ಧರ್ಮಪುರ: ಹೋಬಳಿಯ ವಿವಿಧೆಡೆ ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಅಂಬೇಡ್ಕರ್ ಅವರ 130ನೇ ಜಯಂತಿ ಆಚರಿಸಲಾಯಿತು. ಧರ್ಮಪುರದ ಸ್ವಾಭಿಮಾನ ವಸತಿ ಶಾಲೆಯಲ್ಲಿ ಅಂಬೇಡ್ಕರ್ ಪುತ್ಥಳಿಗೆ ಪೂಜೆ ಸಲ್ಲಿಸಲಾಯಿತು.
ಪ್ರಾಂಶುಪಾಲ ಜಿ. ರಂಗಸ್ವಾಮಿ, ಮುಖ್ಯ ಶಿಕ್ಷಕ ಮಹಾಂತೇಶ್ ನಾಯಕ್, ಎಚ್.ಜೆ. ಇರ್ಫಾನ್, ಕೆ. ವೇದಮೂರ್ತಿ, ಶರತ್, ಮಂಜುನಾಥ್, ಎಂ.ಬಸೇಗೌಡ ಇದ್ದರು. ಶ್ರೀ ಪಂಚಲಿಂಗೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಸಂಸ್ಥೆಯ ಅಧ್ಯಕ್ಷ ಕೆ. ಪುಟ್ಟಸ್ವಾಮಿ ಗೌಡ, ಪ್ರಾಂಶುಪಾಲ ಎಂ.ಜಿ.ಆರ್. ರಂಗಸ್ವಾಮಿ, ವಿ. ವೀರಣ್ಣ, ಉಪ ಪ್ರಾಂಶುಪಾಲ ಜೆ. ಮಂಜುನಾಥ್, ಉಪನ್ಯಾಸಕರಾದ ಪಾಂಡುರಂಗಪ್ಪ, ಬಿ.ಆರ್. ತಿಮ್ಮರಾಜ್, ಗಿರಿಜಮ್ಮ ಮತ್ತಿತರರು ಹಾಜರಿದ್ದರು.
ಗ್ರಾಮ ಪಂಚಾಯತ್ ಆವರಣದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ರಾಘವೇಂದ್ರ, ಪಿಡಿಒ ಚಿಕ್ಕಣ್ಣ, ಕಾರ್ಯದರ್ಶಿ ಸುರೇಶ್, ಸದಸ್ಯರಾದ ಅಸ್ಲಾಂ, ಅಮಾನ್, ರತ್ನಮ್ಮ ಮೊದಲಾದವರು ಉಪಸ್ಥಿತರಿದ್ದರು. ಪಿ.ಡಿ. ಕೋಟೆ ಗ್ರಾಪಂನಲ್ಲಿ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ಪಿಡಿಒ ವಿವೇಕ್, ಅಧ್ಯಕ್ಷ ಮುದ್ದರಾಮಣ್ಣ, ಸದಸ್ಯರಾದ ಪುಟ್ಟಸ್ವಾಮಿ ಗೌಡ,ನಾಗಮ್ಮ, ಬಿಲ್ ಕಲೆಕ್ಟರ್ ರಂಗನಾಥ್ ಮತ್ತಿತರರು ಇದ್ದರು.
ಮದ್ದಿಹಳ್ಳಿ ಕರಿಯಜ್ಜನ ಪಾಳ್ಯ ಗೊಲ್ಲರಹಟ್ಟಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಹೂವಿನ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ಎಂ. ಜಯಮ್ಮ, ಗ್ರಾಪಂ ಸದಸ್ಯೆ ನಾಗಮಣಿ, ಮುಖಂಡರಾದ ವಿ. ವೀರಣ್ಣ,ನಾಗರಾಜ್, ರಾಮಣ್ಣ, ಭೋಜಣ್ಣ, ಬಿ. ಬಸವರಾಜ್ ಇತರರು ಇದ್ದರು. ಮದ್ದೀಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
ಮುಖ್ಯ ಶಿಕ್ಷಕ ಕೆ.ಇ. ಪಶುಪತಿ, ಶಿಕ್ಷಕರಾದ ಮಲ್ಲೇಶ್, ಸತೀಶ್, ನಾಗೇಶ್, ಎಸ್‌ಡಿಎಂಸಿ ಅಧ್ಯಕ್ಷ ಮಹಾಂತೇಶ್, ಅಂಗನವಾಡಿ ಕಾರ್ಯಕರ್ತೆ ಜಯಮ್ಮ ಇದ್ದರು. ಬಿ.ಕೆ. ಹಟ್ಟಿ-ಗೊಲ್ಲರಹಟ್ಟಿ ಅಂಗನವಾಡಿಯಲ್ಲಿ ನಡೆದ ಅಂಬೇಡ್ಕರ್ ಜಯಂತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಸಿ. ಜಯಮ್ಮ, ಶಿವಮ್ಮ, ಮುಖಂಡರಾದ ಹೊಂಬಳಪ್ಪ, ನರಸಿಂಹಪ್ಪ, ಕೆ.ಸಿ. ಚಿತ್ತಯ್ಯ, ಪ್ರಸನ್ನಕುಮಾರ್ ಮತ್ತಿತರರು ಉಪಸ್ಥಿತರಿದ್ದರು.