Advertisement

ಆರೋಗ್ಯ ರಕ್ಷಣೆಗೆ ಗಮನ ಕೊಡಿ: ತಿಪ್ಪಾರೆಡ್ಡಿ

04:03 PM Feb 25, 2021 | Team Udayavani |

ಚಿತ್ರದುರ್ಗ: ಕೋವಿಡ್‌ 19 ವೈರಾಣು ಇನ್ನೂ ಹೋಗಿಲ್ಲ. ಅಕ್ಕ ಪಕ್ಕದ ರಾಜ್ಯಗಳಲ್ಲಿ ಮತ್ತೆ ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ಆರೋಗ್ಯದ ಬಗ್ಗೆ
ಎಲ್ಲರೂ ಕಾಳಜಿ ವಹಿಸಬೇಕು ಎಂದು ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಹೇಳಿದರು.

Advertisement

ತಾಲೂಕಿನ ಕ್ಯಾಸಾಪುರ ಗ್ರಾಮದಲ್ಲಿ ಬುಧವಾರ 90 ಲಕ್ಷ ರೂ. ವೆಚ್ಚದ ನೂತನ ಆಸ್ಪತ್ರೆಯ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ
ಅವರು ಮಾತನಾಡಿದರು. ಕೆಲ ದಿನಗಳವರೆಗೆ ನಿಯಂತ್ರಣದಲ್ಲಿದ್ದ ಕೊರೊನಾ ಈಗ ಮತ್ತೆ ಹೆಚ್ಚಾಗಿದೆ. ನೆರೆ ರಾಜ್ಯ, ನೆರೆ ದೇಶಗಳಲ್ಲಿ ಇದರ
ತೀವ್ರತೆ ಹೆಚ್ಚಾಗಿದ್ದು, ನಾವು ಇದನ್ನು ಯಾವ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಬೇಕು.
ಕಡ್ಡಾಯವಾಗಿ ಸಾಮಾಜಿಕ ಅಂತರ, ಮಾಸ್ಕ್ ಬಳಸಿ, ಹೊರಗೆ ಹೋಗಿ ಬಂದಾಗ ಸ್ಯಾನಿಟೆ„ಸರ್‌ ಬಳಸಿ ಕೊರೊನಾದಿಂದ ದೂರವಿರಬಹುದು
ಎಂದು ಸಲಹೆ ನೀಡಿದರು.

ಕ್ಯಾಸಾಪುರದಲ್ಲಿ ಆಸ್ಪತ್ರೆ ಕಟ್ಟಡಕ್ಕಾಗಿ ಡಿಎಂಎಫ್‌ ಅನುದಾನದಿಂದ 90 ಲಕ್ಷ ರೂ.ಗಳನ್ನು ನೀಡಲಾಗಿದೆ. ಸುತ್ತಾ-ಮುತ್ತಲಿನ 22 ಗ್ರಾಮಗಳು
ಇದರ ವ್ಯಾಪ್ತಿಗೆ ಬರಲಿವೆ. ಚುನಾವಣೆಯಲ್ಲಿ ಮಾತ್ರ ಪಕ್ಷ, ರಾಜಕೀಯ. ನಂತರ ಅಭಿವೃದ್ಧಿಗೆ ಮಾತ್ರ ನನ್ನ ಆಧ್ಯತೆ. ಇಲ್ಲಿ ರಾಜಕೀಯ
ಬರಬಾರದು. ಶಾಸಕನಾಗಿ ನಮ್ಮ ಪಾಲಿನ ಕೆಲಸವನ್ನು ಮಾಡುತ್ತೇನೆ. ಪಂಚಾಯಿತಿಯ ಚುನಾಯಿತ ಪ್ರತಿನಿ ಗಳಾಗಿ ನಿಮ್ಮ ಪಾಲಿನ ಕೆಲಸ
ಮಾಡಿ. ಇಂಥವರು ಮತ ಹಾಕಿಲ್ಲ ಎಂದು ಭೇದ ಭಾವ ಮಾಡಬೇಡಿ ಎಂದು ಚುನಾಯಿತ ಪ್ರತಿನಿಧಿಗಳಿಗೆ ಕಿವಿಮಾತು ಹೇಳಿದರು. ಗ್ರಾಮದ
ಕಪಳರಂಗಸ್ವಾಮಿಯ ದೇವಾಲಯಕ್ಕೆ 5 ಲಕ್ಷ ರೂ.ಗಳನ್ನು ನೀಡಿರುವುದಾಗಿ ತಿಳಿಸಿದರು.

ತಾಪಂ ಸದಸ್ಯ ಕರಿಯಪ್ಪ, ಎಪಿಎಂಸಿ ಸದಸ್ಯ ಲಕ್ಷ್ಮೀಸಾಗರ ರಾಜಣ್ಣ, ಲಕ್ಷ್ಮೀಸಾಗರ ಗ್ರಾಪಂ ಅಧಕ್ಷೆ ಸಾವಿತ್ರಮ್ಮ, ಉಪಾಧ್ಯಕ್ಷ ಸುರೇಶ್‌,
ಸದಸ್ಯರಾದ ರಮೇಶ್‌, ವಿಜಯಲಕ್ಷ್ಮೀ, ತಿಮ್ಮಣ್ಣ. ಮಂಜುನಾಥ್‌, ಸುರೇಶ್‌, ಪವಿತ್ರ, ಮಾಜಿ ಸದಸ್ಯ ತಿಪ್ಪೇಸ್ವಾಮಿ ಮುಖಂಡರಾದ ವೀರಭದ್ರಪ್ಪ, ರಂಗನಾಥಪ್ಪ, ಸ್ವಾಮಿ ವೀರಣ್ಣ, ಶರಣಪ್ಪ ಮತ್ತಿತರರು ಇದ್ದರು.

ಓದಿ : ಲಾರಿ-ಬಸ್ ಮುಖಾಮುಖಿ ಢಿಕ್ಕಿ: ಬಸ್ ಚಾಲಕ, ನಿರ್ವಾಹಕ ಸೇರಿ 7 ಜನರಿಗೆ ಗಾಯ

Advertisement
Advertisement

Udayavani is now on Telegram. Click here to join our channel and stay updated with the latest news.

Next