Advertisement

‘ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ’ ಅಭಿಯಾನಕ್ಕೆ ಚಾಲನೆ

06:35 PM Apr 01, 2021 | Team Udayavani |

ಚಿತ್ರದುರ್ಗ: ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿ ಆವರಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿ ಕಾರದ ಕನ್ನಡ ಕಾಯಕ ವರ್ಷಾಚರಣೆ ಅಂಗವಾಗಿ “ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ’ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

Advertisement

ಕರ್ನಾಟಕದ ಜನ ಕನ್ನಡದ ಪತ್ರಿಕೆ, ಟಿವಿ ಮತ್ತು ರೇಡಿಯೋ ಮಾಧ್ಯಮಗಳನ್ನು ವಸ್ತುನಿಷ್ಠ ಮಾಹಿತಿಗಾಗಿ ಅವಲಂಬಿಸಿದ್ದಾರೆ. ಅಷ್ಟೇ ಮುಖ್ಯವಾಗಿ ತಮ್ಮ ಕನ್ನಡ ಓದು ಬರಹ ಕೌಶಲ್ಯವನ್ನು ಸುಧಾರಿಸಿಕೊಳ್ಳಲು ಕನ್ನಡಿಗರು ಕನ್ನಡ ಮಾಧ್ಯಮಗಳನ್ನು ಅನುಸರಿಸುತ್ತಾರೆ. ಜನಸಾಮಾನ್ಯರು-ಭಾಷೆ-ಮಾಧ್ಯಮ ಪರಸ್ಪರ ಬೆಸುಗೆಯಾಗಿ, ಬದುಕಿನ ಕೊಂಡಿಯಾಗಿ ನಾಡನ್ನು ಸಮೃದ್ಧಗೊಳಿಸಬೇಕಿದೆ. ಅದಕ್ಕಾಗಿ ಮಾಧ್ಯಮಗಳ ಸಹಕಾರ ಬಹಳ ಮುಖ್ಯವಾಗಿದೆ ಎಂದು ಮನವಿ ಮಾಡಲಾಯಿತು.

ಮಕ್ಕಳಿಂದ ವಯೋವೃದ್ಧರವರೆಗೆ ಒಟ್ಟಾಗಿ ನೋಡುವ, ಓದುವ ಟಿವಿ ಕಾರ್ಯಕ್ರಮ ಮತ್ತು ಪತ್ರಿಕೆಗಳಲ್ಲಿ ಅಗತ್ಯತೆ ಇಲ್ಲದೆ ಇಂಗ್ಲಿಷ್‌ ಬಳಸದೆ, ಕೆಟ್ಟ ಅಭಿರುಚಿಯ ಪದಪುಂಜಗಳನ್ನು ಬಳಸದೆ, ಗ್ರಾಹಕರನ್ನು ಕೀಳಾಗಿ ಕಾಣುವ ರೀತಿಯ ಶೈಲಿಯನ್ನು ಬಳಸದೆ ಸಿರಿಗನ್ನಡದ ಘನತೆಯನ್ನು ಉಳಿಸಬೇಕು. ಗ್ರಾಹಕರು ನಿಮ್ಮನ್ನು ಅನುಕರಿಸಿ ತಮ್ಮ ಕನ್ನಡವನ್ನು ಸುಧಾರಿಸಿಕೊಳ್ಳುವ ಅವಕಾಶ ಕಲ್ಪಿಸಿ ಕನ್ನಡ ಜಾಗೃತಿಯ ಆಶಯಕ್ಕೆ ಸ್ಪಂದಿಸಬೇಕು ಎಂದು ಕೋರಲಾಯಿತು.

ಕನ್ನಡ ಪತ್ರಿಕೋದ್ಯಮದಲ್ಲಿ ಛಾಪು ಮೂಡಿಸಿರುವ ಆರ್‌. ಕಲ್ಯಾಣಮ್ಮ ಅವರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಮಾಧ್ಯಮಗಳಲ್ಲಿ ಸರಿಗನ್ನಡ ಬಳಕೆ ಕುರಿತಂತೆ ಕನ್ನಡ ಅಭಿವೃದ್ಧಿ ಪ್ರಾ ಧಿಕಾರದ ಅಭಿಯಾನ ಹಮ್ಮಿಕೊಂಡಿದೆ. ಅದರ ನಿಮಿತ್ತ ಜಿಲ್ಲಾ ವಾರ್ತಾಧಿಕಾರಿ ಬಿ. ಧನಂಜಯಪ್ಪ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಲಾಯಿತು. ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ದಯಾ ಪುತ್ತೂರ್ಕರ್‌, ಯೋಗೀಶ್‌ ಸಹ್ಯಾದ್ರಿ, ಟಿ. ಶಿವರುದ್ರಪ್ಪ ಪಂಡ್ರಳ್ಳಿ, ಮಹೇಶ್ವರಿ ಚಂದ್ರಶೇಖರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next