ಬಿ.ಶ್ರೀರಾಮುಲು ಹೇಳಿದರು.
Advertisement
ಜಿಲ್ಲಾಡಳಿತದಿಂದ ಪೊಲೀಸ್ ಕವಾಯತುಮೈದಾನದಲ್ಲಿ ಮಂಗಳವಾರ ನಡೆದ 72ನೇ ಭಾರತಗಣರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜಾರೋಹಣನೆರವೇರಿಸಿ ಮಾತನಾಡಿದ ಅವರು, ಯುವಕರಲ್ಲಿ ದೇಶಪ್ರೇಮ ಬೆಳೆಸಲು, ದೇಶವನ್ನು ಅಭಿವೃದ್ಧಿ ಪಥದಲ್ಲಿಒಯ್ಯಲು, ಸಂವಿಧಾನದ ಆಶೋತ್ತರಗಳ ಆಚರಣೆನಿತ್ಯೋತ್ಸವ ಆಗಬೇಕು. ಗಣರಾಜ್ಯೋತ್ಸವ ಜನರಉತ್ಸವ ಇದು ಒಂದು ದಿನಕ್ಕೆ ಸೀಮಿತವಾಗಬಾರದುಎಂದರು.
ಸಂವಿಧಾನದ ಬಲದಿಂದಲೇ ಇಂದು ನಮ್ಮ ದೇಶಜಗತ್ತಿನ ಸುಭದ್ರ ಆರ್ಥಿಕತೆಗಳಲ್ಲಿ ಒಂದಾಗಿದೆ.ಸರ್ಕಾರದ ಬಾಗಿಲಿಗೆ ಜನಸಾಮಾನ್ಯರು ಬರಬಾರದು.ಜನ ಸಾಮಾನ್ಯರ ಮನೆ ಬಾಗಿಲಿಗೆ ಸರ್ಕಾರಹೋಗಬೇಕು. ಪ್ರತಿ ಹಳ್ಳಿಯು ಅಭಿವೃದ್ಧಿಯ ಕತೆಹೇಳಬೇಕು ಎಂಬುದು ಸಂವಿಧಾನದ ಆಶಯವಾಗಿದೆಎಂದು ತಿಳಿಸಿದರು.
ಬಾಹ್ಯಾಕಾಶ ಸಂಸ್ಥೆ ಇಸ್ರೋ, ಡಿಆರ್‌ಡಿಒ, ಬಾರ್ಕ್‌ಹಾಗೂ ಇಸ್ರೋ ಕೇಂದ್ರಗಳ ನಂತರ ಜಿಲ್ಲೆಯಲ್ಲಿಗಗನಯಾತ್ರಿಗಳ ತರಬೇತಿ ಕೇಂದ್ರ ಆರಂಭವಾಗಲಿದೆ.ಇದು ಈ ಭಾಗದ ಯುವಕರಿಗೆ ಸ್ಪೂರ್ತಿ ತುಂಬಲಿದೆ.ಜೆನೆರಿಕ್ ಆಧಾರ್ ಅನ್ನೋ ಫಾರ್ಮ್ ಸ್ಟಾಟ್‌ಅಪ್ ರಾಜ್ಯದ ತನ್ನ ಮೊದಲ ಅಗ್ಗದ ದರ ಔಷಧಮಳಿಗೆಯನ್ನು ಜಿಲ್ಲೆಯಲ್ಲಿ ಆರಂಭಿಸಿದೆ ಎಂದರು. ಸಂವಿಧಾನದ ಆಶಯಕ್ಕೆ ರಾಜ್ಯ ಸರ್ಕಾರವುಬದ್ಧವಾಗಿದ್ದು, ಸಮಾಜ ಕಲ್ಯಾಣ ಸೇರಿದಂತೆಹಲವು ಯೋಜನೆಗಳನ್ನು ರೂಪಿಸುತ್ತಿದೆ. ಎಸ್‌ಸಿ,
ಎಸ್‌ಟಿ ಸಮುದಾಯಗಳ ಅಭಿವೃದ್ಧಿಗಾಗಿ ಎಸ್‌ಸಿಪಿ,ಟಿಎಸ್‌ಪಿ ಅನುದಾನವನ್ನು ಸುಮಾರು 25 ಸಾವಿರಕೋಟಿ ರೂ. ಮೀಸಲಿಡಲಾಗಿದೆ. ಇದರ ಸಂಪೂರ್ಣಬಳಕೆಗೆ ಅದ್ಯತೆ ನೀಡಲಾಗಿದೆ. ಸಮಾಜ ಕಲ್ಯಾಣಇಲಾಖೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ 4 ಸಾವಿರದ500 ಕೋಟಿ ಅನುದಾನ ಒದಗಿಸಲಾಗಿದೆ ಎಂದರು.
