ಚಿತ್ರದುರ್ಗ: ಒಳಚರಂಡಿ ನಿರ್ವಹಣೆಗಾಗಿ ನಗರಸಭೆ ಖರೀ ದಿಸಲು ಉದ್ದೇಶಿಸಿದ್ದ ಜೆಟ್ಟಿಂಗ್ ಮಿಷನ್ ದರ ಹೆಚ್ಚಾಗಿದೆ. ಹೀಗಾಗಿ ದರ ಕಡಿಮೆ ಮಾಡಲು ಮತ್ತೂಮ್ಮೆ ಮಾತನಾಡಿ ಒಪ್ಪದಿದ್ದರೆ ಮತ್ತೆ ಟೆಂಡರ್ ಕರೆಯಲು ನಗರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಸು ದೀರ್ಘ ಚರ್ಚೆ ನಡೆಯಿತು. ನಗರಸಭೆ ವ್ಯಾಪ್ತಿಯ ಒಳಚರಂಡಿಗಳ ನಿರ್ವಹಣೆಗೆ ಅಗತ್ಯವಿರುವ ಜೆಟ್ಟಿಂಗ್ ಮಿಷನ್ ಖರೀ ದಿಸಲು ಬೆಂಗಳೂರಿನ ಏಜೆನ್ಸಿಯೊಂದು 61.36 ಲಕ್ಷ ರೂ.ಗಳಿಗೆ ಶೇ. 4 ರಷ್ಟು ಹೆಚ್ಚು ಮಾಡಿ ಅನುಮೋದಿಸಲು ನಗರಸಭೆ ವ್ಯವಸ್ಥಾಪಕಿ ಮಂಜುಳಾ ವಿಷಯ ಮಂಡಿಸಿದರು.
ಇದಕ್ಕೆ ಆಕ್ಷೇಪಿಸಿದ ಸದಸ್ಯ ಗೊಪ್ಪೆ ಮಂಜುನಾಥ್, ದೇಶದಲ್ಲಿಯೇ ಸ್ವತ್ಛತೆಗೆ ಮೈಸೂರು ಮೊದಲ ಸ್ಥಾನದಲ್ಲಿದೆ. ಅಲ್ಲಿ ಖರೀದಿ ಸಿರುವ ಜೆಟ್ಟಿಂಗ್ ಮಿಷನ್ ಬೆಲೆ 54 ಲಕ್ಷ ರೂ. ಆದರೆ ಇಲ್ಲಿ ಯಾಕೆ 61.36 ಲಕ್ಷ ರೂ. ಎಂದು ಪ್ರಶ್ನಿಸಿದರು. ತಾಂತ್ರಿಕ ಇಂಜಿನಿಯರ್ ಶಿವಕುಮಾರ್ ಯಂತ್ರದ ಬಗ್ಗೆ ಸಮರ್ಥನೆ ನೀಡಲು ಮುಂದಾದರೂ ಸದಸ್ಯರು ಒಪ್ಪಲಿಲ್ಲ. ಕೊನೆಗೆ ಏಜೆನ್ಸಿಯವರನ್ನು ಕರೆದು ಚರ್ಚಿಸಬೇಕು. ಶೇ. 4 ರಷ್ಟು ಹೆಚ್ಚುವರಿಯನ್ನು ರದ್ದು ಮಾಡುವುದಾದರೆ ಖರೀ ದಿಸಬೇಕು. ಇಲ್ಲದಿದ್ದರೆ ಮತ್ತೂಮ್ಮೆ ಟೆಂಡರ್ ಕರೆಯಲು ಎಂದು ನಿರ್ಧರಿಸಲಾಯಿತು. ನಿಗ ದಿತ ಸ್ಥಳದಲ್ಲೇ ವ್ಯಾಪಾರ ಮಾಡಲಿ: ಏಪ್ರಿಲ್ 1 ರಿಂದ ಒಂದು ವರ್ಷ ನಗರದಲ್ಲಿ ವ್ಯಾಪಾರ ನಡೆಸುವ ನೆಲದ ಸುಂಕ ವಸೂಲಾತಿಗೆ ಸಂಬಂಧಿ ಸಿದಂತೆ ಬಹಿರಂಗ ಹರಾಜು ಮಾಡಲಾಗಿದೆ. ನಗರ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಸ್ಥರಿಂದ ದಿನವಹಿ ಸುಂಕ ವಸೂಲಿ 37.55 ಲಕ್ಷ ರೂ.ಗೆ ಹರಾಜು ಮಾಡಲಾಗಿದೆ. ಇದು ಈ ಹಿಂದಿನ ವರ್ಷಕ್ಕಿಂತ 10 ಲಕ್ಷ ರೂ. ಹೆಚ್ಚಾಗಿದೆ ಎಂದು ಪೌರಾಯುಕ್ತ ಹನುಮಂತರಾಜು ಸಭೆಗೆ ಮಾಹಿತಿ ನೀಡಿದರು.
