ಸಂಬಂಧಪಟ್ಟಂತೆ ಯಾವುದೇ ಮೀಸಲಾತಿ ಪ್ರಕಟಗೊಳಿಸಿಲ್ಲ. ವಿಶೇಷವೆಂದರೆ ಮೀಸಲಾತಿ ನಿಗದಿಪಡಿಸಿದ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಹೆಚ್ಚು ಮೀಸಲಾತಿ ದೊರಕಿದ್ದನ್ನು ಕಂಡ ಕೆಲ ಚುನಾಯಿತ ಸದಸ್ಯರು ಲಕ್ಷಾಂತರ ರೂ. ಖರ್ಚು ಮಾಡಿ ಗ್ರಾಪಂ ಗೆಲುವು ಸಾಧಿಸಿ ಇಲ್ಲಿಗೆ ಬಂದರೆ ಪಂಚಾಯಿತಿ ಎರಡೂ ಮೀಸಲಾತಿಗಳು ಬೇರೆ ವರ್ಗಕ್ಕೆ ದೊರಕಿದ್ದು, ಬೇಸರ ತರಿಸಿದೆ ಎಂದರು.

ಇದನ್ನೂ ಓದಿ : ರೆಸಾರ್ಟ್ ನಲ್ಲಿ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಅತೃಪ್ತರ ಗೌಪ್ಯಸಭೆ: ಸಚಿವರಿಂದ ಸ್ಪಷ್ಟನೆ

ಜಿಲ್ಲಾ ಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಮಾಹಿತಿ ನೀಡಿ, ರಾಜ್ಯ ಚುನಾವಣಾ ಆಯೋಗದ ಮಾರ್ಗದರ್ಶನದಲ್ಲಿ ಹಳೆಯ ಮೀಸಲಾತಿ ಪರಿಶೀಲಿಸಿ ಪ್ರಸ್ತುತ ಗ್ರಾಪಂ ಚುನಾಯಿತ ಸದಸ್ಯ ಮಾಹಿತಿ ಪಡೆದು ಚುನಾವಣಾ ಆಯೋಗ ನಿಗದಿಪಡಿಸಿದಂತೆ ಮೀಸಲಾತಿ ಪ್ರಕಟಗೊಳಿಸಲಾಗಿದೆ. ಮಹಿಳಾ ಸ್ಥಾನಗಳನ್ನು ಮೊದಲು ಸಿದ್ಧಪಡಿಸಿದ ನಂತರ ಬೇರೆ ಸ್ಥಾನಗಳತ್ತ ಗಮನ ಹರಿಸಲಾಗಿದೆ. ಪ್ರತಿ ಹಂತದಲ್ಲೂ ಪಾರದರ್ಶಕತೆ ಪ್ರದರ್ಶಿಸಲಾಗಿದೆ ಎಂದರು.

ಗೋಪನಹಳ್ಳಿ ಗ್ರಾಪಂ ಎರಡೂ ಸ್ಥಾನಕ್ಕೂ ಒಂದೇ ಮೀಸಲಾತಿ ದೊರಕಿರುವುದು ವಿಶೇಷವಾಗಿದೆ. 40 ಗ್ರಾಪಂಗಳ ಅಧ್ಯಕ್ಷ ಮೀಸಲಾತಿ ಪಟ್ಟಿ ಸಮತೋಲನದಿಂದ ಕೂಡಿದ್ದರೂ ಗೋಪನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಒಂದೇ ವರ್ಗಕ್ಕೆ ಲಭಿಸಿರುವುದು ಅಚ್ಚರಿಯ ಸಂಗತಿಯಾಗಿದೆ. ಪ್ರಾರಂಭದಲ್ಲಿ ಅಧ್ಯಕ್ಷ ಮೀಸಲಾತಿ ಪ್ರಕಟಗೊಳಿಸಿದ ನಂತರ, ಉಪಾಧ್ಯಕ್ಷ ಮೀಸಲಾತಿ ಪ್ರಕಟಗೊಳಿಸಿದರು.

Advertisement

ಗೋಪನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಮೀಸಲಾತಿ ಪರಿಶಿಷ್ಟ ವರ್ಗದ ಮಹಿಳೆಗೆ ದೊರಕಿದ್ದು, ಉಪಾಧ್ಯಕ್ಷೆ ಮೀಸಲಾತಿಯನ್ನು ಲಾಟರಿ ಮೂಲಕ ನಿರ್ಧಾರಪಡಿಸಿದ್ದು, ಓರ್ವ ಮಹಿಳಾ ಸದಸ್ಯೆ ಲಾಟರಿ ಚೀಟಿ ಎತ್ತಿದಾಗ ಉಪಾಧ್ಯಕ್ಷ ಸ್ಥಾನವೂ ಸಹ ಎಸ್ಟಿ ಮಹಿಳೆಗೆ ದೊರಕಿದೆ.

