Advertisement

ಮರಳುಗಾರಿಕೆ ಆರಂಭಿಸಿದರೆ ಹೋರಾಟ

06:38 PM Apr 18, 2021 | Team Udayavani |

ಚಳ್ಳಕೆರೆ: ವೇದಾವತಿ ನದಿಪಾತ್ರದ ಗೊರ‌್ಲತ್ತು ಮತ್ತು ಕಲಮರಹಳ್ಳಿ ಮರಳು ಯಾರ್ಡ್‌ ಬ್ಲಾಕ್‌ 1 ಮತ್ತು 2ರಲ್ಲಿ ನಿಯಮ ಬಾಹಿರವಾಗಿ ಗುತ್ತಿಗೆದಾರರು 15 ರಿಂದ 20 ಅಡಿ ಆಳವಾಗಿ ಮರಳು ತೆಗೆಯುತ್ತಿದ್ದಾರೆ. ರೈತರ ಪರವಾಗಿ ನದಿಪಾತ್ರದ ಆವರಣದಲ್ಲಿಯೇ ಧರಣಿ ಸತ್ಯಾಗ್ರಹ ನಡೆಸಿದ್ದೇನೆ. ಆದಾಗ್ಯೂ ಜಿಲ್ಲಾಡಳಿತ ಮರಳುಗಾರಿಕೆ ಪುನಾರಂಭಕ್ಕೆ ಸೂಚನೆ ನೀಡಿದ್ದನ್ನು ಖಂಡಿಸುವುದು ಶಾಸಕ ಟಿ. ರಘುಮೂರ್ತಿ ತಿಳಿಸಿದರು.

Advertisement

ಇಲ್ಲಿನ ತಾಲೂಕು ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗತ್ಯ ಬಿದ್ದರೆ ಮತ್ತೂಮ್ಮೆ ಜಿಲ್ಲಾಡಳಿತದ ವಿರುದ್ಧ ರೈತರು, ಕಾರ್ಮಿಕರು ಹಾಗೂ ಸಾರ್ವಜನಿಕರೊಂದಿಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಕಳೆದ ಮಾರ್ಚ್‌ ತಿಂಗಳಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕರು, ತಹಶೀಲ್ದಾರ್‌, ಪೊಲೀಸ್‌ ಅ ಧಿಕಾರಿಗಳ ಸಮಕ್ಷಮದಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿತ್ತು. ಗುತ್ತಿಗೆದಾರರು ನಿಯಮಗಳನ್ನು ಗಾಳಿಗೆ ತೂರಿ ನದಿ ಪಾತ್ರದ ಮರಳನ್ನು ಅಗೆದ ಬಗ್ಗೆ ಪೊಲೀಸ್‌ ಇಲಾಖೆ ಅ ಧಿಕಾರಿಗಳು ಮಹಜರು ನಡೆಸಿದ್ದರು. ಸುಮಾರು ಒಂದು ಲಕ್ಷ ಮೆಟ್ರಿಕ್‌ ಟನ್‌ಗಿಂತಲೂ ಹೆಚ್ಚು ಮರಳು ತೆಗೆದು ದಾಸ್ತಾನು ಮಾಡಲಾಗಿದೆ. ಆಳವಾಗಿ ಮರಳನ್ನು ಅಗೆದ ಪರಿಣಾಮ ನದಿಯಲ್ಲಿ ತೇವಾಂಶ ಕಡಿಮೆಯಾಗಿ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಅಲ್ಲದೆ ಸಾವಿರಾರು ಎಕರೆ ಪ್ರದೇಶದ ಬೆಳೆಗಳು ಒಣಗಿದ್ದು, ಅಂತರ್ಜಲ ಮಟ್ಟವೂ ಕುಸಿದಿದೆ.

ಇದರಿಂದಾಗಿ ರೈತರು ಮರಳನ್ನು ನದಿ ಪಾತ್ರದಿಂದ ಅಗೆಯುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೂಮ್ಮೆ ಮರಳುಗಾರಿಕೆ ನಡೆಸದಂತೆ ಗ್ರಾಮಸ್ಥರು, ರೈತರ ಸಮಕ್ಷಮದಲ್ಲಿ ತೀರ್ಮಾನವಾಗಿತ್ತು. ಬಸವ ಆಶ್ರಯ ವಸತಿ ಯೋಜನೆ ಸರ್ಕಾರದ ಕಾಮಗಾರಿಗಳಿಗೆ ಮರಳು ನೀಡುವ ಆದೇಶವಿದೆ. ಆದರೆ ಇದುವರೆಗೂ ಒಂದು ಹಿಡಿ ಮರಳನ್ನು ಯಾರಿಗೂ ನೀಡಿದ ಬಗ್ಗೆ ಮಾಹಿತಿ ಇಲ್ಲ ಎಂದು ದೂರಿದರು.

ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ಮರಳು ದಾಸ್ತಾನು ಮಾಡಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಸಂಶಯ ಬಲವಾಗಿದೆ. ಸರ್ಕಾರದ ಆದೇಶದಂತೆ ಒಂದು ಟನ್‌ ಮರಳಿಗೆ 650 ರೂ. ಇದೆ. ಮರಳು ಗುತ್ತಿಗೆದಾರರು 1200-1500 ರೂ. ಪಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿದೆ ಎಂದರು.

Advertisement

ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಅಪೂರ್ಣಗೊಂಡಿರುವ ಕಟ್ಟಡಗಳ ನಿರ್ಮಾಣಕ್ಕಾಗಿ ಗುತ್ತಿಗೆದಾರರ ಕೋರಿಕೆ ಮೇರೆಗೆ ಮರಳುಗಾರಿಕೆಗೆ ಚಾಲನೆ ನೀಡಲು ಜಿಲ್ಲಾಧಿ  ಕಾರಿಗಳ ಸೂಚನೆಯಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕರು ಆದೇಶಿಸಿದ್ದಾರೆ. ಗುತ್ತಿಗೆದಾರರು ನಿಯಮಾನುಸಾರ ಮರಳನ್ನು ಎತ್ತಿ ದಾಸ್ತಾನು ಮಾಡಿ ನಿಗದಿಪಡಿಸಿದ ಕ್ರಯದಂತೆ ಮಾರಾಟ ಮಾಡಬಹುದಾಗಿದೆ. ಆದರೆ ರಾಜ್ಯ ಸರ್ಕಾರ ರೈತರ ಪರವಾಗಿ ಕಾರ್ಯ ನಿರ್ವಹಿಸುವ ಬದಲು ವಿರೋಧವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕೂಡಲೇ ಜಾರಿಗೆ ಬರುವಂತೆ ಮರಳು ಗಣಿ ಚಟುವಟಿಕೆಯನ್ನು ಪುನರಾಂಭಿಸಲು ಸೂಚನೆ ನೀಡಲಾಗಿದೆ. ಏ. 16 ರಂದೇ ಇಲಾಖೆಯ ಆದೇಶ ಹೊರಬಿದಿದ್ದು ಅಕ್ರಮ ಮರಳು ಸಾಗಾಣಿಕೆಗೆ ಮತ್ತೂಮ್ಮೆ ಸರ್ಕಾರವೇ ಅವಕಾಶ ಮಾಡಿಕೊಟ್ಟಂತಾಗಿದೆ. ಆದ್ದರಿಂದ ಏ. 15ರಂದು ನಡೆದ ಸಭೆಯಲ್ಲಿ ಮರಳುಗಾರಿಕೆಗೆ ನೀಡಿರುವ ಆದೇಶವನ್ನು ಜಿಲ್ಲಾ  ಧಿಕಾರಿಗಳು ಕೂಡಲೇ ವಾಪಸ್‌ ಪಡೆಯಬೇಕು. ಇಲ್ಲವಾದಲ್ಲಿ ರೈತರು ಹಾಗೂ ಸಾರ್ವಜನಿಕರ ಸಹಕಾರದಿಂದ ವೇದಾವತಿ ನದಿ ಪಾತ್ರದ ಗ್ರಾಮಗಳ ಜನರನ್ನು ಸಂಘಟಿಸಿ ಹೋರಾಟ ನಡೆಸಬೇಕಾಗುತ್ತದೆ ಎಂದು ಗುಡುಗಿದರು. ಈ ಕುರಿತು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸುವುದಾಗಿ ತಿಳಿಸಿದರು.

ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ್‌, ಡಿವೈಎಸ್ಪಿ ಕೆ.ವಿ. ಶ್ರೀಧರ್‌, ಅಖಂಡ ಕರ್ನಾಟಕ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ಸೋಮಗುದ್ದು ರಂಗಸ್ವಾಮಿ, ಪೊಲೀಸ್‌ ಇನ್‌ ಪೆಕ್ಟರ್‌ ಜೆ.ಎಸ್‌.ತಿಪ್ಪೇಸ್ವಾಮಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next