Advertisement

ಆರೋಗ್ಯ ಇಲಾಖೆ ಕಾರ್ಯಕ್ಕೆ ಕೈ ಜೋಡಿಸಿ

05:00 PM Apr 21, 2021 | Team Udayavani |

ಚಳ್ಳಕೆರೆ: ಕಳೆದ ಕೆಲವು ತಿಂಗಳುಗಳಿಂದ ನಿಯಂತ್ರಣದಲ್ಲಿದ್ದ ಕೊರೊನಾ ವೈರಾಣು ಎರಡನೇ ಹಂತದಲ್ಲಿ ಜನರಿಗೆ ಹೆಚ್ಚು ಭಯವನ್ನುಂಟು ಮಾಡುತ್ತಿದೆ. ಎರಡನೇ ಅಲೆ ಹೆಚ್ಚಿನ ಅಪಾಯ ತಂದೊಡ್ಡುವ ಸಂಭವವಿದ್ದು, ಇದರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕೈಗೊಳ್ಳುವ ಎಲ್ಲಾ ಜಾಗೃತಿ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಶಾಸಕ ಟಿ. ರಘುಮೂರ್ತಿ ಕರೆ ನೀಡಿದರು.

Advertisement

ಇಲ್ಲಿನ ಪ್ರವಾಸಿಮಂದಿರದ ಮುಂಭಾಗದಲ್ಲಿ ರೋಟರಿ ಕ್ಲಬ್‌, ತಾಲೂಕು ಆಡಳಿತ, ಆರೋಗ್ಯ, ಶಿಕ್ಷಣ ಮತ್ತು ಪೊಲೀಸ್‌ ಇಲಾಖೆ ಮತ್ತು ನಗರಸಭೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಲಸಿಕಾ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಸ್ತುತ ಸ್ಥಿತಿಯಲ್ಲಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕಿದೆ. ಕೊರೊನಾ ನಿಯಂತ್ರಣಕ್ಕೆ ಲಸಿಕೆ ಪಡೆಯುವ ಜೊತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸಾಮಾಜಿಕ ಅಂತರ ಕಾಪಾಡುವುದು ಮತ್ತು ಆರೋಗ್ಯ ಜಾಗೃತಿ ಬಗ್ಗೆ ಗಮನ ಹರಿಸುವುದು ಪ್ರಮುಖವಾಗಿದೆ. ಸಾರ್ವಜನಿಕರಲ್ಲಿ ಲಸಿಕೆ ಪಡೆದರೆ ಯಾವುದೇ ಅಪಾಯವಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಡುವ ನಿಟ್ಟಿನಲ್ಲಿ ಇಂತಹ ಜಾಥಾಗಳು ಅವಶ್ಯಕ ಎಂದರು.

ರೋಟರಿ ಕ್ಲಬ್‌ ಅಧ್ಯಕ್ಷ ಕೆ. ನಾಗೇಶ್‌ ಮಾತನಾಡಿ, ರೋಟರಿ ಕ್ಲಬ್‌ ಕಳೆದ ಹಲವಾರು ದಶಕಗಳಿಂದ ಆರೋಗ್ಯ ಜಾಗƒತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಲಭಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಾಮಾಜಿಕ ಸೇವಾ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಕೊಳ್ಳುವ ಮೂಲಕ ಎಲ್ಲರಲ್ಲೂ ಆತ್ಮವಿಶ್ವಾಸವನ್ನು ಹುಟ್ಟು ಹಾಕುವ ಕೆಲಸವನ್ನು ರೋಟರಿ ಕ್ಲಬ್‌ ಮಾಡುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲೂ ಸಹ ಇಂತಹ ಜಾಗೃತಿ ಕಾರ್ಯಕ್ರಮ ನಡೆಸುವ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸಿ.ಬಿ. ಜಯಲಕ್ಷ್ಮೀ ಕೃಷ್ಣಮೂರ್ತಿ, ಉಪಾಧ್ಯಕ್ಷೆ ಜೈತುಂಬಿ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್‌ ಗೌಡ, ನಗರಸಭೆ ಸದಸ್ಯರಾದ ಸುಮಾ ಭರಮಣ್ಣ, ಕವಿತಾ ಬೋರಣ್ಣ, ರೋಟರಿ ಕ್ಲಬ್‌ ಹಿರಿಯ ಸದಸ್ಯರಾದ ಡಾ| ಕೆ.ಎಂ. ಜಯಕುಮಾರ್‌, ಎಸ್‌. ಜಯಪ್ರಕಾಶ್‌, ಕಿರಣ್‌, ಕೆ.ಜೆ. ಮಂಜುನಾಥ, ಕೆ.ಎ. ಮೂರ್ತಪ್ಪ, ಪೌರಾಯುಕ್ತ ಪಾಲಯ್ಯ, ಪೊಲೀಸ್‌ ಇನ್ಸ್‌ಪೆಕ್ಟರ್‌ ಜೆ.ಎಸ್‌.ತಿಪ್ಪೇಸ್ವಾಮಿ, ಬಿಇಒ ಕೆ.ಎಸ್‌. ಸುರೇಶ್‌, ಡಾ| ಓಂಕಾರಮೂರ್ತಿ, ಎಸ್‌.ಬಿ. ತಿಪ್ಪೇಸ್ವಾಮಿ ಮುಂತಾದವರು ಭಾಗವಹಿಸಿದ್ದರು.ಚ

Advertisement
Advertisement

Udayavani is now on Telegram. Click here to join our channel and stay updated with the latest news.

Next