ದೊಡ್ಡ ಉಳ್ಳಾರ್ತಿಗೆಒಲಿದ ಅದೃಷ್ಟ: ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಪಂ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮಹಿಳೆ ಒಂದು ಸ್ಥಾನವಿದ್ದು, ಮೀಸಲಾತಿಯಲ್ಲೂ ಸಹ ಪರಿಶಿಷ್ಟ ಜಾತಿ ಮಹಿಳೆಯ ಮೀಸಲಾತಿ ಅಧ್ಯಕ್ಷ ಸ್ಥಾನಕ್ಕೆ ದೊರಕಿದ್ದು, ಆ ಸ್ಥಾನದಿಂದ ವಿಜೇತರಾದ ಅಭ್ಯರ್ಥಿ ಅವಿರೋಧವಾಗಿ ಅಧ್ಯಕ್ಷ ಪದವಿ ಅಲಂಕರಿಸಲಿದ್ದು, ಮೀಸಲಾತಿ ಪಟ್ಟಿ ಪ್ರಕಟಗೊಂಡ ಕೂಡಲೇ ಮಹಿಳೆಯ ಬೆಂಬಲಿಗರು  ಸಂಭ್ರಮಿಸಿದರು.

ಸಾಮಾನ್ಯ ಸ್ಥಾನ ಹೊರತುಪಡಿಸಿ ಹೆಚ್ಚಿನ ಸ್ಥಾನಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಲಭಿಸಿದ್ದು, ಹೆಚ್ಚು ಹಣ ಖರ್ಚು ಮಾಡಿದ ಚುನಾಯಿತ ಕೆಲವು ಸದಸ್ಯರು ಮೀಸಲಾತಿ ದೊರೆಯದೇ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೆಚ್ಚುವರಿ ಜಿಲ್ಲಾ ಧಿಕಾರಿ ಈ.ಬಾಲಕೃಷ್ಣಪ್ಪ, ತಹಶೀಲ್ದಾರ್‌ ಎಂ.ಮಲ್ಲಿಕಾರ್ಜುನ್‌, ಚುನಾವಣಾ ಶಿರಸ್ತೇದಾರ ಅಶೋಕ, ತಾಪಂ ಇಒ ಶ್ರೀಧರ್‌ ಐ.ಬಾರಿಕೇರ್‌ ಹಾಗೂ ಚುನಾಯಿತ ಸದಸ್ಯರು ಹಾಜರಿದ್ದರು.

