Advertisement

ಶಿಸ್ತು-ಸಂಯಮ ಮುಖ್ಯ: ಶಿಮುಶ

03:43 PM Jan 27, 2021 | Team Udayavani |

ಚಿತ್ರದುರ್ಗ: ಗಣರಾಜ್ಯೋತ್ಸವ ಒಂದು ಸುಸಂದರ್ಭ. ಇಲ್ಲಿ ಶಿಸ್ತು ಸಂಯಮ ಮುಖ್ಯ. ಇದು ಒಂದು ದಿನಕ್ಕೆ ಸೀಮಿತವಾಗಬಾರದು. ಸದಾ
ಮುಂದುವರಿಸಿಕೊಂಡು ಹೋದವರು ರಾಷ್ಟ್ರದ ಸತøಜೆಗಳಾಗುತ್ತಾರೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು
ಹೇಳಿದರು.

Advertisement

ಮುರುಘಾ ಮಠದ ಅನುಭವ ಮಂಟಪದ ಮುಂಭಾಗದಲ್ಲಿ ನಡೆದ 72ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮಾನವ ಬದುಕನ್ನು ಆಗಾಗ ನಿರಾಸಕ್ತಿಯು ಸತಾಯಿಸುತ್ತದೆ. ಯಾವ ಲವಲವಿಕೆಯು ಕಂಡು ಬರುವುದಿಲ್ಲ. ಕಾರಣ
ಅದರಿಂದ ಬಿಡಿಸಿಕೊಳ್ಳಬೇಕಾಗುತ್ತದೆ. ಏನನ್ನು ಕಳೆದುಕೊಂಡರೂ ಉತ್ಸಾಹವನ್ನು ಕಳೆದುಕೊಳ್ಳಬಾರದು. ಹಾಗೆಯೇ
ಸಮಾಜದಲ್ಲಿ ನಾವು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಬಸವಣ್ಣ ಮತ್ತು ಇತರ ಶರಣರು ಸಮಾಜದಲ್ಲಿ ಅಸಮಾನತೆ ವಿರುದ್ಧ ಹೋರಾಡಿದರು.

ಅಸ್ಪೃಶ್ಯತೆ ನಿವಾರಿಸಲು ಪ್ರಯತ್ನಿಸಿದರು. ಅವರ ತತ್ವ ಸಿದ್ಧಾಂತಗಳು ನಮಗೆ ಬಹಳ ಮುಖ್ಯ. ನಾವು ಸಮಾಜಕ್ಕೆ ಸದಾ ಸೇವಕರಾಗಿರಬೇಕು.
ಅಧಿಕಾರದ ದರ್ಪ ಇರಬಾರದು. ಸ್ವಾರ್ಥದ ಬದುಕಿಗೆ ಕಡಿವಾಣ ಹಾಕಿ ನಿಸ್ವಾರ್ಥದ ಜತೆ ಸಾಗುತ್ತ ಸಮಾಜದಲ್ಲಿ ಎಲ್ಲರೂ ಸಂತೃಪ್ತ ವ್ಯಕ್ತಿಗಳಾಗಬೇಕು ಎಂದು ತಿಳಿಸಿದರು.

ಎಸ್‌.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ ಹಾಗೂ ಶಾಲಾ ಕಾಲೇಜುಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಎಸ್‌.ಜೆ.ಎಂ. ವಿದ್ಯಾಪೀಠದ ವಿವಿಧ ಶಾಲಾ, ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸಿ ಸೇವಾನಿವೃತ್ತರಾದವರಿಗೆ, ರ್‍ಯಾಂಕ್‌ ವಿಜೇತ ವಿದ್ಯಾರ್ಥಿಗಳಿಗೆ, ಕ್ರೀಡಾ ಸಾಧಕ ಹಾಗೂ ಪಿಎಚ್‌.ಡಿ. ಪದವೀಧರರನ್ನು ಸನ್ಮಾನಿಸಲಾಯಿತು.

ಓದಿ :    ಟ್ರ್ಯಾಕ್ಟರ್‌ ಪರೇಡ್‌ ಬೆಂಬಲಿಸಿ ಪ್ರತಿಭಟನೆ

Advertisement
Advertisement

Udayavani is now on Telegram. Click here to join our channel and stay updated with the latest news.

Next