ಖಾಸಗಿ ಬಸ್ ನಿಲ್ದಾಣದಲ್ಲಿ ಸುಂಕ ವಸೂಲು ಮಾಡಲು 5.50 ಲಕ್ಷ ರೂ. ಹಾಗೂ ಕಸಾಯಿಖಾನೆ, ಕುರಿ, ಮೇಕೆ ಕತ್ತರಿಸಿ ಮಾರಾಟ ಮಾಡುವವರಿಂದ ಸುಂಕ ಸಂಗ್ರಹಿಸಲು 1.20 ಲಕ್ಷ ರೂ.ಗೆ ಹರಾಜು ಮಾಡಲಾಗಿದ್ದು, ಎಲ್ಲರೂ ಪೂರ್ತಿ ಹಣ ಪಾವತಿಸಿದ್ದಾರೆ ಎಂದು ತಿಳಿಸಿದರು.
ಇದಕ್ಕೆ ಎಲ್ಲ ಸದಸ್ಯರು ಅನುಮೋದನೆ ನೀಡಿದರು. ಈ ವೇಳೆ ಎದ್ದು ನಿಂತ ಹಿರಿಯ ಸದಸ್ಯ ಮಹಮ್ಮದ್ ಅಹಮ್ಮದ್ ಪಾಷಾ, ಸುಂಕ ವಸೂಲಿಗೆ ಕರಪತ್ರದಲ್ಲಿ ನಿಬಂಧನೆಗಳನ್ನು ಹಾಕಿದ್ದೀರಾ, ವ್ಯಾಪಾರ ಮಾಡುವವರು ಕೂಡ ನಿಗ ದಿತ ಸ್ಥಳಗಳಲ್ಲೇ ಮಾಡಬೇಕು. ಆ ಜಾಗ ಬಿಟ್ಟು ಬೇರೆಡೆ ಮಾಡಿದರೆ ಆಯುಕ್ತರು ತೆರವುಗೊಳಿಸಬೇಕು. ಕಳೆದ 10 ವರ್ಷದಿಂದ ಈ ವಿಚಾರದಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಆಗುತ್ತಿದೆ. ಈ ಬಗ್ಗೆ ಎಲ್ಲರಿಗೂ ಸೂಚನೆ ನೀಡಿ ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತರು, ಹರಾಜು ವೇಳೆಯಲ್ಲೇ ಚೆಕ್‌ಬಂದಿ ನೀಡಲಾಗಿದೆ. ಅದರ ಪ್ರಕಾರವೇ ವ್ಯಾಪಾರ ಹಾಗೂ ಸುಂಕ ವಸೂಲು ಮಾಡಲು ಸೂಚಿಸಲಾಗುವುದು ಎಂದರು. ಸಂತೆಹೊಂಡದ ರಸ್ತೆ ಹಾಗೂ ಮೆದೇಹಳ್ಳಿ ರಸ್ತೆಗಳಲ್ಲಿ ಲಾರಿ ಮತ್ತಿತರೆ ಭಾರೀ ವಾಹನಗಳಿಂದ ಸಂಚಾರ ದಟ್ಟಣೆ ಆಗುತ್ತಿದೆ. ದೊಡ್ಡ ಗಾತ್ರದ ಲಾರಿಗಳು ಆ ರಸ್ತೆಯಲ್ಲಿ ಬಾರದಂತೆ ನಿಗಾ ವಹಿಸಿ ಎಂದು ಸದಸ್ಯರು ತಿಳಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಶ್ವೇತಾ ವೀರೇಶ್ ಸೇರಿದಂತೆ ಹಲವು ಸದಸ್ಯರು, ಅ ಧಿಕಾರಿಗಳು ಭಾಗವಹಿಸಿದ್ದರು.
ಓದಿ :
ಪಂಚರಾಜ್ಯ ಚುನಾವಣೆ : ಫೇಸ್ ಬುಕ್ ಜಾಹಿರಾತು : ಅತಿ ಹೆಚ್ಚು ಖರ್ಚು ಮಾಡಿದ ಪಕ್ಷ ಯಾವುದು ?