ಚಿತ್ರದುರ್ಗ: ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ ಶನಿವಾರವೂ ಮುಂದುವರೆದಿದ್ದು, ಮುಷ್ಕರನಿರತ ನೌಕರರಿಗೆ ಸಾರಿಗೆ ಇಲಾಖೆ ವರ್ಗಾವಣೆ ಶಾಕ್ ನೀಡಿದೆ.
ಕರ್ತವ್ಯಕ್ಕೆ ಹಾಜರಾಗುವಂತೆ ನೀಡಿದ ಕರೆ, ಮನವಿ, ನೋಟಿಸ್ ಯಾವುದಕ್ಕೂ ಬಗ್ಗದ ಸಾರಿಗೆ ಇಲಾಖೆ ನೌಕರರಿಗೆ ದಿಢೀರ್ ವರ್ಗಾವಣೆ ಮಾಡಿ ಆದೇಶ ಮಾಡುವ ಮೂಲಕ ಇಕ್ಕಟ್ಟಿಗೆ ಸಿಲುಕಿಸಲಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಿತ್ರದುರ್ಗ ವಿಭಾಗದಿಂದ 18 ನೌಕರರನ್ನು ರಾಮನಗರ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ. ಇದರಲ್ಲಿ 15 ಮಂದಿ ಚಾಲಕ ಹಾಗೂ ನಿರ್ವಾಹಕರು. ಉಳಿದ ಮೂರು ಜನ ಮೆಕ್ಯಾನಿಕ್‌ಗಳಾಗಿದ್ದಾರೆ. ಬೆಂಗಳೂರಿನಿಂದ ವರ್ಗಾವಣೆ ಆದೇಶ ಬಂದಿದ್ದು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿರುವ ಸೂಚನಾ ಫಲಕದಲ್ಲಿ ಪ್ರದರ್ಶಿಸಲಾಗಿದೆ. ಇದರೊಟ್ಟಿಗೆ ಪ್ರೊಬೆಷನರಿಯಾಗಿ ತರಬೇತಿ ಪಡೆಯುತ್ತಿರುವ ಸಿಬ್ಬಂದಿಗಳಿಗೆ ಕರ್ತವ್ಯಕ್ಕೆ ಮರಳುವಂತೆ ನೋಟಿಸ್ ನೀಡಲಾಗಿದೆ.
ಪ್ರೊಬೆಷನರಿ ಹಂತದಲ್ಲಿ ಮುಷ್ಕರ ನಡೆಸುವುದರಿಂದ ನಿಮಗೆ ತೊಂದರೆಯಾಗುತ್ತದೆ ಎಂದು ಎಚ್ಚರಿಸಲಾಗಿದೆ. 18 ಬಸ್ ಸಂಚಾರ: ಈ ನಡುವೆ ಚಿತ್ರದುರ್ಗ ವಿಭಾಗದ ವಿವಿಧ ಮಾರ್ಗಗಳಿಗೆ ಸೇರಿದ 18 ಬಸ್‌ಗಳು ಶನಿವಾರ ಪೊಲೀಸ್ ಎಸ್ಕಾರ್ಟ್ ಭದ್ರತೆಯಲ್ಲಿ ಸಂಚಾರ ನಡೆಸಿವೆ. ಒಟ್ಟು 25 ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಕೆಎಸ್ ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿ ಕಾರಿ ವಿಜಯಕುಮಾರ್ ಮಾಹಿತಿ ನೀಡಿದ್ದಾರೆ.
ಖಾಸಗಿ ಬಸ್ ನಿಲ್ದಾಣದಲ್ಲಿ ಜನವೋ ಜನ: ಕೆಎಸ್ ಆರ್‌ಟಿಸಿ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಖಾಸಗಿ ಬಸ್ ಸಂಚಾರ ಜೋರಾಗಿದೆ. ಇತ್ತ ಸರ್ಕಾರಿ ಬಸ್ ನಿಲ್ದಾಣ ಜನರಲ್ಲದೆಬಣಗುಡುತ್ತಿದ್ದರೆ, ಖಾಸಗಿ ಬಸ್ ನಿಲ್ದಾಣ ಜನರಿಂದ ತುಂಬಿ ತುಳುಕುತ್ತಿದೆ.
ಯುಗಾದಿ ಹಬ್ಬದ ಸಂದರ್ಭವಾಗಿರುವುದರಿಂದ ಪ್ರಯಾಣಿಕರು ಊರುಗಳಿಗೆ ತೆರಳಲು, ಖರೀ ದಿ ಮತ್ತಿತರೆ ಕಾರಣಕ್ಕೆ ಒಂದು ಕಡೆಯಿಂದ ಮತ್ತೂಂದು ಕಡೆಗೆ ಓಡಾಡುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಖಾಸಗಿ ಬಸ್‌ಗಳನ್ನು ಸಾರ್ವಜನಿಕರು ಅವಲಂಬಿಸಿದ್ದಾರೆ.