Advertisement

ವೇತನ ಬಿಡುಗಡೆಗೆ ಆಗ್ರಹಿಸಿ ಕಾರ್ಮಿಕರ ಪ್ರತಿಭಟನೆ

06:24 PM Apr 14, 2021 | Team Udayavani |

ಮೊಳಕಾಲ್ಮೂರು: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 150 ಎ ನಿರ್ಮಾಣ ಕಾಮಗಾರಿ ಕೈಗೊಂಡಿರುವ ದಿಲೀಪ್‌ ಬಿಲ್ಡರÕ ಕಂಪನಿಯವರು ವೇತನ ನೀಡಿಲ್ಲವೆಂದು ಆರೋಪಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

Advertisement

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಕಾರ್ಮಿಕ ಸಂಜಯ್‌ ಶುಕ್ಲ ಮಾತನಾಡಿ, ಕಂಪನಿಯವರು ತಾಲೂಕಿನ ಬೆಂಗಳೂರು-ಬಳ್ಳಾರಿ ಮಾರ್ಗದ 150 ಎ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೈಗೊಂಡಿದ್ದಾರೆ. ಹಲವಾರು ರಾಜ್ಯಗಳಿಂದ 500ಕ್ಕೂ ಹೆಚ್ಚು ಕಾರ್ಮಿಕರನ್ನು ಕೆಲಸಕ್ಕೆ ಕರೆ ತಂದು ಕೆಲಸ ಮಾಡಿಸಿಕೊಂಡಿದ್ದಾರೆ.

ಸುಮಾರು ಮೂರು ತಿಂಗಳಿನಿಂದ ಕೆಲಸ ಮಾಡಿದ ವೇತನ ನೀಡುತ್ತಿಲ್ಲ ಎಂದು ಆರೋಪಿಸಿದರು. ಕಾರ್ಮಿಕರು ತಿಂಗಳು ಪೂರ್ತಿ ಕೆಲಸ ಮಾಡಿದರೂ ಯಾವುದೇ ಕಾರಣ ನೀಡದೆ ತಿಂಗಳಲ್ಲಿ 5-6 ದಿನಗಳ ವೇತನವನ್ನು ಕಡಿತಗೊಳಿಸಿ ಕಾರ್ಮಿಕರಿಗೆ ವಂಚನೆ ಮಾಡಲಾಗುತ್ತಿದೆ. ಕೆಲಸ ಮಾಡಿದ ವೇತನವನ್ನು ಸಕಾಲಕ್ಕೆ ನೀಡದೆ ಸಂಕಷ್ಟಕ್ಕೆ ಸಿಲುಕಿಸಲಾಗುತ್ತಿದೆ. ಕೂಡಲೇ ವೇತನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ಕಾರ್ಮಿಕರಾದ ಬೀರ್‌ಬಲ್‌ ಪಾಲ್‌, ಜಲಂದರ್‌ ಸಿಂಗ್‌ ಮಾತನಾಡಿದರು.

ಪ್ರತಿಭಟನೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾರ್ಮಿಕರಾದ ಅರ್ಜುನ್‌ ಯಾದವ್‌, ಡಿ.ಬಿ.ಎಲ್‌. ವಾರ್ಕರ್‌, ರಾಂಪ್ರಕಾಶ್‌, ಅಹಮ್ಮದ್‌ ಜಾನ್‌, ಸುಗ್ರೀಂಪಾಲ್‌, ಲಲಿತ್‌ ಸಿಂಗ್‌ , ರೂಪಿಲಾಲ್‌, ಅಜಯ್‌, ಅಸಿಂದ್‌ ಅಲಿ, ಮುಖೇಶ್‌ ಕುಮಾರ್‌, ಅಶೋಕ್‌, ರಾಮ್‌ ಜಿಲ್‌ ಸಿಂಗ್‌, ಪವಿತ್ರ ನಾಯ್ಕ, ಜಿತೇಂದ್ರ ಸಾನಿ, ದೀಪಕ್‌ ಸಾನಿ, ಸುನೀಲ್‌ ಸಿಂಗ್‌ ಚೌಹಾಣ್‌, ಧರ್ಮರಾಜ್‌, ರಾಮ್‌ಜೀ ಯಾದವ್‌ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next