Related Articles
Advertisement
ಗಣರಾಜ್ಯೋತ್ಸವದಲ್ಲಿ ಸಶಸ್ತ್ರ ಮೀಸಲು ಪಡೆ,ನಾಗರಿಕ ಪೊಲೀಸ್ ತುಕುಡಿ, ಗೃಹರಕ್ಷಕ ದಳ,ಅಬಕಾರಿ, ಅರಣ್ಯ ಇಲಾಖೆ ತುಕುಡಿ, ಎನ್ಸಿಸಿತುಕುಡಿ ಹಾಗೂ ವಿದ್ಯಾವಿಕಾಸ ಬಾಲಕಿಯರಪ್ರೌಢಶಾಲೆ ಮಕ್ಕಳಿಂದ ಆಕರ್ಷಕ ಪಥ ಸಂಚಲನನಡೆಯಿತು.
ಇದೇ ವೇಳೆ 2020-21ನೇ ಸಾಲಿನ ಹಿಂಗಾರು ಬೆಳೆಸಮೀಕ್ಷೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದಖಾಸಗಿ ನಿವಾಸಿಗಳಾದ (ಪಿ.ಆರ್) ಚಿತ್ರದುರ್ಗದಟಿ.ಪ್ರಭು ಕುಮಾರ್, ಹೊಳಲ್ಕೆರೆಯ ವಿಜಯಜೆ.ಡಿ, ಹೊಸದುರ್ಗದ ಯೋಗೇಶ್ ಎಚ್.ಪಿ,ಚಳ್ಳಕೆರೆಯ ಸಿ.ತಿಪ್ಪೇಸ್ವಾಮಿ, ಹಿರಿಯೂರಿನಲಕ್ಷ್ಮಪ್ಪ, ಮೊಳಕಾಲ್ಮೂರಿನ ಸುರೇಶ್ ಅವರನ್ನುಗೌರವಿಸಲಾಯಿತು. ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕಯೋಜನೆಯಡಿ ಉತ್ತಮ ಸೇವೆ ಸಲ್ಲಿಸಿರುವ ಜಿಲ್ಲಾಆರೋಗ್ಯಾಧಿ ಕಾರಿ ಡಾ.ಸಿ.ಎಲ್.ಫಾಲಾಕ್ಷ, ಜಿಲ್ಲಾಶಸ್ತ್ರಚಿಕಿತ್ಸಕ ಡಾ.ಬಸವರಾಜ್, ಚಳ್ಳಕೆರೆ ಸಾರ್ವಜನಿಕಆಸ್ಪತ್ರೆಯ ವೈದ್ಯಾ ಧಿಕಾರಿ ಡಾ.ವೆಂಕಟೇಶ್ ಹಾಗೂಬಸವೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಡಾ.ಪಾಲಾಕ್ಷಯ್ಯ ಅವರನ್ನು ಗೌರವಿಸಲಾಯಿತು.ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಜಿಪಂ ಅಧ್ಯಕ್ಷೆಶಶಿಕಲಾ ಸುರೇಶ್‌ಬಾಬು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬದ್ರಿನಾಥ್, ನಗರಸಭೆ ಅಧ್ಯಕ್ಷೆತಿಪ್ಪಮ್ಮ, ಜಿಲ್ಲಾ ಧಿಕಾರಿ ಕವಿತಾ ಎಸ್.ಮನ್ನಿಕೇರಿ,ಜಿಪಂ ಸಿಇಒ ಡಾ.ಕೆ.ನಂದಿನಿದೇವಿ, ಎಸ್‌ಪಿ ಜಿ.ರಾ ಧಿಕಾ, ಅಪರ ಜಿಲ್ಲಾ ಧಿಕಾರಿ ಬಾಲಕೃಷ್ಣ, ನಗರಸಭೆಆಯುಕ್ತ ಜೆ.ಟಿ.ಹನುಮಂತರಾಜು ಮತ್ತಿತರರು
ಉಪಸ್ಥಿತರಿದ್ದರು. ಓದಿ : ಖಾತೆ ಬದಲಾವಣೆ ಗೊಂದಲ ಇದ್ದರೂ ಸರ್ಕಾರಕ್ಕೆ ತೊಂದರೆ ಇಲ್ಲ: ಡಿಸಿಎಂ