ಮೀಸಲಾತಿ ವಿವರ: ದೇವರೆಡ್ಡಿಹಳ್ಳಿ ಸಾಮಾನ್ಯ, ಎಸ್ಸಿ ಮಹಿಳೆ, ತಳಕು ಸಾಮಾನ್ಯ,ಎಸ್ಸಿ ಮಹಿಳೆ, ನಗರಂಗೆರೆ ಸಾಮಾನ್ಯ, ಎಸ್ಸಿ ಮಹಿಳೆ, ಮೀರಸಾಬಿಹಳ್ಳಿ ಸಾಮಾನ್ಯ, ಎಸ್ಸಿ ಮಹಿಳೆ, ಚೌಳೂರು ಸಾಮಾನ್ಯ, ಎಸ್ಸಿ ಮಹಿಳೆ, ಬೆಳಗೆರೆ ಸಾಮಾನ್ಯ, ಎಸ್ಟಿ ಮಹಿಳೆ, ಪಿ.ಮಹದೇವಪುರ ಸಾಮಾನ್ಯ, ಎಸ್ಸಿ ಮಹಿಳೆ, ಸಿದ್ದೇಶ್ವರನದುರ್ಗ ಸಾಮಾನ್ಯ, ಪರಿಶಿಷ್ಟ ಜಾತಿ, ಘಟಪರ್ತಿ ಸಾಮಾನ್ಯ ಮಹಿಳೆ, ಪರಿಶಿಷ್ಟ ಜಾತಿ,ದೊಡ್ಡೇರಿ ಸಾಮಾನ್ಯ ಮಹಿಳೆ, ಪರಿಶಿಷ್ಟ ವರ್ಗ, ಚನ್ನಮ್ಮನಾಗತಿಹಳ್ಳಿ ಸಾಮಾನ್ಯ ಮಹಿಳೆ, ಎಸ್ಸಿ, ಪಗಡಲಬಂಡೆ ಸಾಮಾನ್ಯ ಮಹಿಳೆ, ಎಸ್ಸಿ, ಪರಶುರಾಮಪುರ ಸಾಮಾನ್ಯ ಮಹಿಳೆ, ಪರಿಶಿಷ್ಟ ವರ್ಗ, ಸಾಣೀಕೆರೆ ಸಾಮಾನ್ಯ ಮಹಿಳೆ, ಎಸ್ಸಿ, ಟಿ.ಎನ್‌.ಕೋಟೆ ಸಾಮಾನ್ಯ ಮಹಿಳೆ, ಎಸ್ಟಿ, ಅಬ್ಬೇನಹಳ್ಳಿ ಎಸ್ಸಿ, ಎಸ್ಟಿ ಮಹಿಳೆ, ಓಬಳಾಪುರ ಎಸ್ಸಿ, ಸಾಮಾನ್ಯ ಮಹಿಳೆ, ಬುಡ್ನಹಟ್ಟಿ ಪರಿಶಿಷ್ಟ ಜಾತಿ, ಸಾಮಾನ್ಯ ಮಹಿಳೆ, ನನ್ನಿವಾಳ ಪರಿಶಿಷ್ಟ ಜಾತಿ, ಸಾಮಾನ್ಯ ಮಹಿಳೆ, ರಾಮಜೋಗಿಹಳ್ಳಿ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮಹಿಳೆ, ಎನ್‌.ಮಹದೇವಪುರ ಎಸ್ಸಿ ಮಹಿಳೆ, ಪರಿಶಿಷ್ಟ ವರ್ಗ, ನೆಲಗೇತನಹಳ್ಳಿ ಎಸ್ಸಿ ಮಹಿಳೆ, ಸಾಮಾನ್ಯ, ರೇಣುಕಾಪುರ ಎಸ್ಸಿ ಮಹಿಳೆ, ಸಾಮಾನ್ಯ, ದೊಡ್ಡ ಉಳ್ಳಾರ್ತಿ ಎಸ್ಸಿ ಮಹಿಳೆ, ಪರಿಶಿಷ್ಟ ವರ್ಗ, ಸೋಮಗುದ್ದು ಎಸ್ಸಿ, ಮಹಿಳೆ ಸಾಮಾನ್ಯ, ದೊಡ್ಡಚೆಲ್ಲೂರು ಎಸ್ಸಿ ಮಹಿಳೆ, ಸಾಮಾನ್ಯ, ತಿಮ್ಮಪ್ಪಯ್ಯನಹಳ್ಳಿ ಪರಿಶಿಷ್ಟ ವರ್ಗ, ಪರಿಶಿಷ್ಟ ವರ್ಗ ಮಹಿಳೆ, ಗೌಡಗೆರೆ ಎಸ್ಟಿ, ಸಾಮಾನ್ಯ ಮಹಿಳೆ, ನೇರ‌್ಲಗುಂಟೆ ಪರಿಶಿಷ್ಟ ವರ್ಗ, ಪರಿಶಿಷ್ಟ ವರ್ಗ ಮಹಿಳೆ, ಮೈಲನಹಳ್ಳಿ ಪರಿಶಿಷ್ಟ ವರ್ಗ, ಪರಿಶಿಷ್ಟ ವರ್ಗ ಮಹಿಳೆ, ದೇವರಮರಿಕುಂಟೆ ಪರಿಶಿಷ್ಟ ವರ್ಗ, ಸಾಮಾನ್ಯ ಮಹಿಳೆ, ಎನ್‌.ದೇವರಹಳ್ಳಿ, ಪರಿಶಿಷ್ಟ ವರ್ಗ, ಸಾಮಾನ್ಯ ಮಹಿಳೆ, ಕಾಲುವೆಹಳ್ಳಿ ಪರಿಶಿಷ್ಟ ವರ್ಗ, ಸಾಮಾನ್ಯ ಮಹಿಳೆ, ಮಲ್ಲೂರಹಳ್ಳಿ ಪರಿಶಿಷ್ಟ ವರ್ಗ  ಮಹಿಳೆ, ಸಾಮಾನ್ಯ ಹಿರೇಹಳ್ಳಿ ಪರಿಶಿಷ್ಟ ವರ್ಗ ಮಹಿಳೆ, ಸಾಮಾನ್ಯ ಗೌರಸಮುದ್ರ ಪರಿಶಿಷ್ಟ ವರ್ಗ ಮಹಿಳೆ, ಸಾಮಾನ್ಯ, ಬೇಡರೆಡ್ಡಿಹಳ್ಳಿ ಪರಿಶಿಷ್ಟ ವರ್ಗ ಮಹಿಳೆ, ಸಾಮಾನ್ಯ, ಮನ್ನೇಕೋಟೆ ಪರಿಶಿಷ್ಟ ವರ್ಗ ಮಹಿಳೆ,ಪರಿಶಿಷ್ಟ, ಜಾಜೂರು, ಪರಿಶಿಷ್ಟ ವರ್ಗ ಮಹಿಳೆ, ಸಾಮಾನ್ಯ, ಗೋಪನಹಳ್ಳಿ ಪರಿಶಿಷ್ಟ ವರ್ಗ ಮಹಿಳೆ, ಪರಿಶಿಷ್ಟ ವರ್ಗ ಮಹಿಳೆ ಮೀಸಲಾತಿ ಪ್ರಕಟಗೊಂಡಿದೆ.

ಇದನ್ನೂ ಓದಿ : ಅರ್ಥ ವ್ಯವಸ್ಥೆ ಸದೃಢಕ್ಕೆ ಪಿಕೆಪಿಎಸ್‌ ಪೂರಕ

Advertisement

Udayavani is now on Telegram. Click here to join our channel and stay updated with the latest news.

Next